Deepika Padukone: ದೀಪಿಕಾ ಬೇರೆ ಪುರುಷರ ಜತೆ ಡೇಟಿಂಗ್​ ಮಾಡಿದ್ದನ್ನು ಒಪ್ಪಿಕೊಂಡ ಬಳಿಕ ರಣವೀರ್​ ಮನಸ್ಥಿತಿ ಹೇಗಿದೆ?

‘ಕಾಫಿ ವಿತ್​ ಕರಣ್​ 8’ ಶೋನಲ್ಲಿ ದೀಪಿಕಾ ಪಡುಕೋಣೆ ಅವರು ವಿವಾಹಪೂರ್ವದ ಡೇಟಿಂಗ್​ ಕಹಾನಿಯನ್ನು ತೆರೆದಿಟ್ಟ ಬಳಿಕ ಟ್ರೋಲ್​ ಮಂದಿಗೆ ಹಬ್ಬವಾಗಿತ್ತು. ಅವರನ್ನು ಮನಸ್ಸಿಗೆ ಬಂದಂತೆ ಟ್ರೋಲ್​ ಮಾಡಲಾಗಿತ್ತು. ಅನೇಕರು ಅವಾಚ್ಯ ಪದಗಳಿಂದಲೂ ಟೀಕೆ ಮಾಡಿದ್ದರು. ದೀಪಿಕಾ ಮತ್ತು ರಣವೀರ್​ ಸಿಂಗ್​ ಅವರ ಹೊಸ ವಿಡಿಯೋ ಈಗ ವೈರಲ್ ಆಗಿದೆ.

Deepika Padukone: ದೀಪಿಕಾ ಬೇರೆ ಪುರುಷರ ಜತೆ ಡೇಟಿಂಗ್​ ಮಾಡಿದ್ದನ್ನು ಒಪ್ಪಿಕೊಂಡ ಬಳಿಕ ರಣವೀರ್​ ಮನಸ್ಥಿತಿ ಹೇಗಿದೆ?
ಜಿಯೋ ವರ್ಲ್ಡ್​ ಪ್ಲಾಜಾ ಉದ್ಘಾಟನೆಗೆ ಬಂದ ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​
Follow us
ಮದನ್​ ಕುಮಾರ್​
|

Updated on: Nov 01, 2023 | 11:11 AM

ಕೆಲವೇ ದಿನಗಳ ಹಿಂದೆ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಸಖತ್​ ಟ್ರೋಲ್​ಗೆ ಒಳಗಾಗಿದ್ದರು. ಮದುವೆಗೂ ಮುನ್ನ ರಣವೀರ್​ ಸಿಂಗ್​ ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದಾಗಲೇ ಅವರು ಬೇರೆ ಪುರುಷರ ಜೊತೆಗೂ ಡೇಟಿಂಗ್​ ಮಾಡಿದ್ದರು. ಆ ಸತ್ಯವನ್ನು ಅವರು ಇತ್ತೀಚೆಗಿನ ‘ಕಾಫಿ ವಿತ್​ ಕರಣ್​’ (Koffee With Karan) ಶೋನಲ್ಲಿ ಒಪ್ಪಿಕೊಂಡಿದ್ದರು. ಆಗ ರಣವೀರ್​ ಸಿಂಗ್​ ಸಖತ್​ ಸಿಟ್ಟು ಮಾಡಿಕೊಂಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್​ ಆದ ಬಳಿಕ ದೀಪಿಕಾ ಅವರನ್ನು ಎಲ್ಲರೂ ಟ್ರೋಲ್​ ಮಾಡಿದ್ದರು. ಇನ್ಮುಂದೆ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ (Ranveer Singh) ಸಂಸಾರದಲ್ಲಿ ಬಿರುಕು ಮೂಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ ರೀತಿ ಏನೂ ಸಮಸ್ಯೆ ಆಗಿಲ್ಲ.

ಮುಂಬೈನಲ್ಲಿ ಜಿಯೋ ವರ್ಲ್ಡ್​ ಪ್ಲಾಜಾ ಉದ್ಘಾಟನೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರು ಹಾಜರಿ ಹಾಕಿದ್ದಾರೆ. ಆ ಕಾರ್ಯಕ್ರಮ ಮುಗಿಸಿ ಹೊರಡುವಾಗ ಅವರು ಪರಸ್ಪರ ಕಿಸ್​ ಮಾಡಿಕೊಂಡಿದ್ದಾರೆ. ತಮ್ಮ ನಡುವೆ ಮನಸ್ತಾಪ ಇಲ್ಲ ಎಂಬುದನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಆಡಿಕೊಳ್ಳುವವರ ಬಾಯಿಯನ್ನು ಅವರು ಮುಚ್ಚಿಸಿದಂತಾಗಿದೆ. ದೀಪಿಕಾ ಮತ್ತು ರಣವೀರ್​ ಮದುವೆ ಆಗಿ 5 ವರ್ಷ ಕಳೆದಿದೆ. ಹಾಯಾಗಿ ಅವರು ಸಂಸಾರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸತ್ಯ ಬಾಯ್ಬಿಟ್ಟು ಟ್ರೋಲ್ ಆದ ದೀಪಿಕಾ ಬೆಂಬಲಕ್ಕೆ ನಿಂತ ಕರಣ್ ಜೋಹರ್

‘ಕಾಫಿ ವಿತ್​ ಕರಣ್​ 8’ ಶೋನಲ್ಲಿ ದೀಪಿಕಾ ಪಡುಕೋಣೆ ಅವರು ವಿವಾಹಪೂರ್ವದ ಡೇಟಿಂಗ್​ ಕಹಾನಿಯನ್ನು ತೆರೆದಿಟ್ಟ ಬಳಿಕ ಟ್ರೋಲ್​ ಮಂದಿಗೆ ಹಬ್ಬವಾಗಿತ್ತು. ದೀಪಿಕಾರನ್ನು ಮನಸ್ಸಿಗೆ ಬಂದಂತೆ ಟ್ರೋಲ್​ ಮಾಡಲಾಗಿತ್ತು. ಅನೇಕರು ಅವಾಚ್ಯ ಪದಗಳಿಂದಲೂ ಟೀಕೆ ಮಾಡಿದರು. ಆದರೆ ಈ ಯಾವುದೇ ಟ್ರೋಲ್​ಗಳ ಬಗ್ಗೆ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಅವರು ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಮೌನದಲ್ಲಿಯೇ ಅವರು ಎಲ್ಲವನ್ನೂ ನಿಭಾಯಿಸಿದ್ದಾರೆ. ತಮ್ಮಿಬ್ಬರ ನಡುವೆ ಬಿರುಕು ಮೂಡಿಲ್ಲ ಎಂಬುದನ್ನು ಅವರೀಗ ಚುಂಬನದ ಮೂಲಕ ತಿಳಿಸಿದ್ದಾರೆ.

ಟ್ರೋಲ್​ ಬಳಿಕ ದೀಪಿಕಾ ಪಡುಕೋಣೆ ಅವರು ತಲೆ ಕೆಡಿಸಿಕೊಳ್ಳಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಹಾಗಾಗಲಿಲ್ಲ. ಬಿಂದಾಸ್ ಆಗಿ ರೀಲ್ಸ್ ಮಾಡುವ ಮೂಲಕ ಅವರು ಎಲ್ಲರಿಗೂ ತಿರುಗೇಟು ನೀಡಿದರು. ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿರುವ ‘ಸೋ ಬ್ಯುಟಿಫುಲ್​, ಸೋ ಎಲಿಗೆಂಟ್​, ಜಸ್ಟ್​ ಲುಕಿಂಗ್​ ಲೈಕ್​ ಎ ವಾವ್​’ ಎಂಬ ವಿಡಿಯೋಗೆ ಅವರು ರೀಲ್ಸ್​ ಮಾಡಿದ್ದಾರೆ. ಇನ್ನುಳಿದಂತೆ ಅವರು ಸಿನಿಮಾ ಮತ್ತು ಜಾಹೀರಾತು ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಟ್ರೋಲ್​ಗಳನ್ನು ಅವರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?