Cannes: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಮಿಂಚಿದ ಕನ್ನಡದ ನಟಿ ಇತಿ ಆಚಾರ್ಯ

Iti Acharya: ನಟನೆ ಮತ್ತು ಮಾಡೆಲಿಂಗ್​ನಲ್ಲಿ ಇತಿ ಆಚಾರ್ಯ ಗುರುತಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕಾನ್​ ಚಿತ್ರೋತ್ಸವ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ.

Cannes: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಮಿಂಚಿದ ಕನ್ನಡದ ನಟಿ ಇತಿ ಆಚಾರ್ಯ
ಇತಿ ಆಚಾರ್ಯ
Follow us
ಮದನ್​ ಕುಮಾರ್​
|

Updated on: May 20, 2023 | 2:43 PM

ವಿವಿಧ ದೇಶಗಳ ಸೆಲೆಬ್ರಿಟಿಗಳು ಕಾನ್​ ಫಿಲ್ಮ್​ ಫಿಸ್ಟಿವಲ್​ನಲ್ಲಿ (Cannes Film Festival) ಭಾಗವಹಿಸಿದ್ದಾರೆ. ಮೇ 16ರಿಂದ 27ರ ತನಕ ನಡೆಯುತ್ತಿರುವ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವುದು ಎಂದರೆ ಹೆಮ್ಮೆಯೇ ಸರಿ. ಬಾಲಿವುಡ್​ನ ಅನೇಕ ನಟಿಯರು ಇದರಲ್ಲಿ ಭಾಗಿ ಆಗಿದ್ದಾರೆ. ಕಾನ್​ (Cannes) ಚಿತ್ರೋತ್ಸವದ ರೆಡ್​ ಕಾರ್ಪೆಟ್​ ಒಂದು ವಿಶೇಷ ಆಕರ್ಷಣೆ. ಕೆಂಪು ಹಾಸಿನ ಮೇಲೆ ಹಲವು ಕಲಾವಿದರು ಹೆಜ್ಜೆ ಹಾಕಿದ್ದಾರೆ. ಕನ್ನಡದ ನಟಿ ಇತಿ ಆಚಾರ್ಯ (Iti Acharya) ಅವರು ಇದೇ ಮೊದಲ ಬಾರಿಗೆ ಕಾನ್​ ಚಿತ್ರೋತ್ಸವಕ್ಕೆ ತೆರಳಿದ್ದಾರೆ ಎಂಬುದು ವಿಶೇಷ. ಆ ಸಂದರ್ಭದ ಫೋಟೋ ಹಂಚಿಕೊಂಡು ಅವರು ಖುಷಿಪಟ್ಟಿದ್ದಾರೆ. ವಿಮ್ ವೆಂಡರ್ಸ್ ನಿರ್ದೇಶಿಸಿದ ‘ಅನ್ಸೆಲ್ಮ್’ ಸಿನಿಮಾಕ್ಕಾಗಿ ಕಾನ್​ ಚಿತ್ರೋತ್ಸವದಲ್ಲಿ ಭಾಗಿಯಾಗುವ ಅವಕಾಶ ಇತಿ ಆಚಾರ್ಯ ಅವರಿಗೆ ಸಿಕ್ಕಿದೆ.

ಇತಿ ಆಚಾರ್ಯ ಅವರು ಕಪ್ಪು ಬಣ್ಣದ ಗೌನ್ ತೊಟ್ಟಿದ್ದಾರೆ. ಅದಕ್ಕೆ ಒಪ್ಪುವಂತೆ ಬೆಂಗಳೂರಿನ ಖಿಯಾ ಜ್ಯುವೆಲ್ಲರಿಯ ವಜ್ರದ ಆಭರಣ, ದೆಹಲಿ ಮೂಲದ ತಾರಿಣಿ ನಿರುಲಾ ಅವರ ಕರಕುಶಲ ಹಮ್ಮಿಂಗ್ ಬರ್ಡ್‌ ಕಪ್ಪು ಕೈ ಕ್ಲಚ್ ಹಿಡಿದು ಕಾನ್​ ಸಿನಿಮೋತ್ಸವದ ರಂಗೇರಿಸಿದ್ದಾರೆ ಇತಿ ಆಚಾರ್ಯ. ರೆಡ್​ ಕಾರ್ಪೆಟ್​ನಲ್ಲಿ ಅವರು ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ.

ನಟನೆ ಮತ್ತು ಮಾಡೆಲಿಂಗ್​ನಲ್ಲಿ ಇತಿ ಆಚಾರ್ಯ ಗುರುತಿಸಿಕೊಂಡಿದ್ದಾರೆ. ಅವರು 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಆಗಿದ್ದರು. ಆರ್.ವಿ.ಎಸ್.ಪಿ. ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿ ಆಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. ಟೈಮ್ಸ್ ಸ್ಕ್ವೇರ್​ ಬಿಲ್ ಬೋರ್ಡ್ ಹೋರ್ಡಿಂಗ್ಸ್​ನಲ್ಲಿ ಕಾಣಿಸಿಕೊಂಡ ಹಿರಿಮೆ ಅವರದ್ದು. ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಇತಿ ಆಚಾರ್ಯ ಅವರು ಜನಪ್ರಿಯತೆ ಪಡೆದಿದ್ದಾರೆ.

ಇದನ್ನೂ ಓದಿ: 75th Cannes Film Festival: ಆಕರ್ಷಣೀಯ ಉಡುಗೆಯೊಂದಿಗೆ ಮಿಂಚಿದ ನಟಿ ದೀಪಿಕಾ ಪಡುಕೋಣೆ

ಕಾನ್​ ಚಿತ್ರೋತ್ಸವದಲ್ಲಿ ನಟಿಮಣಿಯರು:

ಈ ಬಾರಿ ಭಾರತದ ಅನೇಕ ನಟಿಯರು ಕಾನ್​ ಚಿತ್ರೋತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ಮೃಣಾಲ್​ ಠಾಕೂರ್​, ಸಾರಾ ಅಲಿ ಖಾನ್​, ಖುಷ್ಬೂ ಸುಂದರ್​, ಇಶಾ ಗುಪ್ತಾ ಮುಂತಾದ ನಟಿಯರು ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರ ಸಾಲಿಗೆ ಇತಿ ಆಚಾರ್ಯ ಕೂಡ ಸೇರ್ಪಡೆ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್