ಈ ಡ್ರೆಸ್​ ಧರಿಸಿದ್ದಕ್ಕೆ ಉರ್ಫಿ ಜಾವೇದ್​ಗೆ ಧರ್ಮ ರಕ್ಷಕರಿಂದ ಬಂತು ಕೊಲೆ ಮತ್ತು ರೇಪ್​ ಬೆದರಿಕೆ

ಪ್ರತಿ ದಿನವೂ ವಿಚಿತ್ರ ಎನಿಸುವಂತಹ ಬಟ್ಟೆಗಳನ್ನು ಧರಿಸಿ ಉರ್ಫಿ ಜಾವೇದ್​ ಪೋಸ್​ ನೀಡುತ್ತಾರೆ. ಇದೇ ಅವರಿಗೆ ಫುಲ್​ಟೈಮ್​ ಕಾಯಕ ಆಗಿದೆ. ಇದರಿಂದ ಹತ್ತು ಹಲವು ಕಿರಿಕ್​ ಕೂಡ ಎದುರಾಗುತ್ತಿದೆ. ಈಗ ಅವರ ಹೊಸ ವೇಷ ನೋಡಿ ಕೆಲವರು ರೇಪ್​ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಸಂದೇಶದ ಸ್ಕ್ರೀನ್​ಶಾಟ್​ಗಳನ್ನು ಅವರು ಹಂಚಿಕೊಂಡಿದ್ದಾರೆ.

ಈ ಡ್ರೆಸ್​ ಧರಿಸಿದ್ದಕ್ಕೆ ಉರ್ಫಿ ಜಾವೇದ್​ಗೆ ಧರ್ಮ ರಕ್ಷಕರಿಂದ ಬಂತು ಕೊಲೆ ಮತ್ತು ರೇಪ್​ ಬೆದರಿಕೆ
ಉರ್ಫಿ ಜಾವೇದ್​
Follow us
ಮದನ್​ ಕುಮಾರ್​
|

Updated on: Oct 31, 2023 | 7:12 PM

ನಟಿ ಉರ್ಫಿ ಜಾವೇದ್​ (Urfi Javed) ಅವರಿಗೆ ಕೆಲವರು ಕೊಲೆ ಮತ್ತು ರೇಪ್​ ಬೆದರಿಕೆ ಹಾಕಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ಡ್ರೆಸ್​. ಹೌದು, ಉರ್ಫಿ ಜಾವೇದ್​ ಅವರು ಇತ್ತೀಚೆಗೆ ಹಾಲೋವೀನ್ ಪ್ರಯುಕ್ತ ವಿಶೇಷವಾದ ಕಾಸ್ಟ್ಯೂಮ್​ ಧರಿಸಿದ್ದರು. ‘ಭೂಲ್​ ಭುಲಯ್ಯ’ ಸಿನಿಮಾದಲ್ಲಿ ರಾಜ್​ಪಾಲ್​ ಯಾದವ್​ (Rajpal Yadav) ಅವರು ಮಾಡಿದ್ದ ಚೋಟಾ ಪಂಡಿತ್​ ಎಂಬ ಪಾತ್ರದ ರೀತಿಯಲ್ಲಿ ಉರ್ಫಿ ವೇಷ ಹಾಕಿಕೊಂಡಿದ್ದರು. ಆ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಕೆಲವರಿಗೆ ಈ ಗೆಟಪ್​ ಕಿಂಚಿತ್ತೂ ಇಷ್ಟ ಆಗಿಲ್ಲ. ಹಾಗಾಗಿ ಸಖತ್​ ಟ್ರೋಲ್​ ಮಾಡಲಾಗಿದೆ. ಬರೀ ಟ್ರೋಲ್​ ಆಗಿದ್ದರೆ ಉರ್ಫಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅವರಿಗೆ ಈಗ ರೇಪ್​ ಮತ್ತು ಕೊಲೆ ಬೆದರಿಕೆ (Death Threat) ಹಾಕಲಾಗಿದೆ. ಈ ಬಗ್ಗೆ ಸ್ವತಃ ಉರ್ಫಿ ಜಾವೇದ್​ ಮಾಹಿತಿ ಹಂಚಿಕೊಂಡಿದ್ದಾರೆ.

ಉರ್ಫಿ ಜಾವೇದ್​ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ರಾಜ್​ಪಾಲ್​ ಯಾದವ್​ ಈ ಡ್ರೆಸ್​ ಹಾಕಿದ್ದಾಗ ಯಾರಿಗೂ ತೊಂದರೆ ಆಗಿರಲಿಲ್ಲ. ಆದರೆ ನಾನು ಈ ಡ್ರೆಸ್​ ಹಾಕಿದಾಗ ಎಲ್ಲರಿಗೂ ನನ್ನಿಂದ ತೊಂದರೆ ಆಯಿತು. ಕಾರಣವೇ ಇಲ್ಲದೇ ನನಗೆ ಅನೇಕರಿಂದ ರೇಪ್​ ಮತ್ತು ಕೊಲೆ ಬೆದರಿಗೆ ಬಂದಿದೆ. ಭೂಲ್​ ಭುಲಯ್ಯ ಸಿನಿಮಾ ಬಿಡುಗಡೆ ಆಗಿ 10 ವರ್ಷ ಕಳೆದಿದೆ. ಈಗ ನಾನು ಈ ಬಟ್ಟೆ ಧರಿಸಿದಾಗ ಧರ್ಮ ರಕ್ಷಕರು ಎನಿಸಿಕೊಂಡವರಿಗೆ ಸಡನ್​ ಆಗಿ ಎಚ್ಚರವಾಗಿದೆ. ಯಾವುದೇ ಬಣ್ಣ, ಅಗರ್​ಬತ್ತಿ, ಹೂವು ಇವುಗಳು ಯಾವುದೇ ಧರ್ಮಕ್ಕೆ ಸೀಮಿತವಲ್ಲ’ ಎಂದು ಉರ್ಫಿ ಜಾವೇದ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಉರ್ಫಿ ಜಾವೇದ್​ ಹಾಲೋವೀನ್​ ಅವತಾರ; ಎಲ್ಲ ದಿನವೂ ಡಿಫರೆಂಟ್​ ವೇಷ

ಈ ಪೋಸ್ಟ್​ಗೆ ದಿವ್ಯಾ ಅಗರ್​ವಾಲ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಹುಚ್ಚರು ಅವರು. ನನಗೂ ಬೆದರಿಕೆ ಬಂದಿತ್ತು’ ಎಂದು ಅವರು ಹೇಳಿದ್ದಾರೆ. ಉರ್ಫಿ ಅವರು ಈ ರೀತಿ ಬಟ್ಟೆ ಧರಿಸಿದ್ದಕ್ಕೆ ಕೆಲವರ ಬೆಂಬಲ ಸೂಚಿಸಿದ್ದಾರೆ ಕೂಡ. ‘ನಿಮಗೆ ಪ್ರಬುದ್ಧತೆ ಬಂದಾಗ ಉರ್ಫಿ ಅವರೇ ಸರಿ ಎನಿಸತ್ತದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಎಂದಿನಂತೆ ಉರ್ಫಿಯನ್ನು ಟ್ರೋಲ್​ ಮಾಡುವುದನ್ನು ಮುಂದುವರಿಸಿದ್ದಾರೆ.

ತಮಗೆ ಬಂದ ಕೊಲೆ ಬೆದರಿಕೆ ಸಂದೇಶದ ಸ್ಕ್ರೀನ್​ ಶಾಟ್​ಗಳನ್ನು ಉರ್ಫಿ ಜಾವೇದ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಅವರಿಗೆ ಈ ರೀತಿ ಬೆದರಿಕೆ ಬಂದಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೂಡ ಅವರು ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಕ್ಕೆ ಅನೇಕರು ಬೆದರಿಕೆ ಹಾಕಿದ್ದರು. ಅಲ್ಲದೇ ಉರ್ಫಿ ಮೇಲೆ ಎಫ್​ಐಆರ್​ ಕೂಡ ದಾಖಲಿಸಲಾಗಿತ್ತು. ಪ್ರತಿ ದಿನವೂ ವಿಚಿತ್ರ ಎನಿಸುವಂತಹ ಬಟ್ಟೆಗಳನ್ನು ಧರಿಸಿ ಉರ್ಫಿ ಪೋಸ್​ ನೀಡುತ್ತಾರೆ. ಇದೇ ಅವರಿಗೆ ಫುಲ್​ಟೈಮ್​ ಕಾಯಕ ಆಗಿದೆ. ಇದರಿಂದ ಹತ್ತು ಹಲವು ಕಿರಿಕ್​ ಕೂಡ ಎದುರಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು