AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ತೊರೆಯುವಂತೆ ನೊಟೀಸ್​​: ನಟ ಇಮ್ರಾನ್ ಖಾನ್​ಗೆ ತಾತ್ಕಾಲಿಕ ನೆಮ್ಮದಿ

ನಟ ಇಮ್ರಾನ್ ಖಾನ್ ಅವರನ್ನು ದೇಶ ಬಿಟ್ಟು ಹೊರಡುವಂತೆ ಎಫ್​​ಆರ್​​ಆರ್​​ಓ (ಫಾರಿನ್ ರೀಜಿನಲ್ ರಿಜಿಸ್ಟ್ರೇಷನ್ ಆಫಿಸ್) ನೊಟೀಸ್ ನೀಡಿತ್ತು. ನವೆಂಬರ್ 28ಕ್ಕೆ ಕೊನೆಯ ದಿನ ನೀಡಲಾಗಿತ್ತು. ಆದರೆ ಎಫ್​​ಆರ್​​ಆರ್​​ಓ ನೀಡಿದ್ದ ನೊಟೀಸ್ ಅನ್ನು ಇಮ್ರಾನ್ ಖಾನ್ ಪ್ರಶ್ನೆ ಮಾಡಿ ಬಾಂಬೆ ಹೈಕೋರ್ಟ್​​ಗೆ ನೊಟೀಸ್ ಸಲ್ಲಿಸಿದ್ದರು. ಇಂದು (ಅಕ್ಟೋಬರ್ 27) ನಟನ ಅರ್ಜಿ ವಿಚಾರಣೆ ನಡೆಸಲಾಗಿದ್ದು, ಇಮ್ರಾನ್ ಖಾನ್ ಅವರಿಗೆ ತಾತ್ಕಾಲಿಕ ನೆಮ್ಮದಿ ದೊರೆತಂತಾಗಿದೆ.

ಭಾರತ ತೊರೆಯುವಂತೆ ನೊಟೀಸ್​​: ನಟ ಇಮ್ರಾನ್ ಖಾನ್​ಗೆ ತಾತ್ಕಾಲಿಕ ನೆಮ್ಮದಿ
Imran Khan
ಮಂಜುನಾಥ ಸಿ.
|

Updated on:Oct 27, 2026 | 4:23 PM

Share

ಮುಖ್ಯಾಂಶಗಳು

  • ಭಾರತ ತೊರೆಯುವಂತೆ ನಟ ಇಮ್ರಾನ್ ಖಾನ್​ಗೆ ನೊಟೀಸ್
  • ಬಾಂಬೆ ಹೈಕೋರ್ಟ್​​ ಮೆಟ್ಟಿಲೇರಿದ್ದ ನಟ ಇಮ್ರಾನ್ ಖಾನ್
  • ಇಮ್ರಾನ್ ಖಾನ್​ಗೆ ತಾತ್ಕಾಲಿಕ ನೆಮ್ಮದಿ

ಎಸ್​​ಐಆರ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್ ಅವರನ್ನು ದೇಶ ಬಿಟ್ಟು ಹೊರಡುವಂತೆ ಎಫ್​​ಆರ್​​ಆರ್​​ಓ (ಫಾರಿನ್ ರೀಜಿನಲ್ ರಿಜಿಸ್ಟ್ರೇಷನ್ ಆಫಿಸ್) ನೊಟೀಸ್ ನೀಡಿತ್ತು. ನವೆಂಬರ್ 28ಕ್ಕೆ ಕೊನೆಯ ದಿನ ನೀಡಲಾಗಿತ್ತು. ಆದರೆ ಎಫ್​​ಆರ್​​ಆರ್​​ಓ ನೀಡಿದ್ದ ನೊಟೀಸ್ ಅನ್ನು ಇಮ್ರಾನ್ ಖಾನ್ ಪ್ರಶ್ನೆ ಮಾಡಿ ಬಾಂಬೆ ಹೈಕೋರ್ಟ್​​ಗೆ ನೊಟೀಸ್ ಸಲ್ಲಿಸಿದ್ದರು. ಇಂದು (ಅಕ್ಟೋಬರ್ 27) ನಟನ ಅರ್ಜಿ ವಿಚಾರಣೆ ನಡೆಸಲಾಗಿದ್ದು, ಇಮ್ರಾನ್ ಖಾನ್ ಅವರಿಗೆ ತಾತ್ಕಾಲಿಕ ನೆಮ್ಮದಿ ದೊರೆತಂತಾಗಿದೆ.

ಇಂದು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನವೆಂಬರ್ 2 ಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. ಆದರೆ ಅಲ್ಲಿಯವರೆಗೆ ಇಮ್ರಾನ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವಂತಿಲ್ಲ ಎಂದಿರುವ ನ್ಯಾಯಾಲಯ, ‘ಅಲ್ಲಿಯವರೆಗೆ ಏನೂ ಆಗುವುದಿಲ್ಲ’ ಎಂದು ವಾಕ್ ಭರವಸೆಯನ್ನು ಸಹ ನಟನಿಗೆ ನೀಡಿದೆ. ನವೆಂಬರ್ 2ರ ವಿಚಾರಣೆ ಹಾಗೂ ಮುಂದಿನ ಆದೇಶದ ವರೆಗೆ ಇಮ್ರಾನ್ ಖಾನ್ ಅವರು ಭಾರತದಲ್ಲಿಯೇ ನೆಲೆಸಬಹುದಾಗಿದ್ದು, ಅವರ ವಿರುದ್ಧ ಕೇಂದ್ರ ಸರ್ಕಾರವು ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ.

ಇಮ್ರಾನ್ ಖಾನ್ ಅವರು ಅಕ್ಟೋಬರ್ 10ರಂದು ಮುಂಬೈನಲ್ಲಿ ನಡೆದ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಇಮ್ರಾನ್ ಖಾನ್ ಅವರ ಪಾರ್ಟನರ್ ಅವರನ್ನು ಪೊಲೀಸರು ವಶಕ್ಕೆ ಸಹ ಪಡೆದಿದ್ದರು. ಅಕ್ಟೋಬರ್ 15 ರಂದು ಇಮ್ರಾನ್ ಖಾನ್ ಅವರಿಗೆ ದೇಶ ಬಿಟ್ಟು ತೆರಳುವಂತೆ ಎಫ್​​ಆರ್​​ಆರ್​​ಓ ನೊಟೀಸ್ ನೀಡಿತ್ತು.

ಇದನ್ನೂ ಓದಿ:ಇಮ್ರಾನ್ ಖಾನ್​ಗೆ ದೇಶ ಬಿಡುವಂತೆ ಸೂಚನೆ; ಅವರು ಭಾರತದ ಪ್ರಜೆಯೇ ಅಲ್ಲವಾ?

ಇಮ್ರಾನ್ ಖಾನ್ ಅವರು ಅಮೆರಿಕದ ನಾಗರೀಕತೆ ಹೊಂದಿದ್ದು, ಭಾರತದಲ್ಲಿ ವಿದೇಶಿ ಪ್ರಜೆಯಾಗಿ ಅವರು ತಮ್ಮನ್ನು ನೊಂದಾಯಿಸಿಕೊಂಡಿದ್ದಾರೆ. ವಿದೇಶಿ ಪ್ರಜೆಯಾಗಿ ಭಾರತ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರನ್ನು ಭಾರತ ಬಿಟ್ಟು ಹೊರಡುವಂತೆ ಕೇಳಲಾಗಿತ್ತು. ನೊಟೀಸ್​​ನ ವಿರುದ್ಧ ಇಮ್ರಾನ್ ಖಾನ್ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆ ಚಾಲ್ತಿಯಲ್ಲಿದೆ. ಕೆಲ ತಿಂಗಳ ಹಿಂದೆ ನಡೆದಿದ್ದ ನೀಟ್ ವಿರುದ್ಧದ ಹೋರಾಟದಲ್ಲಿಯೂ ಸಹ ಇಮ್ರಾನ್ ಖಾನ್ ಭಾಗಿ ಆಗಿದ್ದರು.

ಇಮ್ರಾನ್ ಖಾನ್ ಬಾಲಿವುಡ್​​ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಆಮಿರ್ ಖಾನ್ ಅವರ ಹತ್ತಿರದ ಸಂಬಂಧಿ ಸಹ ಆಗಿರುವ ಇಮ್ರಾನ್ ಖಾನ್, ‘ಜಾನೆ ತು ಯಾ ಜಾನೆ ನ’, ‘ಡೆಲ್ಲಿ ಬೆಲ್ಲಿ’, ‘ಲಕ್’, ‘ಐ ಹೇಟ್ ಲವ್ ಸ್ಟೋರೀಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. 2015 ಕ್ಕೆ ಅವರು ಚಿತ್ರರಂಗದಿಂದ ದೂರಾದರಾದರೂ ಈಗ ಮತ್ತೆ ಬಾಲಿವುಡ್​​ಗೆ ಮರಳಿದ್ದಾರೆ. ಇದೇ ವರ್ಷ ಜನವರಿಯಲ್ಲಿ ರಿಲೀಸ್ ಆದ ‘ಹ್ಯಾಪಿ ಪಟೇಲ್’ ಸಿನಿಮಾನಲ್ಲಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Tue, 27 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು