ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಹಾಲಿ ಒಲಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿಯ ಪಂದ್ಯದ್ದೇ ದೊಡ್ಡ ಚರ್ಚೆಯಾಗುತ್ತಿದೆ. ಜೊತೆಗೆ ಇದು ಭಾರತದ ಮತ್ತೊಂದು ಮಹೋನ್ನತ ಬಯೋಪಿಕ್ಗೂ ಸಾಕ್ಷಿಯಾಗಬಹುದಾ ಎಂಬ ಚರ್ಚೆಯೂ ಅಭಿಮಾನಿ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಹೌದು. ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಹಾಗೂ ಪಿವಿ ಸಿಂಧು ಅವರ ಪಂದ್ಯಾಟದ್ದೇ ಎಲ್ಲೆಡೆ ಚರ್ಚೆಯಾಗುತ್ತಿರುವುದು. ದೀಪಿಕಾ ಬಾಲಿವುಡ್ ಪ್ರವೇಶಕ್ಕೂ ಮುನ್ನ ಬ್ಯಾಡ್ಮಿಂಟನ್ನಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿದ್ದವರು. ಸದ್ಯ ಪಿವಿ ಸಿಂಧು ಮತ್ತು ದೀಪಿಕಾ ಆಟದ ಝಲಕ್ ಫ್ಯಾನ್ಸ್ ಮನಗೆದ್ದಿದೆ.
‘ಇದು ಮಾಮೂಲಿಯಂತೆ ಮತ್ತೊಂದು ದಿನ. ಸಿಂಧು ಅವರೊಂದಿಗೆ ಆಟವಾಡುತ್ತಾ ಕ್ಯಾಲೋರಿಗಳನ್ನು ಕಳೆದುಕೊಳ್ಳುತ್ತಿದ್ದೇನೆ’ ಎಂದು ಬರೆದುಕೊಂಡು ದೀಪಿಕಾ ಆಟದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಪುತ್ರಿಯಾಗಿರುವ ದೀಪಿಕಾ, ಸಿಂಧುಗೆ ಭರ್ಜರಿ ಪ್ರತಿರೋಧವನ್ನೇ ಒಡ್ಡಿದ್ದಾರೆ. ಸದ್ಯ ಕೆಲ ಸಮಯಗಳಿಂದ ದೀಪಿಕಾ ಹಾಗೂ ಸಿಂಧು ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದೆ. ‘ಪಿವಿ ಸಿಂಧು ಬಯೋಪಿಕ್ ಸದ್ಯದಲ್ಲಿಯೇ ಬರಲಿದೆ…’ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ‘ಬಯೋಪಿಕ್ಗೆ ಸಿದ್ಧತೆ ನಡೆಸುತ್ತಿರುವಂತೆ ತೋರುತ್ತಿದೆ’ ಎಂದು ಹೇಳಿದ್ದಾರೆ. ಈ ಪ್ರಶ್ನೆಗೆ ತಾರೆಯರು ಉತ್ತರಿಸದಿದ್ದರೂ, ಬಯೋಪಿಕ್ಗಾಗಿ ಅಭಿಮಾನಿಗಳು ಕಾಯುತ್ತಿರುವುದು ಸುಳ್ಳಲ್ಲ.
ದೀಪಿಕಾ ಹಂಚಿಕೊಂಡ ಪೋಸ್ಟ್:
ಕೆಲ ದಿನಗಳ ಹಿಂದಷ್ಟೇ ದೀಪಿಕಾ ತಮ್ಮ ಪತಿ ರಣವೀರ್ ಅವರೊಡನೆ ಸಿಂಧು ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದ ಚಿತ್ರಗಳು ವೈರಲ್ ಆಗಿದ್ದವು. ಚಿತ್ರಗಳನ್ನು ಹಂಚಿಕೊಂಡಿದ್ದ ರಣವೀರ್ ಸಿಂಗ್ ‘ಸ್ಮಾಷಿಂಗ್ ಟೈಮ್’ ಎಂದು ಬರೆದುಕೊಂಡಿದ್ದರು. ಅದೇ ಚಿತ್ರಗಳನ್ನು ಹಂಚಿಕೊಂಡಿದ್ದ ಪಿವಿ ಸಿಂಧು, ‘ಈ ಭೇಟಿಯನ್ನು ನಾವೆಷ್ಟು ಎಂಜಾಯ್ ಮಾಡಿದ್ದೇವೆಂದು, ನಮ್ಮ ಮುಖದಲ್ಲಿರುವ ನಗುವೇ ಹೇಳುತ್ತದೆ’ ಎಂದು ಬರೆದುಕೊಂಡಿದ್ದರು.
ಸಿಂಧು ಹಂಚಿಕೊಂಡಿದ್ದ ಪೋಸ್ಟ್:
ಪಿವಿ ಸಿಂಧು ಇತ್ತೀಚೆಗೆ ನಡೆದ ಟೊಕಿಯೊ ಒಲಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರ ಸಾಧನೆಗೆ ಇಡೀ ದೇಶ ಹೆಮ್ಮೆಪಟ್ಟಿತ್ತು.
ಇದನ್ನೂ ಓದಿ:
ಬಸ್ಸಿನಲ್ಲಿ ‘ಗೀತ ಗೋವಿಂದಂ’ ಕಿಸ್ಸು! ಮುತ್ತು ಕೊಟ್ಟಿದ್ದ ಬಳ್ಳಾರಿ ಮೂಲದ ಇಂಜಿನಿಯರ್ ಅರೆಸ್ಟು
ಸ್ಪರ್ಧಿ ತನ್ನೊಂದಿಗೆ ಫ್ಲರ್ಟ್ ಮಾಡಿದಾಗ ಕೆಬಿಸಿ ನಿರ್ಮಾಪಕರಿಗೆ ಶೋ ನಿಲ್ಲಿಸಲು ಹೇಳಿದ ಅಮಿತಾಭ್!; ಕಾರಣವೇನು?
(Deepika Padukone and PV Sindhu playing Badminton so fans asking is there is any chance of Biopic)
Published On - 9:59 am, Wed, 22 September 21