
ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯ ಮೂಲಕ ಕೋಟ್ಯಂತರ ವೀಕ್ಷಕರನ್ನು ನಗಿಸುವ ಜನಪ್ರಿಯ ನಟ ಮತ್ತು ಕಾಮೆಡಿಯನ್ ಸುನೀಲ್ ಗ್ರೋವರ್ (Sunil Grover) ಇತ್ತೀಚೆಗೆ ತಮ್ಮ ಆಧ್ಯಾತ್ಮಿಕ ಮತ್ತು ಸರಳ ಜೀವನದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸುನೀಲ್ ಗ್ರೋವರ್ ಇತ್ತೀಚೆಗೆ ಗಂಗಾ ಆರತಿಯನ್ನು ವೀಕ್ಷಿಸಿದ್ದಾರೆ. ಆ ಬಳಿಕ ಭಕ್ತಿ ಮತ್ತು ಪ್ರಶಾಂತತೆಯ ಕ್ಷಣಗಳನ್ನು ಆನಂದಿಸಿದ್ದಾರೆ. ನದಿ ತೀರದಲ್ಲೇ ಅವರು ನಿದ್ರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ದೀಪಗಳ ಬೆಳಕು, ಮಂತ್ರಘೋಷಗಳ ನಡುವೆ ಮುಳುಗಿದ್ದ ಅವರು, ಯಾವುದೇ ಸ್ಟಾರ್ ಗಿಮಿಕ್ ಇಲ್ಲದೆ ಗಂಗಾ ನದಿಯ ತಟದ ಮೇಲೆ ಸಾಮಾನ್ಯರಂತೆ ಮಲಗಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಅವರು ‘ತಾರೆ ಜಮೀನ್ ಪರ್’ (ನೆಲದ ಮೇಲಿನ ನಕ್ಷತ್ರಗಳು) ಎಂದು ಬರೆದುಕೊಂಡಿದ್ದಾರೆ.
ಮಾಧ್ಯಮಗಳ ವರದಿಗಳ ಪ್ರಕಾರ, ಸುನೀಲ್ ಗ್ರೋವರ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 25 ಕೋಟಿ ರೂಪಾಯಿ. ಒಂದು ಕಾಲದಲ್ಲಿ ದಿನಕ್ಕೆ ಕೇವಲ 500 ರೂಪಾಯಿ ದುಡಿಯುತ್ತಿದ್ದ ಸುನೀಲ್, ಇಂದು ಭಾರತದ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಸಂಭಾವನೆ ಪಡೆಯುವ ಕಾಮೆಡಿಯನ್‌ಗಳಲ್ಲಿ ಒಬ್ಬರಾಗಿದ್ದಾರೆ. ಇಷ್ಟೊಂದು ಯಶಸ್ಸು ಮತ್ತು ಹಣವಿದ್ದರೂ, ಅವರು ಯಾವುದೇ ಐಷಾರಾಮಿ ಹಮ್ಮು-ಬಿಮ್ಮುಗಳಿಲ್ಲದೆ ನದಿಯ ಘಾಟ್‌ನಲ್ಲಿ ಸಾಧು-ಸಂತರೊಂದಿಗೆ ನೆಲದ ಮೇಲೆ ಮಲಗಿರುವುದು ಅಭಿಮಾನಿಗಳ ಹೃದಯ ಗೆದ್ದಿದೆ.
ಅಭಿಮಾನಿಗಳ ಮೆಚ್ಚುಗೆ: ಸುನೀಲ್ ಅವರ ಈ ಅಪರೂಪದ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಒಂದೇ ಹೃದಯವನ್ನು ಎಷ್ಟು ಬಾರಿ ಗೆಲ್ಲುತ್ತೀರಿ ಸರ್?’, ‘ನಿಮ್ಮ ಈ ಸರಳತೆಯೇ ನಿಮ್ಮನ್ನು ಅಪ್ರತಿಮ ಕಲಾವಿದನನ್ನಾಗಿ ಮಾಡಿದೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಚಾರ್ಮ್ ಕಳೆದುಕೊಳ್ಳುತ್ತಿದೆ ಕಪಿಲ್ ಶೋ; ಸುನೀಲ್ ಗ್ರೋವರ್ ಇಲ್ಲವಾದರೆ ಝೀರೋ?
ಕೆಲಸದ ವಿಷಯಕ್ಕೆ ಬರೋದಾದರೆ ಸುನೀಲ್ ಗ್ರೋವರ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಬ್ಯುಸಿ ಇದ್ದಾರೆ. ಹಲವು ವರ್ಷಗಳ ಬಳಿಕ ಅವರು ಕಪಿಲ್ ಶರ್ಮಾ ಜೊತೆ ಒಂದಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.