
‘ಹೀರೋಪಂತಿ’ ಚಿತ್ರದ ಮೂಲಕ ಗುರುತಿಸಿಕೊಂಡ ಕೃತಿ ಸನೊನ್, ಈಗ ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರಕ್ಕೆ ನಾಯಕಿ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಬಾಲಿವುಡ್ನಲ್ಲಿ ಮನೆಮಾತಾಗಿರುವ ಕಿಯಾರಾ ಅಡ್ವಾನಿ, ತಮ್ಮ ಮುಂದಿನ ಚಿತ್ರದಲ್ಲಿ ರಾಮ್ಚರಣ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರವನ್ನು ದಿಲ್ರಾಜು ನಿರ್ಮಾಣ ಮಾಡಲಿದ್ದಾರೆ.

ದೀಪಿಕಾ ಪಡುಕೋಣೆ ಪ್ರಭಾಸ್ ನಟನೆಯ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದು, ಚಿತ್ರವು ಸುಮಾರು 400ಕೋಟಿ ರೂಗಳಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ.

ಆರ್ಆರ್ಆರ್ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಆಲಿಯಾ ಭಟ್ ಕಾಲಿಟ್ಟಿದ್ದಾರೆ.

ರವೀನಾ ಟಂಡನ್ ಕೆಜಿಎಫ್-2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಪ್ಸಿ ಪನ್ನು ತೆಲುಗಿನ ‘ಮಿಷನ್ ಇಂಪಾಸಿಬಲ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸ್ವರೂಪ್ ಆರ್ಎಸ್ಜೆ ನಿರ್ದೇಶಿಸಲಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗಕ್ಕೆ ಐಶ್ವರ್ಯಾ ರೈ ಹೊಸಬರೇನಲ್ಲ. ಈಗ ಅವರು ಮಣಿ ರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published On - 3:44 pm, Thu, 5 August 21