AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶ ತೊರೆಯುವ ನೋಟಿಸ್ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಂಬೈನಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ನಟ ಇಮ್ರಾನ್ ಖಾನ್ ಅವರಿಗೆ ದೇಶ ತೊರೆಯುವಂತೆ ನೋಟಿಸ್ ನೀಡಲಾಗಿದ್ದು, ಅದನ್ನು ಪ್ರಶ್ನಿಸಿ ಅವರು ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಒಸಿಐ ಕಾರ್ಡ್‌ದಾರರು ಯಾವುದೇ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ಪ್ರಸ್ತುತ ಕಾನೂನು ಅಥವಾ ಶಾಸನಬದ್ಧ ನಿಯಮಗಳ ಅಡಿಯಲ್ಲಿ ನಿಷೇಧಿಸುವ ಯಾವುದೇ ನಿಬಂಧನೆಗಳಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶ ತೊರೆಯುವ ನೋಟಿಸ್ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್
Imran Khan Image Credit source: Instagram/ajittapasvi
ಮದನ್​ ಕುಮಾರ್​
|

Updated on: Oct 18, 2026 | 7:17 AM

Share

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತ ತೊರೆಯುವಂತೆ ಮುಂಬೈ ಪೊಲೀಸರು ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಬಾಲಿವುಡ್ ನಟ, ಅಮೆರಿಕದ ಪ್ರಜೆ ಮತ್ತು ಒಸಿಐ ಕಾರ್ಡ್‌ದಾರರಾದ ಇಮ್ರಾನ್ ಖಾನ್ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ವಿಚಾರಣೆ ಅಥವಾ ಶೋಕಾಸ್ ನೋಟಿಸ್ ನೀಡದೇ ಏಕಾಏಕಿ ಭಾರತ ತೊರೆಯುವಂತೆ ನೋಟಿಸ್ ನೀಡಲಾಗಿದೆ ಎಂದು ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಪಾಸ್‌ಪೋರ್ಟ್ ಮತ್ತು ಭಾರತದ ಸಾಗರೋತ್ತರ ಪೌರತ್ವ ಕಾರ್ಡ್ ಹೊಂದಿರುವ 43 ವರ್ಷದ ನಟ ಇಮ್ರಾನ್ ಖಾನ್, ಅಕ್ಟೋಬರ್ 10ರಂದು ‘ಕಾಕ್ರೋಚ್ ಜನತಾ ಪಾರ್ಟಿ’ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಮ್ರಾನ್ ಖಾನ್ ಹಾಗೂ ಅವರ ಗೆಳತಿ ಲೇಖಾ ವಾಷಿಂಗ್ಟನ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು.

ಪೊಲೀಸ್ ವ್ಯಾನ್‌ನಲ್ಲಿದ್ದಾಗ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಇಮ್ರಾನ್ ಖಾನ್, ‘ನಾನು ಡ್ರೈವ್‌ಗೆ ಹೋಗುತ್ತಿದ್ದೇನೆ’ ಎಂದು ವ್ಯಂಗ್ಯವಾಗಿ ಕ್ಯಾಪ್ಷನ್ ಬರೆದುಕೊಂಡಿದ್ದರು. ಅಲ್ಲದೆ, ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ‘ನಾನು ಯಾವುದೇ ನಿರ್ದಿಷ್ಟ ಬೇಡಿಕೆಗಳಿಗಾಗಿ ಇಲ್ಲಿಗೆ ಬಂದಿಲ್ಲ. ಈ ನಗರದಲ್ಲಿ ವಾಸಿಸುವ ಒಬ್ಬ ನಾಗರಿಕನಾಗಿ, ಜನರ ಸ್ವಾತಂತ್ರ್ಯವನ್ನು ಏಕೆ ನಿರ್ಬಂಧಿಸಲಾಗುತ್ತಿದೆ ಮತ್ತು ಜನರ ಧ್ವನಿಯನ್ನು ಏಕೆ ಹತ್ತಿಕ್ಕಲಾಗುತ್ತಿದೆ ಎಂಬುದನ್ನು ತಿಳಿಯಲು ಬಂದಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದರು.

ನಟ ಇಮ್ರಾನ್ ಖಾನ್ ಪರವಾಗಿ ಹಿರಿಯ ವಕೀಲ ಜುಲ್ಫಿಕರ್ ಮೆಮನ್ ಮತ್ತು ಎಂಝೆಡ್ಎಂ ಲೀಗಲ್ ಸಂಸ್ಥೆಯ ಮೂಲಕ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ. ಅಕ್ಟೋಬರ್ 28ರೊಳಗೆ ದೇಶ ತೊರೆಯುವಂತೆ ಮುಂಬೈ ಪೊಲೀಸರು ನೀಡಿರುವ ನಿರ್ದೇಶನವು ‘ಕಾನೂನುಬಾಹಿರ, ವಿಕೃತ, ತೀವ್ರ ಸ್ವರೂಪದ್ದಾಗಿದೆ ಹಾಗೂ ಕಾನೂನಿಗೆ ವಿರುದ್ಧವಾಗಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಇಮ್ರಾನ್ ಖಾನ್​ಗೆ ದೇಶ ಬಿಡುವಂತೆ ಸೂಚನೆ; ಅವರು ಭಾರತದ ಪ್ರಜೆಯೇ ಅಲ್ಲವಾ?

ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಠ್ನಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯ ತುರ್ತು ವಿಚಾರಣೆ ನಡೆಯುವ ನಿರೀಕ್ಷೆಯಿದೆ. ‘ಯಾವುದೇ ಪೂರ್ವ ವಿಚಾರಣೆ ನಡೆಸದೆ, ಶೋಕಾಸ್ ನೋಟಿಸ್ ನೀಡದೆ ಅಥವಾ ತಮ್ಮ ಕಡೆಯ ಸ್ಪಷ್ಟನೆಗೆ ಅವಕಾಶ ನೀಡದೆ ಏಕಪಕ್ಷೀಯವಾಗಿ ಈ ಆದೇಶ ಹೊರಡಿಸಲಾಗಿದೆ’ ಎಂದು ಅರ್ಜಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ