ಬಾಲಿವುಡ್ನಲ್ಲಿ ಬಯೋಪಿಕ್ಗಳ ಹಾವಳಿ ಜೋರಾಗಿದೆ. ಕೆಲವು ಬಹಳ ಒಳ್ಳೆಯ ಬಯೋಪಿಕ್ಗಳು ಮೂಡಿಬಂದಿವೆಯಾದರೂ ಕೆಲವು ಕೇವಲ ನಾಮ್ ಕೆ ವಾಸ್ತೆ ಎಂಬಂತೆ ಮಾಡಿದ್ದು ಸಹ ಇವೆ. ರಾಜಕಾರಣಿ, ಕ್ರೀಡಾಪಟುಗಳು, ನಟ-ನಟಿಯರು, ರೌಡಿಗಳು, ಮಾಫಿಯಾ ದೊರೆಗಳು ಹೀಗೆ ಹಲವರ ಬಗ್ಗೆ ಬಯೋಪಿಕ್ಗಳನ್ನು ಬಾಲಿವುಡ್ ಮಾಡಿದ್ದಾಗಿದೆ. ಆದರೆ ಬಾಲಿವುಡ್ಡಿಗರಿಗೆ ಕ್ರೀಡಾಪಟುಗಳ ಬಯೋಪೆಕ್ ಮೇಲೆ ವಿಶೇಷ ಕಾಳಜಿ. ಈಗಾಗಲೇ ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್, ಬಾಕ್ಸಿಂಗ್ ಇನ್ನೂ ಕೆಲವು ಕ್ರೀಡೆಗಳ ಕ್ರೀಡಾಪಟುಗಳ ಜೀವನ ಆಧರಿಸಿದ ಸಿನಿಮಾಗಳು ಬಂದಿದ್ದಾಗಿದೆ. ಇದೀಗ ಕ್ರಿಕೆಟಿಗರೊಬ್ಬರ ಜೀವನ ಆಧರಿಸಿದ ಸಿನಿಮಾ ಘೋಷಣೆ ಮಾಡಲಾಗಿದೆ.
ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್ ಅವರುಗಳ ಜೀವನ ಆಧರಿಸಿದ ಸಿನಮಾ ಈಗಾಗಲೇ ತೆರೆಗೆ ಬಂದಿದೆ. ಹಿಟ್ ಸಹ ಆಗಿವೆ. ಆದರೆ ಒಬ್ಬ ಕ್ರಿಕೆಟಿಗನ ಬಗ್ಗೆ ಸಿನಿಮಾ ಆಗಬೇಕೆಂಬ ಬೇಡಿಕೆ ಆಗಾಗ್ಗೆ ಕೇಳಿ ಬರುತ್ತಲಿತ್ತು. ಅದುವೇ ಯುವರಾಜ್ ಸಿಂಗ್. ಭಾರತ ಗೆದ್ದ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ನಲ್ಲಿಯೂ ಪಂದ್ಯಶ್ರೇಷ್ಠ ಎನಿಸಿಕೊಂಡ ಯುವರಾಜ್ ಸಿಂಗ್ ಆಟದ ಮಧ್ಯೆಯೇ ಕ್ಯಾನ್ಸರ್ನೊಂದಿಗೆ ಹೋರಾಡಿ ಮತ್ತೆ ಕ್ರಿಕೆಟ್ಗೆ ಮರಳಿದವರು. ಚಾಂಪಿಯನ್ ಕ್ರಿಕೆಟಿಗ ಎಂದೇ ಹೆಸರಾಗಿರುವ ಯುವರಾಜ್ ಸಿಂಗ್ ಜೀವನದ ಬಗ್ಗೆ ಸಿನಿಮಾ ಮಾಡುವುದಾಗಿ ಇದೀಗ ಅಧಿಕೃತವಾಗಿ ಘೋಷಣೆ ಆಗಿದೆ.
ಇದನ್ನೂ ಓದಿ:ಕನ್ನಡಿಗನ ಬಯೋಪಿಕ್ನಲ್ಲಿ ಅಕ್ಷಯ್ ಕುಮಾರ್; ಹೇಗಿದೆ ‘ಸರ್ಫಿರಾ’ ಟ್ರೇಲರ್?
ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ನಿರ್ಮಾಣ ಮಾಡಿದ್ದ ಭೂಷಣ್ ಕುಮಾರ್, ಯುವರಾಜ್ ಸಿಂಗ್ ಜೀವನ ಕುರಿತಾದ ಸಿನಿಮಾದ ನಿರ್ಮಾಣ ಮಾಡಲಿದ್ದಾರೆ. ಭೂಷಣ್ ಜೊತೆಗೆ ರವಿ ಭಗ್ಚಂದಕ ಸಹ ಸಿನಿಮಾಕ್ಕೆ ಬಂಡವಾಳ ತೊಡಗಿಸಲಿದ್ದಾರೆ. ಯುವರಾಜ್ ಸಿಂಗ್, ಇಬ್ಬರು ನಿರ್ಮಾಪಕರ ಜೊತೆಗೆ ತೆಗೆಸಿಕೊಂಡಿರುವ ಚಿತ್ರ ಇದೀಗ ವೈರಲ್ ಆಗಿದ್ದು, ಬಯೋಪಿಕ್ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.
ರವಿ ಭಗ್ಚಂದಕ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಜೀವನ ಆಧರಿಸಿದ ಡಾಕ್ಯುಮೆಂಟರಿಯನ್ನು ಸಹ ನಿರ್ಮಾಣ ಮಾಡಿದ್ದರು. ಇದೀಗ ಯುವರಾಜ್ ಸಿಂಗ್ ಜೀವನದ ಕುರಿತಾದ ಸಿನಿಮಾದ ಮೇಲೆ ಬಂಡವಾಳ ಹೂಡಲು ತಯಾರಾಗಿದ್ದಾರೆ. 2000 ದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಯುವರಾಜ್ ಸಿಂಗ್, ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಿಂದ ಭಾರತೀಯ ಕ್ರಿಕೆಟ್ನ ಚಹರೆಯನ್ನೇ ಬದಲು ಮಾಡಿದರು. 2011 ರ ವಿಶ್ವಕಪ್ ಹಾಗೂ ಅದಕ್ಕೂ ಮುಂಚೆ ಗೆದ್ದ ಟಿ20 ವಿಶ್ವಕಪ್ ಎರಡರಲ್ಲೂ ಪಂದ್ರ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅದಾದ ಬಳಿಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಜೀವನ್ಮರಣ ಹೋರಾಟದಲ್ಲಿಯೂ ಗೆಲುವು ಸಾಧಿಸಿದರು ಯುವರಾಜ್ ಸಿಂಗ್.
ಕ್ರಿಕೆಟ್ ಪ್ರೇಮಿಗಳು ಮೊದಲಿನಿಂದಲೂ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣ ಆಗಬೇಕೆಂದು ಬೇಡಿಕೆ ಇಟ್ಟಿದ್ದರು. ಇದೀಗ ಕೊನೆಗೂ ಯುವರಾಜ್ ಸಿಂಗ್ ಅವರ ಜೀವನ ಕುರಿತಾದ ಸಿನಿಮಾ ತೆರೆಗೆ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ