AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಮ್ರಾನ್ ಖಾನ್​ಗೆ ದೇಶ ಬಿಡುವಂತೆ ಸೂಚನೆ; ಅವರು ಭಾರತದ ಪ್ರಜೆಯೇ ಅಲ್ಲವಾ?

ಮುಂಬೈನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಹಾಗೂ ಅಮೆರಿಕ ಪ್ರಜೆ ಇಮ್ರಾನ್ ಖಾನ್‌ಗೆ ಭಾರತ ಬಿಟ್ಟು ತೊರೆಯುವಂತೆ ಎಫ್‌ಆರ್‌ಆರ್‌ಒ ನೋಟಿಸ್ ನೀಡಿದೆ. ಬಿಜೆಪಿ ನಾಯಕನ ದೂರಿನ ಮೇರೆಗೆ ಅಕ್ಟೋಬರ್ 28ರೊಳಗೆ ದೇಶ ತೊರೆಯುವಂತೆ ಕಠಿಣ ಸೂಚನೆ ನೀಡಲಾಗಿದ್ದು, ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಇಮ್ರಾನ್ ಖಾನ್​ಗೆ ದೇಶ ಬಿಡುವಂತೆ ಸೂಚನೆ; ಅವರು ಭಾರತದ ಪ್ರಜೆಯೇ ಅಲ್ಲವಾ?
ಇಮ್ರಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on: Oct 15, 2026 | 12:16 PM

Share

ಮುಖ್ಯಾಂಶಗಳು

  • ಭಾರತ ಬಿಡುವಂತೆ ನಟ ಇಮ್ರಾನ್ ಖಾನ್‌ಗೆ ನೋಟಿಸ್
  • ಎಫ್‌ಆರ್‌ಆರ್‌ಒ ಕಠಿಣ ಆದೇಶ
  • ಬಿಜೆಪಿ ನಾಯಕನ ದೂರಿನಿಂದ ಬಯಲಾದ ಸಂಕಷ್ಟ

ಕಾಕ್ರೋಚ್ ಜನತಾ ಪಾರ್ಟಿ ಬೆಂಬಲಿಸಿದ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಭಾರತ ತೊರೆಯುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಸೂಚನೆ ನೀಡಿದೆ. ಅಮೆರಿಕದ ಪ್ರಜೆಯಾಗಿ ಅವರು ಸಿಜೆಪಿ ಬೆಂಬಲಿತ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು. ಹೀಗಾಗಿ, ಅವರು ಅಕ್ಟೋಬರ್ 28ರೊಳಗೆ ದೇಶ ಬಿಡಬೇಕಿದೆ. ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ನೀಡಿದ ದೂರಿನ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಮುಂಬೈನ ‘ಆಗಸ್ಟ್ ಕ್ರಾಂತಿ ಮೈದಾನ’ದಲ್ಲಿ ಸಿಜೆಪಿ ಪ್ರತಿಭಟನೆ ನಡೆಸಿತು. ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕೋರಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಒಸಿಐ ಕಾರ್ಡ್ (ಭಾರತೀಯ ಸಾಗರೋತ್ತರ ನಾಗರಿಕರ ಕಾರ್ಡ್) ಹೊಂದಿರುವ ಇಮ್ರಾನ್ ಖಾನ್ ಈ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ವಿದೇಶಿ ಪ್ರಜೆ ಅಥವಾ ಒಸಿಐ ಕಾರ್ಡ್‌ದಾರರು ಭಾರತದ ಆಂತರಿಕ ರಾಜಕೀಯ ಚಟುವಟಿಕೆಗಳು, ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಅಥವಾ ಧರಣಿಗಳಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ, ಅವರಿಂದ ನಿಯಮ ಉಲ್ಲಂಘನೆ ಆಗಿದೆ

ಅಮೆರಿಕದ ಪ್ರಜೆ ಹೇಗೆ?

ಇಮ್ರಾನ್ ಖಾನ್ ಅವರು ಆಮಿರ್ ಖಾನ್ ಅವರ ಸೋದರ ಸಂಬಂಧಿ. ಅವರು ಹುಟ್ಟಿದ್ದೇ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್ ನಗರದಲ್ಲಿ. ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ. ಅವರು ಅಮೆರಿಕದ ನಾಗರಿಕರಾಗಿರುವುದರಿಂದಲೇ ಭಾರತದಲ್ಲಿ ವಾಸಿಸಲು ‘ಭಾರತೀಯ ಸಾಗರೋತ್ತರ ನಾಗರಿಕರ ಕಾರ್ಡ್’ಅನ್ನು ಹೊಂದಿದ್ದಾರೆ. ಅವರು ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ತಂದೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ: ಇಮ್ರಾನ್ ಖಾನ್ ಮಕ್ಕಳ ಗಂಭೀರ ಆರೋಪ

ನಟನೆಗೆ ಗುಡ್‌ಬೈ

ಬಾಲಿವುಡ್‌ನಲ್ಲಿ 2011ರ ಜುಲೈ 1ರಂದು ತೆರೆಕಂಡ ಬೋಲ್ಡ್ ಹಾಗೂ ಭಿನ್ನ ಕಥೆಯುಳ್ಳ ‘ಡೆಲ್ಲಿ ಬೆಲ್ಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಇಮ್ರಾನ್ ಖಾನ್ ‘ಮೇರೆ ಬ್ರದರ್ ಕೀ ದುಲ್ಹನ್’ ಹಾಗೂ ‘ಏಕ್ ಮೇ ಔರ್ ಏಕ್ ತು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ, ಕಾಲಕ್ರಮೇಣ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ ಮತ್ತು ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಸಲಹಾ ಚಿತ್ರಗಳು ಸಾಲಾಗಿ ಸೋತ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನಟನೆಗೆ ವಿದಾಯ ಹೇಳುವ ಗಂಭೀರ ನಿರ್ಧಾರ ಕೈಗೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ