ನಟಿ ದೀಪಿಕಾ ಪಡುಕೋಣೆ (Deepika Padukone) ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಟಿಯರಲ್ಲಿ ಒಬ್ಬರು. ಯಾವುದೇ ಪಾತ್ರವನ್ನು ಕೊಟ್ಟರೂ ಅವರು ಮಾಡುತ್ತಾರೆ. ಪೌರಾಣಿಕ, ರೊಮ್ಯಾನ್ಸ್ ಅಥವಾ ಆ್ಯಕ್ಷನ್ ಯಾವುದೇ ಇದ್ದರೂ ಅವರಿಗೆ ಕಷ್ಟವಲ್ಲ. ಈ ಕಾರಣಕ್ಕೆ ಕಾಲ್ಶೀಟ್ ಪಡೆಯಲು ನಿರ್ಮಾಪಕರು ದೀಪಿಕಾ ಪಡುಕೋಣೆ ಮನೆಯ ಎದುರು ಸಾಲುಗಟ್ಟಿ ನಿಲ್ಲುತ್ತಾರೆ. ದೀಪಿಕಾ ಬಾಲಿವುಡ್ನಲ್ಲಿ (Bollywood) ಟ್ರೆಂಡ್ ಸೆಟ್ಟರ್ ನಟಿ. ವೃತ್ತಿಜೀವನದಲ್ಲಿ ಅವರು ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ಹೀರೋಗಳಷ್ಟೇ ಸಂಭಾವನೆ (Deepika Padukone Remuneration) ಪಡೆಯುತ್ತಾರೆ. ಇತ್ತೀಚೆಗೆ ಅವರ ಒಲವು ಆ್ಯಕ್ಷನ್ ಸಿನಿಮಾಗಳತ್ತ ವಾಲಿದೆ.
ಕನ್ನಡದ ‘ಐಶ್ವರ್ಯಾ’, ಬಾಲಿವುಡ್ನ ಮೊದಲ ಸಿನಿಮಾ ‘ಓಂ ಶಾಂತಿ ಓಂ’, ಬಳಿಕ ಬಂದ ‘ಚೆನ್ನೈ ಎಕ್ಸ್ಪ್ರೆಸ್’ ಸೇರಿ ಹಲವು ಚಿತ್ರಗಳಲ್ಲಿ ದೀಪಿಕಾ ಗ್ಲಾಮರ್ ಪಾತ್ರ ಮಾಡಿದ್ದರು. ಆದರೆ, ಈಗ ಅವರು ಆ್ಯಕ್ಷನ್ ಸಿನಿಮಾಗಳತ್ತ ಒಲವು ತೋರಿಸುತ್ತಿದ್ದಾರೆ. ಈ ವರ್ಷ ರಿಲೀಸ್ ಆದ ‘ಪಠಾಣ್’ ಸಿನಿಮಾದಲ್ಲಿ ಅವರು ಪಾಕಿಸ್ತಾನದ ಐಎಸ್ಐ ಏಜೆಂಟ್ ಪಾತ್ರ ಮಾಡಿದ್ದರು. ಮುಂಬರುವ ಸಿನಿಮಾಗಳಲ್ಲೂ ಅವರು ಇದೇ ರೀತಿಯ ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಮುಂಬರುವ ಸಿನಿಮಾಗಳೇ ಸಾಕ್ಷಿ.
ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರ ಚಿಕ್ಕದು. ಅವರದ್ದು ಅತಿಥಿ ಪಾತ್ರ ಆದರೂ, ಆ್ಯಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಈ ಕಾರಣಕ್ಕೆ ಅವರ ಪಾತ್ರದ ಬಗ್ಗೆ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ. ಇಡೀ ಸಿನಿಮಾ ಉದ್ದಕ್ಕೂ ಆ್ಯಕ್ಷನ್ ಇರಲಿದೆ. ಈ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ಗೆ ಜೊತೆಯಾಗಿ ನಯನತಾರಾ ನಟಿಸಿದ್ದಾರೆ.
ಇದನ್ನೂ ಓದಿ: ‘ಒಂದು ಎಚ್ಚರಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು’; ದೀಪಿಕಾ ಪಡುಕೋಣೆ ಹಾಟ್ ಅವತಾರಕ್ಕೆ ದಂಗಾದ ಪತಿ ರಣವೀರ್ ಸಿಂಗ್
ದೀಪಿಕಾ ಪಡುಕೋಣೆ ಹಾಗೂ ಹೃತಿಕ್ ರೋಷನ್ ಒಟ್ಟಾಗಿ ‘ಫೈಟರ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಬಹಳ ಸಮಯದಿಂದ ಸುದ್ದಿಯಲ್ಲಿದೆ. ಅಭಿಮಾನಿಗಳು ಈ ಚಿತ್ರದಲ್ಲಿ ಹೆಚ್ಚು ಆ್ಯಕ್ಷನ್ ಅನ್ನು ನಿರೀಕ್ಷಿಸಬಹುದು. ದೀಪಿಕಾ ಮತ್ತು ಹೃತಿಕ್ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇವರ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
‘ಸಿಂಗಂ’ ಚಿತ್ರದ ಸರಣಿಗೆ ರೋಹಿತ್ ಶೆಟ್ಟಿ ನಿರ್ದೇಶನ ಇದೆ. ರೋಹಿತ್ ಶೆಟ್ಟಿ ಇದ್ದಲ್ಲಿ ಆ್ಯಕ್ಷನ್ ಇರುತ್ತದೆ. ‘ಸಿಂಗಂ’ ಚಿತ್ರಕ್ಕೆ ಮೂರನೇ ಪಾರ್ಟ್ ಬರುತ್ತಿದೆ. ಅಜಯ್ ದೇವಗನ್ ಅವರಿಗೆ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಅವರು ಕೂಡ ಖಾಕಿ ಸಮವಸ್ತ್ರದಲ್ಲಿ ಆ್ಯಕ್ಷನ್ ಮೆರೆಯಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದ ಶೂಟಿಂಗ್ ಈ ವರ್ಷ ಆರಂಭ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Jawan Prevue: ಅಮ್ಮ-ಮಗನ ಪಾತ್ರದಲ್ಲಿ ದೀಪಿಕಾ ಪಡುಕೋಣೆ-ಶಾರುಖ್ ಖಾನ್? ಭಾರಿ ಟ್ವಿಸ್ಟ್ ನಿರೀಕ್ಷೆಯಲ್ಲಿ ಫ್ಯಾನ್ಸ್
ಪ್ರಭಾಸ್ ಅವರ ಈ ಮಲ್ಟಿಸ್ಟಾರರ್ ಚಿತ್ರದಲ್ಲಿ ದೀಪಿಕಾ ಅವರ ಪಾತ್ರ ಬಹಳ ಮುಖ್ಯವಾಗಿದೆ. ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ದೀಪಿಕಾ ಪಾತ್ರವು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ನೀಡುವ ಭರವಸೆ ಕೊಟ್ಟಿದೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಪಾತ್ರ ಏನು ಅನ್ನೋದನ್ನು ಕಾದು ನೋಡಬೇಕಿದೆ. ಈ ಚಿತ್ರಕ್ಕಾಗಿ ದೀಪಿಕಾ 150 ದಿನಕ್ಕೂ ಹೆಚ್ಚಿನ ಕಾಲ್ಶೀಟ್ ನೀಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.