252 ಕೋಟಿ ರೂ. ಡ್ರಗ್ ಕೇಸ್​ನಲ್ಲಿ ಶ್ರದ್ಧಾ ಕಪೂರ್ ಹೆಸರು; ಇದೆ ದಾವೂದ್ ಲಿಂಕ್

Drug Case: ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ 252 ಕೋಟಿ ರೂ. ಡ್ರಗ್ಸ್ ಪ್ರಕರಣದಲ್ಲಿ ನಟಿ ಶ್ರದ್ಧಾ ಕಪೂರ್, ಸಿದ್ಧಾಂತ್ ಕಪೂರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿದೆ. ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಶೀಘ್ರ ಶ್ರದ್ಧಾ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. 2022ರ 122 ಕೆಜಿ ಎಂಡಿ ಡ್ರಗ್ಸ್ ವಶ ಪ್ರಕರಣದಿಂದ ಈ ಜಾಲ ಬಯಲಾಗಿದೆ.

252 ಕೋಟಿ ರೂ. ಡ್ರಗ್ ಕೇಸ್​ನಲ್ಲಿ ಶ್ರದ್ಧಾ ಕಪೂರ್ ಹೆಸರು; ಇದೆ ದಾವೂದ್ ಲಿಂಕ್
ಶ್ರದ್ಧಾ ಕಪೂರ್

Updated on: Nov 15, 2025 | 6:59 AM

ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂಗೆ (Dawood Ibrahim) ಸಂಬಂಧಿಸಿದ 252 ಕೋಟಿ ರೂಪಾಯಿ ಡ್ರಗ್ ಕೇಸ್​ನಲ್ಲಿ ನಟಿ ಶ್ರದ್ಧಾ ಕಪೂರ್, ಅವರ ಸಹೋದರ ಸಿದ್ಧಾಂತ್ ಕಪೂರ್ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಶ್ರದ್ಧಾ ಅವರನ್ನು ಕರೆಸಿ ವಿಚಾರಣೆ ನಡೆಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ.

ಬಾಲಿವುಡ್​ ಖ್ಯಾತ ನಟಿ ನೋರಾ ಫತೇಹಿ, ಇನ್​ಫ್ಲ್ಯುಯೆನ್ಸರ್ ಓರಿ, ನಿರ್ದೇಶಕರಾದ ಅಬ್ಬಾಸ್-ಮುಸ್ತಾನ್, ಇತ್ತೀಚೆಗೆ ಹತ್ಯೆಗೆ ಒಳಗಾದ ಬಾಬಾ ಸಿದ್ಧಿಕಿ ಅವರ ಪುತ್ರ ಜೇಶನ್ ಸಿದ್ದಿಕಿ ತನಿಖೆಗೆ ಒಳಪಡಬೇಕಿದೆ. ತನಿಖಾಧಿಕಾರಿಗಳ ಪ್ರಕಾರ, ಮುಂಬೈ ಮತ್ತು ದುಬೈನಲ್ಲಿ ಸಲೀಂ ಸೋಹಿಲ್ ಶೇಖ್ ಪಾರ್ಟಿಗಳನ್ನು ಆಯೋಜನೆ ಮಾಡಿದ್ದ. ಈತ ಪರಾರಿಯಾಗಿರುವ ಕಳ್ಳಸಾಗಣೆದಾರ ಸಲೀಂ ಡೋಲಾನ ಆಪ್ತ ಎಂದು ನಂಬಲಾಗಿದೆ. ಸಲೀಂ, ದಾವೂದ್‌ನ ಪ್ರಮುಖ ಸಹಚರರಲ್ಲಿ ಒಬ್ಬ.

ಇತ್ತೀಚೆಗೆ ಮಾದಕ ನಿಗ್ರಹ ದಳದವರು ಕೋರ್ಟ್​ಗೆ ಈ ಬಗ್ಗೆ ರಿಮಾಂಡ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರು ಡ್ರಗ್ ಪಾರ್ಟಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪಾರ್ಟಿಗಳಲ್ಲಿ ದಾವೂದ್ ಇಬ್ರಾಹಿಂ ಸಹೋದರಿ ದಿವಂಗತ ಹಸೀನಾ ಪಾರ್ಕರ್ ಮಗ ಆಲಿಶ್ ಪಾರ್ಕರ್ ಇದರಲ್ಲಿ ಭಾಗವಹಿಸುತ್ತಿದ್ದ.

ಶೇಖ್ ಹೇಳಿಕೆಗಳನ್ನು ಇನ್ನೂ ಪರಿಶೀಲಿಸಲಾಗಿಲ್ಲ. ಈ ತನಿಖೆ ಪ್ರಾಥಮಿಕ ಹಂತದಲ್ಲಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗತ್ಯವಿದ್ದರೆ ಮಾತ್ರ ಹೆಸರಿಸಲಾದ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಲೀಂ ಸೋಹಿಲ್ ಶೇಖ್ ವಿಚಾರಣೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ ನಟಿಯರ ಮೇಲಿತ್ತು ದಾವೂದ್ ಇಬ್ರಾಹಿಂ ಕಣ್ಣು; ಕೆಲವರು ಕಾಣೆಯೇ ಆದರು..

2022ರಲ್ಲಿ ಮುಂಬೈ ಕ್ರೈಮ್ ಬ್ರ್ಯಾಂಚ್ ಮುಂಬೈ ಸಮೀಪ 122 ಕೆಜಿ ಎಂಡಿ (ಮೆಫೆಡ್ರೋನ್ ಡ್ರಗ್) ವಶಕ್ಕೆ ಪಡೆದಿತ್ತು. ಇದರ ಬೆಲೆ 252 ಕೋಟಿ ರೂಪಾಯಿ ಎನ್ನಲಾಗಿದೆ. ಈ ಪ್ರಕರಣದ ಬೆನ್ನು ಹತ್ತಿದಾಗ ಸಾಕಷ್ಟು ವಿಚಾರಗಳು, ಸಾಕಷ್ಟು ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us