AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CJP

CJP

Cockroach Janta Party CJP –

ಕಾಕ್ರೋಚ್ ಜನತಾ ಪಾರ್ಟಿ ಇತ್ತೀಚೆಗೆ ನಡೆದ ನೀಟ್-ಯುಜಿ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಭಾರಿ ಪ್ರಮಾಣದ ವಿದ್ಯಾರ್ಥಿ ಹೋರಾಟವನ್ನು ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಒಂದು ಪ್ರತಿಭಟನಾ ಸಂಘಟನೆಯಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಪಾರದರ್ಶಕತೆಯ ಕೊರತೆಯನ್ನು ಖಂಡಿಸಿ, ಸಿಜೆಪಿ ನಾಯಕತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಸತತ ಧರಣಿ ನಡೆಸಿದರು. ಈ ಪ್ರತಿಭಟನೆಯು ಪರೀಕ್ಷಾ ಮಾಫಿಯಾ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಮತ್ತು ಶಿಕ್ಷಣ ಸಚಿವಾಲಯದ ಹೊಣೆಗಾರಿಕೆಯನ್ನು ಪ್ರಶ್ನಿಸಲು ಪ್ರಮುಖ ವೇದಿಕೆಯಾಯಿತು.

ಪ್ರತಿಭಟನೆಯ ವೇಳೆ ಪೊಲೀಸರ ಬಲಪ್ರಯೋಗ ಮತ್ತು ಲಾಠಿಚಾರ್ಜ್‌ಗಳು ವರದಿಯಾದಾಗ, ಸಿಜೆಪಿ ನಾಯಕರು ನ್ಯಾಯಾಂಗ ಹೋರಾಟ ನಡೆಸಿ ಪ್ರತಿಭಟನಾ ನಿರತರ ಮೇಲಿನ ಎಫ್‌ಐಆರ್ ರದ್ದುಗೊಳಿಸಲು ಮತ್ತು ಬಂಧಿತ ವಿದ್ಯಾರ್ಥಿಗಳಿಗೆ ಕ್ಷಮಾದಾನ ಕೊಡಿಸುವಲ್ಲಿ ಯಶಸ್ವಿಯಾದರು. ಈ ಹೋರಾಟದ ತೀವ್ರತೆಗೆ ಮಣಿದು ಕೇಂದ್ರ ಶಿಕ್ಷಣ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು ಹಾಗೂ ಸರ್ಕಾರವು ಹೊಸ ಪರೀಕ್ಷಾ ಸುಧಾರಣಾ ಮಸೂದೆಯನ್ನು ಪರಿಚಯಿಸಿತು. ಯುವಜನರ ಮತ್ತು ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಧ್ವನಿಯೆತ್ತಿದ ಈ ಪ್ರತಿಭಟನೆಯು ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಚರ್ಚಾವಿಷಯವಾಗಿದೆ.

ಇನ್ನೂ ಹೆಚ್ಚು ಓದಿ

ವಿದ್ಯಾರ್ಥಿಗಳ ವಿರುದ್ಧ ಧ್ವನಿ ಎತ್ತಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ನಟಿ ಭೂಮಿ ಪೆಡ್ನೇಕರ್

ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಬಗ್ಗೆ ಸೆಲೆಬ್ರಿಟಿಗಳಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳಿವೆ. ನಟಿ ಭೂಮಿ ಪೆಡ್ನೇಕರ್ ಅವರು ವಿದ್ಯಾರ್ಥಿಗಳ ಭಾಷೆಯನ್ನು ಟೀಕಿಸಿದ್ದಾರೆ. ಆದರೆ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಅವರು ಖಂಡಿಸಿಲ್ಲ. ಹಾಗಾಗಿ ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಸೋನಾಕ್ಷಿ ಸಿನ್ಹಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್; ಖಾರದ ಮಾತುಗಳಲ್ಲಿ ಟೀಕೆ

ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ನಟಿಯೊಬ್ಬರ ವಿರುದ್ಧ ಕಂಗನಾ ರಣಾವತ್ ಗರಂ ಆಗಿದ್ದಾರೆ. ಹೆಸರು ಹೇಳದೆಯೇ ಕಟುವಾಗಿ ಟೀಕೆ ಮಾಡಿದ್ದಾರೆ. ಆದರೆ ಅವರು ಟೀಕಿಸಿರುವುದು ಸೋನಾಕ್ಷಿ ಸಿನ್ಹಾ ಅವರನ್ನು ಎಂದು ನೆಟ್ಟಿಗರು ಊಹಿಸಿದ್ದಾರೆ. ಈ ಟೀಕೆಗೆ ಸೋನಾಕ್ಷಿ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕುತೂಹಲ ಸೃಷ್ಟಿ ಆಗಿದೆ.

ಸೀತೆಯ ವೇಷದಲ್ಲಿ ಜೆನ್ ಜಿ ಮಂದಿಗೆ ಆಶೀರ್ವಾದ ಮಾಡಿದ ನಟಿ, ಸಂಸದೆ ಕಂಗನಾ ರಣಾವತ್

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಸೀತೆ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ನಡುವೆಯೇ ಕಂಗನಾ ರಣಾವತ್ ಅವರು ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಅವರು ಜೆನ್ ಜಿ ಯುವ ಜನತೆಯ ಕಾಲೆಳೆದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಮೋದಿ ಕಾಲು ತೊಳೆದು ನೀರು ಕುಡಿಯುತ್ತೇನೆ: ಪ್ರಧಾನಿಯನ್ನು ವಿಷ್ಣು ಅವತಾರ ಎಂದ ನಟ ಸುದೇಶ್ ಬೇರಿ

ಪ್ರಧಾನಿ ಮೋದಿ ಅವರನ್ನು ಟೀಕಿಸಿದ ‘ಕಾಕ್ರೋಜ್ ಜನತಾ ಪಕ್ಷ’ದ ವಿರುದ್ಧ ನಟ ಸುದೇಶ್ ಬೇರಿ ಕಿಡಿಕಾರಿದ್ದಾರೆ. ಪಕ್ಷದ ಹೆಸರನ್ನು ಲೇವಡಿ ಮಾಡುತ್ತಾ, ‘ವಿಚಿತ್ರ ಜೀವಿಗಳ ಹೆಸರಿನಲ್ಲಿ ಪಕ್ಷ ಕಟ್ಟುವ ಬದಲು ಕತ್ತೆಕಿರುಬ ಪಕ್ಷ ಎಂದು ಹೆಸರು ಇಟ್ಟುಕೊಳ್ಳಬಾರದಿತ್ತೇ?’ ಎಂದು ವ್ಯಂಗ್ಯವಾಡಿದ್ದಾರೆ. ಮೋದಿಯವರನ್ನು ಬೇರಿ ಅವರು ದೇವರಿಗೆ ಹೋಲಿಸಿದ್ದಾರೆ.

ಜೆನ್ ಜಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತ ವಿಶಾಲ್ ದದ್ಲಾನಿ: ಕಂಗನಾ ಮಾತಿಗೆ ತಿರುಗೇಟು

ನಟಿ ಕಂಗನಾ ರಣಾವತ್ ಅವರು ಜೆನ್ ಜಿ ಯುವಕ-ಯುವತಿಯರ ಪ್ರತಿಭಟನೆಯನ್ನು ಖಂಡಿಸಿದ್ದರು. ಆದರೆ ಗಾಯಕ ವಿಶಾಲ್ ದದ್ಲಾನಿ ಅವರು ಜೆನ್ ಜಿಗಳ ಪರ ನಿಂತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಆದ ಹಲ್ಲೆಯನ್ನು ವಿಶಾಲ್ ದದ್ಲಾನಿ ಟೀಕಿಸಿದ್ದಾರೆ.

ಹಿಂದೂ ಯುವತಿಯರ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಕಂಗನಾ ರಣಾವತ್

ಇತ್ತೀಚೆಗೆ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆನ್ ಜಿ ಯುವಜನರು ನಡೆಸಿದ ಪ್ರತಿಭಟನೆಯ ವೀಡಿಯೋಗಳನ್ನು ನೋಡಿದ ಕಂಗನಾ ಅವರು ‘ವಾಂತಿ ಬರಿಸುವಂತಿವೆ’ ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ ಈಗ ಮತ್ತೊಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಹಿಂದೂ ಯುವತಿಯರ ಜೀವನಶೈಲಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Cockroach Janta Party: ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇಂಟರ್‌ನೆಟ್ ಮೀಮ್‌ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ

ದೇಶಾದ್ಯಂತ ತೀವ್ರಗೊಂಡ ಯುವಜನರ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆ ಹಾಗೂ ಪರೀಕ್ಷಾ ಅಕ್ರಮಗಳ ಆಕ್ರೋಶದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆರಂಭದಲ್ಲಿ ಇಂಟರ್‌ನೆಟ್‌ನಲ್ಲಿ ವಿಡಂಬನಾತ್ಮಕವಾಗಿ ಹುಟ್ಟಿಕೊಂಡು, ಬಳಿಕ ಕೋಟ್ಯಂತರ ಯುವಕರ ಧ್ವನಿಯಾದ ಈ 'ಕಾಕ್ರೋಚ್ ಜನತಾ ಪಾರ್ಟಿ' ಉಗಮ ಮತ್ತು ಹಿನ್ನೆಲೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ