‘ಧುರಂಧರ್ 2’ ಸಿನಿಮಾ ಟ್ರೇಲರ್ ಚೆನ್ನಾಗಿದ್ದರೂ ಅಭಿಮಾನಿಗಳಿಗೆ ಕಾಣ್ತಿದೆ ಕೊರತೆ

ಬಹುನಿರೀಕ್ಷಿತ 'ಧುರಂಧರ್ 2' ಸಿನಿಮಾ ಟ್ರೇಲರ್ ಬಿಡುಗಡೆಯಾಗಿ ಅಭಿಮಾನಿಗಳನ್ನು ರಂಜಿಸಿದೆ. ಆ್ಯಕ್ಷನ್ ಪ್ರಿಯರಿಗೆ ಹಬ್ಬವನ್ನೇ ಉಂಟುಮಾಡಿದ ರಣವೀರ್ ಸಿಂಗ್ ಅವರ ಪಾತ್ರ, ಸಿನಿಮಾದ ಬೃಹತ್ ಕಲೆಕ್ಷನ್ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಆದಾಗ್ಯೂ, ಮೊದಲ ಭಾಗದ ಪ್ರಮುಖ ಪಾತ್ರಧಾರಿ ಅಕ್ಷಯ್ ಖನ್ನಾ ಅವರು ಟ್ರೇಲರ್‌ನಲ್ಲಿ ಕಾಣೆಯಾಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

‘ಧುರಂಧರ್ 2’ ಸಿನಿಮಾ ಟ್ರೇಲರ್ ಚೆನ್ನಾಗಿದ್ದರೂ ಅಭಿಮಾನಿಗಳಿಗೆ ಕಾಣ್ತಿದೆ ಕೊರತೆ
ರಣವೀರ್ ಸಿಂಗ್

Updated on: Mar 07, 2026 | 12:27 PM

ಬಹು ನಿರೀಕ್ಷಿತ ‘ಧುರಂಧರ್ 2’ ಸಿನಿಮಾ (Dhurandhar 2) ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ಈ ಟ್ರೇಲರ್ ಗಮನ ಸೆಳೆದಿದೆ. ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಇದೆ. ರಣವೀರ್ ಸಿಂಗ್ ಅವರು ಟ್ರೇಲರ್ ಅಲ್ಲಿ ರಕ್ತ ಹರಿಸಿದ್ದಾರೆ. ಟ್ರೇಲರ್ ನೋಡಿದರೆ ಸಿನಿಮಾ 2 ಸಾವಿರ ಕೋಟಿ ಕಲೆಕ್ಷನ್ ಮಾಡೋದು ಪಕ್ಕಾ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿವೆ. ಆದರೂ ಒಂದು ಕೊರತೆ ಕಾಣುತ್ತಿದೆ.

‘ಧುರಂಧರ್ 2’ ಸಿನಿಮಾ ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಮೆರೆಯಲಾಗಿದೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಅದ್ಭುತ ಫೀಲ್ ಆಗಿದೆ. ಹಮ್ಜಾ ಅಲಿ ಮಜಾರಿ ಪಾಕಿಸ್ತಾನದಲ್ಲಿ ರೆಹಮಾನ್ ಡಕಾಯಿತ್​​ನ ಕೊಲೆ ಮಾಡುತ್ತಾನೆ. ಈ ಕೊಲೆ ಬಳಿಕ ಹಮ್ಜಾ ಪಾಕಿಸ್ತಾನದ ಡಾನ್ ಆಗುವ ರೀತಿಯಲ್ಲಿ ತೋರಿಸಲಾಗಿದೆ. ಅಲ್ಲದೆ, ಹಮ್ಜಾನ ಹಿಂದಿನ ಕಥೆಯನ್ನು ಕೂಡ ತೋರಿಸಲಾಗಿದೆ.

YouTube video player

ಟ್ರೇಲರ್ ಉದ್ದಕ್ಕೂ ‘ಧುರಂದರ್ 2’ ಚಿತ್ರದಲ್ಲಿ ಆ್ಯಕ್ಷನ್ ಇದೆ. ಇದು ಆ್ಯಕ್ಷನ್ ಪ್ರಿಯರಿಗೆ ಸಾಕಷ್ಟು ಇಷ್ಟ ಆಗುವ ಸಾಧ್ಯತೆ ಇದೆ. ಆದರೆ, ಟ್ರೇಲರ್ ಅಲ್ಲಿ ಎಲ್ಲಿಯೂ ಅಕ್ಷಯ್ ಖನ್ನಾ ಕಾಣಿಸಿಲ್ಲ. ಮೊದಲ ಭಾಗದಲ್ಲಿ ಅವರು ರೆಹಮಾನ್ ಡಕಾಯಿತ್ ಪಾತ್ರ ಮಾಡಿದ್ದರು. ಈ ಪಾತ್ರ ಎಲ್ಲಿಯೂ ತೋರಿಸಿಲ್ಲ. ಇದು ಕೆಲವರ ಬೇಸರಕ್ಕೆ ಕಾರಣ ಆಗಿದೆ. ಕೆಲವು ದೃಶ್ಯಗಳಲ್ಲಿಯಾದರೂ ಅವರು ಕಾಣಿಸಿಕೊಳ್ಳಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಆ್ಯಕ್ಷನ್, ಆ್ಯಕ್ಷನ್, ಆ್ಯಕ್ಷನ್; ಬೀಸ್ಟ್​ ಮೋಡ್​​​ನಲ್ಲಿ ರಿವೇಂಜ್​ಗೆ ಇಳಿದ ರಣವೀರ್

‘ಧುರಂಧರ್ 2’ ಸಿನಿಮಾಗೆ ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋ ಜೊತೆ ಆದಿತ್ಯ ಧಾರ್ ಕೂಡ ಸಿನಿಮಾದ ನಿರ್ಮಾಪಕ. ಭಾರತದ ವ್ಯಕ್ತಿಯೋರ್ವ ಪಾಕಿಸ್ತಾನದಲ್ಲಿ ಸ್ಪೈ ಆಗುತ್ತಾನೆ. ಅಲ್ಲಿಯವರ ಜೊತೆ ಸೇರಿ, ಭಾರತದ ಪರವಾಗಿ ಕೆಲಸ ಮಾಡುತ್ತಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us