Anushka Sharma: ಕಾನ್ ಚಿತ್ರೋತ್ಸವದಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡ ನಟಿ ಅನುಷ್ಕಾ ಶರ್ಮಾ; ಕೊಹ್ಲಿ ರಿಯಾಕ್ಷನ್ ಏನು?

ಅನುಷ್ಕಾ ಶರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಕಾನ್​ ಚಿತ್ರೋತ್ಸವದ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅವರ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಸೇರಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

Anushka Sharma: ಕಾನ್ ಚಿತ್ರೋತ್ಸವದಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡ ನಟಿ ಅನುಷ್ಕಾ ಶರ್ಮಾ; ಕೊಹ್ಲಿ ರಿಯಾಕ್ಷನ್ ಏನು?
ಅನುಷ್ಕಾ ಶರ್ಮಾ

Updated on: May 27, 2023 | 8:13 AM

ಫ್ರಾನ್ಸ್​ನಲ್ಲಿ ಕಾನ್ ಸಿನಿಮೋತ್ಸವಕ್ಕೆ ಇಂದು (ಮೇ 27) ತೆರೆ ಬೀಳಲಿದೆ. ಈ ಬಾರಿ ಹಲವು ದೇಶಗಳಿಂದ ಸೆಲೆಬ್ರಿಟಿಗಳು ಬಂದು ಕೆಂಪುಹಾಸಿನ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. 2023ನೇ ಸಾಲಿನ ಕಾನ್ ಸಿನಿಮೋತ್ಸವ (Cannes Film Festival) ಮೇ 16ರಿಂದ ಆರಂಭ ಆಗಿತ್ತು. ಮೇ 26ರಂದು ನಟಿ ಅನುಷ್ಕಾ ಶರ್ಮಾ ಅವರು ಕಾನ್ ಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ನಡೆದು ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ.

ಈ ವರ್ಷ ಭಾರತದ ಅನೇಕ ಸೆಲೆಬ್ರಿಟಿಗಳು ಕಾನ್​ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದಾರೆ. ಅದಿತಿ ರಾವ್ ಹೈದರಿ, ಮೃಣಾಲ್ ಠಾಕೂರ್, ಸನ್ನಿ ಲಿಯೋನ್, ಐಶ್ವರ್ಯಾ ರೈ, ಊರ್ವಶಿ ರೌಟೇಲಾ, ಸಾರಾ ಅಲಿ ಖಾನ್ ಸೇರಿದಂತೆ ಅನೇಕ ಭಾರತದ ಸೆಲೆಬ್ರಿಟಿಗಳು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಅದೇ ರೀತಿ ಈ ಬಾರಿ ಅನುಷ್ಕಾ ಶರ್ಮಾ ಅವರಿಗೂ ಆಹ್ವಾನ ಬಂದಿತ್ತು. ಅದನ್ನು ಸ್ವೀಕರಿಸಿ ಅವರು ಕಾನ್ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದಾರೆ.

ಅನುಷ್ಕಾ ಶರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅವರ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಸೇರಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಕೊಹ್ಲಿ ಕೆಂಪು ಹಾರ್ಟ್ ಹಾಗೂ ಕಣ್ಣಿನಲ್ಲಿ ಹಾರ್ಟ್ ಇರುವ ಎಮೋಜಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅನುಷ್ಕಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅನೇಕರು ಬರೆದುಕೊಂಡಿದ್ದಾರೆ. ಸದ್ಯ ಕೊಹ್ಲಿ ಅವರು ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಇಂಗ್ಲೆಂಡ್​ಗೆ ತೆರಳಿದ್ದಾರೆ.

ಇದನ್ನೂ ಓದಿ: Cannes: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಮಿಂಚಿದ ಕನ್ನಡದ ನಟಿ ಇತಿ ಆಚಾರ್ಯ

ಕಾನ್ ಚಿತ್ರೋತ್ಸವ ಪ್ರತಿವರ್ಷದಂತೆ ಫ್ರಾನ್ಸ್​ನಲ್ಲಿ ನಡೆದಿದೆ. ಈ ಮೊದಲು ಶರ್ಮಿಳಾ ಠಾಗೋರ್, ಐಶ್ವರ್ಯಾ ರೈ, ವಿದ್ಯಾ ಬಾಲನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್, ಅದಿತಿ ರಾವ್ ಹೈದರಿ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಕೆಂಪು ಹಾಸಿನ ಮೇಲೆ ನಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ