ಊಹೆಗೂ ಮೀರಿ ಧುರಂಧರ್ ಕಲೆಕ್ಷನ್; ಸೋಮವಾರಕ್ಕಿಂತ ಮಂಗಳವಾರದ ಗಳಿಕೆ ಜೋರು

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಕೇವಲ 5 ದಿನಗಳಲ್ಲಿ 150 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ, 300 ಕೋಟಿ ಕ್ಲಬ್ ಸೇರುವತ್ತ ಸಾಗಿದೆ. ವಾರದ ದಿನಗಳಲ್ಲೂ ಕುಸಿಯದ ಗಳಿಕೆ ದಾಖಲೆ ನಿರ್ಮಿಸಿದೆ. ವಿವಾದಗಳನ್ನು ಮೆಟ್ಟಿ ನಿಂತು ಪ್ರೇಕ್ಷಕರ ಮನ ಗೆದ್ದ 'ಧುರಂಧರ್', ರಣವೀರ್ ಸಿಂಗ್‌ಗೆ ದೊಡ್ಡ ಗೆಲುವು ತಂದಿದೆ.

ಊಹೆಗೂ ಮೀರಿ ಧುರಂಧರ್ ಕಲೆಕ್ಷನ್; ಸೋಮವಾರಕ್ಕಿಂತ ಮಂಗಳವಾರದ ಗಳಿಕೆ ಜೋರು
ರಣವೀರ್ ಸಿಂಗ್

Updated on: Dec 10, 2025 | 12:55 PM

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಇದೆ. ಈ ಚಿತ್ರ ಊಹೆಗೂ ಮೀರಿ ಗೆಲವು ಕಂಡಿದೆ. ಐದು ದಿನಕ್ಕೆ ಚಿತ್ರ 150 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ಅನಾಯಾಸವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಊಹಿಸಲಾಗಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಸಿನಿಮಾನ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಲಾಗುತ್ತಾ ಇದೆ.

‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ರಿಲೀಸ್​ಗೂ ಮೊದಲೇ ವಿವಾದ ಸೃಷ್ಟಿ ಮಾಡಿತ್ತು. ದೈವ ಅನುಕರಣೆ ಮಾಡಿ ರಣವೀರ್ ಟೀಕೆಗೆ ಗುರಿಯಾಗಿದ್ದು ಇದರಲ್ಲಿ ಮುಖ್ಯವಾದುದ್ದು. ನೆಗೆಟಿವ್ ವಿಷಯಗಳನ್ನು ಸಿನಿಮಾ ಮೆಟ್ಟಿ ನಿಂತಿದೆ.

‘ಧುರಂಧರ್’ ಸಿನಿಮಾ ಮೊದಲ ದಿನ ಗಳಿಸಿದ್ದು, 28 ಕೋಟಿ ರೂಪಾಯಿ. ಶನಿವಾರ 32 ಕೋಟಿ ರೂಪಾಯಿ, ಭಾನುವಾರ 43 ಕೋಟಿ ರೂಪಾಯಿ, ಸೋಮವಾರ 23.35 ಕೋಟಿ ರೂಪಾಯಿ ಗಳಿಸಿ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಮಂಗಳವಾರ (ಡಿಸೆಂಬರ್ 10) ಸಿನಿಮಾದ ಕಲೆಕ್ಷನ್ 26.50 ಕೋಟಿ ರೂಪಾಯಿ.

ಸಾಮಾನ್ಯವಾಗಿ ವಾರದ ದಿನ ಬಂದರೆ ಸಿನಿಮಾದ ಗಳಿಕೆ ಕುಸಿತ ಕಾಣುತ್ತದೆ. ಸೋಮವಾರಕ್ಕಿಂತ ಮಂಗಳವಾರ ಕಲೆಕ್ಷನ್ ಮತ್ತಷ್ಟು ಕುಗ್ಗುತ್ತದೆ. ಆದರೆ, ‘ಧುರಂಧರ್’ ವಿಷಯದಲ್ಲಿ ಅದು ಉಲ್ಟಾ ಆಗಿದೆ. ಸೋಮವಾರಕ್ಕಿಂತ ಮಂಗಳವಾರ ಸಿನಿಮಾ ಹೆಚ್ಚುವರಿಯಾಗಿ 3 ಕೋಟಿ ರೂಪಾಯಿ ಗಳಿಸಿದೆ. ಈ ವಾರಾಂತ್ಯದಲ್ಲಿ ಚಿತ್ರದ ಪ್ರತಿ ದಿನದ ಕಲೆಕ್ಷನ್ 30-40 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅಬ್ಬಬಾ,‘ಧುರಂಧರ್’ ಭಾನುವಾರದ ಗಳಿಕೆ ಇಷ್ಟೊಂದಾ? ಕೊನೆಗೂ ಗೆದ್ದ ರಣವೀರ್ ಸಿಂಗ್

ಆದಿತ್ಯ ಧಾರ್ ಅವರು ಈ ಮೊದಲು ‘ಉರಿ’ ಸಿನಿಮಾ ಮಾಡಿ ಗಮನ ಸೆಳೆದಿದ್ದರು. ಈಗ ಮತ್ತೊಂದು ದೇಶಭಕ್ತಿ ಚಿತ್ರದ ಸಿನಿಮಾ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ‘ಧುರಂಧರ್ 2’ ಸಿನಿಮಾ ಕೂಡ ಬರಲು ರೆಡಿ ಇದೆ. ಮಾರ್ಚ್ 19ರಂದು ಈ ಚಿತ್ರಕ್ಕೆ ಸೀಕ್ವೆಲ್ ರಿಲೀಸ್ ಆಗಲಿದೆ. ಈ ವೇಳೆ ಯಶ್ ನಟನೆಯ ‘ಟಾಕ್ಸಿಕ್’ ಕೂಡ ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.