ದೀಪಿಕಾ ಪ್ರೆಗ್ನೆನ್ಸಿಯಿಂದ ‘ರಾಕಾ’ ಚಿತ್ರದ ಶೂಟ್​​ಗೆ ಇಲ್ಲ ಅಡ್ಡಿ

ಅಲ್ಲು ಅರ್ಜುನ್ ಮತ್ತು ಅಟ್ಲೀ ಕಾಂಬಿನೇಷನ್‌ನ 'ರಾಕಾ' ಸಿನಿಮಾಗೆ ನಟಿ ದೀಪಿಕಾ ಪಡುಕೋಣೆ ಅವರ ಹೆರಿಗೆ ವಿರಾಮ ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ನಟಿಯ ಪ್ರಮುಖ ದೃಶ್ಯಗಳ ಶೂಟಿಂಗ್ ಮುಗಿದಿದ್ದು, ಚಿತ್ರತಂಡ ಮೊದಲೇ ಪ್ಲಾನ್ ಮಾಡಿದಂತೆ ಇತರ ನಟರ ಭಾಗದ ಚಿತ್ರೀಕರಣವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿದೆ.

ದೀಪಿಕಾ ಪ್ರೆಗ್ನೆನ್ಸಿಯಿಂದ ‘ರಾಕಾ’ ಚಿತ್ರದ ಶೂಟ್​​ಗೆ ಇಲ್ಲ ಅಡ್ಡಿ
ದೀಪಿಕಾ

Updated on: Aug 06, 2026 | 10:58 AM

ಮುಖ್ಯಾಂಶಗಳು

  • 'ರಾಕಾ' ಸಿನಿಮಾಗೆ ಇಲ್ಲ ವಿಳಂಬದ ಭೀತಿ
  • ದೀಪಿಕಾ ಪಡುಕೋಣೆಗೆ ಪ್ರೆಗ್ನೆನ್ಸಿ ಬ್ರೇಕ್
  • ಅಟ್ಲೀ ಪಕ್ಕಾ ಪ್ಲಾನ್, ಮುಂದುವರಿದ ಶೂಟಿಂಗ್

ಅಲ್ಲು ಅರ್ಜುನ್ ಮತ್ತು ಹಿಟ್ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ರಾಕಾ’ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ (Deepika Padukone) ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇದಕ್ಕಾಗಿ ಅವರು ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಈ ಬ್ರೇಕ್‌ನಿಂದಾಗಿ ‘ರಾಕಾ’ ಸಿನಿಮಾದ ಚಿತ್ರೀಕರಣಕ್ಕೆ ಯಾವುದೇ ರೀತಿಯ ತೊಂದರೆ ಅಥವಾ ಅಡೆತಡೆ ಉಂಟಾಗುವುದಿಲ್ಲ ಎಂಬ ಸಿಹಿ ಸುದ್ದಿ ಸಿಕ್ಕಿದೆ.

‘ರಾಕಾ’ ಚಿತ್ರತಂಡ ಈ ಸನ್ನಿವೇಶವನ್ನು ಮೊದಲೇ ಊಹಿಸಿತ್ತು. ಹೀಗಾಗಿ, ಅತ್ಯಂತ ಅಚ್ಚುಕಟ್ಟಾದ ಮುಂಜಾಗ್ರತಾ ಯೋಜನೆಯನ್ನು ರೂಪಿಸಿಕೊಂಡಿತ್ತು. ದೀಪಿಕಾ ಅವರ ಪ್ರೆಗ್ನೆನ್ಸಿ ಹಾಗೂ ವಿಶ್ರಾಂತಿಯ ಸಮಯವನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ಅಟ್ಲಿ ಶೂಟಿಂಗ್ ಶೆಡ್ಯೂಲ್ ಅನ್ನು ಮೊದಲೇ ಪ್ಲಾನ್ ಮಾಡಿದ್ದರು. ದೀಪಿಕಾ ಅವರಿಗೆ ಸಂಬಂಧಿಸಿದ ಬಹುತೇಕ ಪ್ರಮುಖ ದೃಶ್ಯಗಳ ಚಿತ್ರೀಕರಣವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಹೀಗಾಗಿ ನಟಿ ವಿರಾಮದಲ್ಲಿದ್ದರೂ ಸಿನಿಮಾಗೆ ಯಾವುದೇ ತೊಂದರೆ ಆಗುವುದಿಲ್ಲ.

ದೀಪಿಕಾ ಗೈರುಹಾಜರಾಗಿರುವ ಈ ಸಮಯದಲ್ಲಿ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದು ದಿನವೂ ವ್ಯರ್ಥವಾಗದಂತೆ ಇತರ ಪ್ರಮುಖ ನಟ-ನಟಿಯರ ಭಾಗದ ಶೂಟಿಂಗ್ ನಡೆಸುತ್ತಿದ್ದಾರೆ. ‘ರಾಕಾ’ ಚಿತ್ರದಲ್ಲಿ ದೀಪಿಕಾ ಅವರ ಪಾತ್ರ ಕಥೆಗೆ ಅತ್ಯಂತ ನಿರ್ಣಾಯಕವಾಗಿದೆ. ಅಟ್ಲಿ ತಮ್ಮ ಹಿಂದಿನ ‘ಜವಾನ್’ ಸಿನಿಮಾದಲ್ಲೂ ದೀಪಿಕಾ ಅವರನ್ನು ವಿಶೇಷವಾಗಿ ತೋರಿಸಿ ಸೈ ಎನಿಸಿಕೊಂಡಿದ್ದರು. ಈಗ ‘ರಾಕಾ’ ಚಿತ್ರದಲ್ಲೂ ಅಲ್ಲು ಅರ್ಜುನ್ ಮತ್ತು ದೀಪಿಕಾ ಕಾಂಬಿನೇಷನ್ ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಸೃಷ್ಟಿಸಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಸಂಸ್ಕೃತಿ ಅರ್ಥೈಸಿಕೊಂಡು ಅದಕ್ಕೆ ಗೌರವ ನೀಡಬೇಕು’; ದೀಪಿಕಾ ಪಡುಕೋಣೆಗೆ ಕೌಂಟರ್

ಯಾವುದೇ ವಿಳಂಬವಿಲ್ಲದೆ ಅಂದುಕೊಂಡ ಸಮಯಕ್ಕೇ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ತೆರೆಗೆ ತರಲು ‘ರಾಕಾ’ ಚಿತ್ರತಂಡ ಶ್ರಮಿಸುತ್ತಿದೆ. ಇದರಿಂದಾಗಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಯಾವುದೇ ಆತಂಕವಿಲ್ಲದೆ ಸಿನಿಮಾ ನಿಗದಿತ ಸಮಯಕ್ಕೆ ಸೆಟ್ಟೇರುವ ಭರವಸೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us