ಕೆಲವೇ ದಿನಗಳ ಹಿಂದೆ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಸಖತ್ ಟ್ರೋಲ್ಗೆ ಒಳಗಾಗಿದ್ದರು. ಮದುವೆಗೂ ಮುನ್ನ ರಣವೀರ್ ಸಿಂಗ್ ಜೊತೆ ರಿಲೇಷನ್ಶಿಪ್ನಲ್ಲಿ ಇದ್ದಾಗಲೇ ಅವರು ಬೇರೆ ಪುರುಷರ ಜೊತೆಗೂ ಡೇಟಿಂಗ್ ಮಾಡಿದ್ದರು. ಆ ಸತ್ಯವನ್ನು ಅವರು ಇತ್ತೀಚೆಗಿನ ‘ಕಾಫಿ ವಿತ್ ಕರಣ್’ (Koffee With Karan) ಶೋನಲ್ಲಿ ಒಪ್ಪಿಕೊಂಡಿದ್ದರು. ಆಗ ರಣವೀರ್ ಸಿಂಗ್ ಸಖತ್ ಸಿಟ್ಟು ಮಾಡಿಕೊಂಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್ ಆದ ಬಳಿಕ ದೀಪಿಕಾ ಅವರನ್ನು ಎಲ್ಲರೂ ಟ್ರೋಲ್ ಮಾಡಿದ್ದರು. ಇನ್ಮುಂದೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ (Ranveer Singh) ಸಂಸಾರದಲ್ಲಿ ಬಿರುಕು ಮೂಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ ರೀತಿ ಏನೂ ಸಮಸ್ಯೆ ಆಗಿಲ್ಲ.
ಮುಂಬೈನಲ್ಲಿ ಜಿಯೋ ವರ್ಲ್ಡ್ ಪ್ಲಾಜಾ ಉದ್ಘಾಟನೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಹಾಜರಿ ಹಾಕಿದ್ದಾರೆ. ಆ ಕಾರ್ಯಕ್ರಮ ಮುಗಿಸಿ ಹೊರಡುವಾಗ ಅವರು ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ತಮ್ಮ ನಡುವೆ ಮನಸ್ತಾಪ ಇಲ್ಲ ಎಂಬುದನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಆಡಿಕೊಳ್ಳುವವರ ಬಾಯಿಯನ್ನು ಅವರು ಮುಚ್ಚಿಸಿದಂತಾಗಿದೆ. ದೀಪಿಕಾ ಮತ್ತು ರಣವೀರ್ ಮದುವೆ ಆಗಿ 5 ವರ್ಷ ಕಳೆದಿದೆ. ಹಾಯಾಗಿ ಅವರು ಸಂಸಾರ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸತ್ಯ ಬಾಯ್ಬಿಟ್ಟು ಟ್ರೋಲ್ ಆದ ದೀಪಿಕಾ ಬೆಂಬಲಕ್ಕೆ ನಿಂತ ಕರಣ್ ಜೋಹರ್
‘ಕಾಫಿ ವಿತ್ ಕರಣ್ 8’ ಶೋನಲ್ಲಿ ದೀಪಿಕಾ ಪಡುಕೋಣೆ ಅವರು ವಿವಾಹಪೂರ್ವದ ಡೇಟಿಂಗ್ ಕಹಾನಿಯನ್ನು ತೆರೆದಿಟ್ಟ ಬಳಿಕ ಟ್ರೋಲ್ ಮಂದಿಗೆ ಹಬ್ಬವಾಗಿತ್ತು. ದೀಪಿಕಾರನ್ನು ಮನಸ್ಸಿಗೆ ಬಂದಂತೆ ಟ್ರೋಲ್ ಮಾಡಲಾಗಿತ್ತು. ಅನೇಕರು ಅವಾಚ್ಯ ಪದಗಳಿಂದಲೂ ಟೀಕೆ ಮಾಡಿದರು. ಆದರೆ ಈ ಯಾವುದೇ ಟ್ರೋಲ್ಗಳ ಬಗ್ಗೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಮೌನದಲ್ಲಿಯೇ ಅವರು ಎಲ್ಲವನ್ನೂ ನಿಭಾಯಿಸಿದ್ದಾರೆ. ತಮ್ಮಿಬ್ಬರ ನಡುವೆ ಬಿರುಕು ಮೂಡಿಲ್ಲ ಎಂಬುದನ್ನು ಅವರೀಗ ಚುಂಬನದ ಮೂಲಕ ತಿಳಿಸಿದ್ದಾರೆ.
ಟ್ರೋಲ್ ಬಳಿಕ ದೀಪಿಕಾ ಪಡುಕೋಣೆ ಅವರು ತಲೆ ಕೆಡಿಸಿಕೊಳ್ಳಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಹಾಗಾಗಲಿಲ್ಲ. ಬಿಂದಾಸ್ ಆಗಿ ರೀಲ್ಸ್ ಮಾಡುವ ಮೂಲಕ ಅವರು ಎಲ್ಲರಿಗೂ ತಿರುಗೇಟು ನೀಡಿದರು. ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿರುವ ‘ಸೋ ಬ್ಯುಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್’ ಎಂಬ ವಿಡಿಯೋಗೆ ಅವರು ರೀಲ್ಸ್ ಮಾಡಿದ್ದಾರೆ. ಇನ್ನುಳಿದಂತೆ ಅವರು ಸಿನಿಮಾ ಮತ್ತು ಜಾಹೀರಾತು ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಟ್ರೋಲ್ಗಳನ್ನು ಅವರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.