ಅಬ್ಬಬಾ,‘ಧುರಂಧರ್’ ಭಾನುವಾರದ ಗಳಿಕೆ ಇಷ್ಟೊಂದಾ? ಕೊನೆಗೂ ಗೆದ್ದ ರಣವೀರ್ ಸಿಂಗ್
ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಮೂರೇ ದಿನಕ್ಕೆ 100 ಕೋಟಿ ರೂಪಾಯಿ ಗಳಿಸಿ ದಾಖಲೆ ಸೃಷ್ಟಿಸಿದೆ. ಭಾನುವಾರ ಒಂದೇ ದಿನ 40 ಕೋಟಿ ಗಳಿಸಿದ್ದು, ಚಿತ್ರರಂಗದಲ್ಲಿ ರಣವೀರ್ ಸಿಂಗ್‌ಗೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ವಿವಾದಗಳನ್ನು ಮೆಟ್ಟಿ ನಿಂತು ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಚಿತ್ರರಂಗದಲ್ಲಿ ದೊಡ್ಡ ಗೆಲುವು ಕಾಣದೇ ಬಹಳ ಸಮಯ ಆಗಿತ್ತು. ‘ಧುರಂಧರ್’ ಸಿನಿಮಾ ಅವರಿಗೆ ಅಂತಹ ಒಂದು ದೊಡ್ಡ ಗೆಲುವು ತಂದುಕೊಟ್ಟಿದೆ. ರಿಲೀಸ್ಗೂ ಮೊದಲೇ ಆದ ವಿವಾದ, ಚಿತ್ರದ ಬಗ್ಗೆ ಸೃಷ್ಟಿ ಆದ ನೆಗೆಟಿವ್ ಟಾಕ್ಗಳನ್ನು ರಣವೀರ್ ಸಿಂಗ್ (Ranveer Singh) ಚಿತ್ರ ಮೆಟ್ಟಿ ನಿಂತಿದೆ. ಈ ಮೂಲಕ ಚಿತ್ರದ ಗಳಿಕೆ ಮೂರೇ ದಿನಕ್ಕೆ 100 ಕೋಟಿ ರೂಪಾಯಿ ಆಗಿದೆ. ಇದು ಡಿಸೆಂಬರ್ ಸಮಯ. ಕ್ರಿಸ್ಮಸ್ ರಜೆಗಳು ಚಿತ್ರದ ಗಳಿಕೆ ಹೆಚ್ಚುವಲ್ಲಿ ಸಹಕಾರಿ ಆಗಲಿದೆ.
‘ಧುರಂಧರ್’ ಸಿನಿಮಾ ಸ್ಪೈ ಚಿತ್ರ. ‘ಉರಿ’ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದ ಆದಿತ್ಯ ಧಾರ್ ಅವರು ‘ಧುರಂಧರ್’ ಚಿತ್ರ ನಿರ್ದೇಶನ ಮಾಡಿದ್ದಾರೆ. ಪ್ರೀ ಬುಕಿಂಗ್ ಹೆಚ್ಚಾಗಿ ಆಗದ ಕಾರಣ ಈ ಸಿನಿಮಾ ಮೊದಲ ದಿನ (ಡಿಸೆಂಬರ್ 5) 18-20 ಕೋಟಿ ರೂಪಾಯಿ ಗಳಿಸಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಅಂದಾಜಿಸಿದ್ದರು. ಆದರೆ, ಆ ಲೆಕ್ಕಾಚಾರವನ್ನು ಸಿನಿಮಾ ಮೀರಿತ್ತು. ಮೊದಲ ದಿನ ಈ ಚಿತ್ರ ಕಲೆಕ್ಷನ್ ಮಾಡಿದ್ದು 27 ಕೋಟಿ ರೂಪಾಯಿ.
ಎರಡನೇ ದಿನವಾದ ಶನಿವಾರ ಸಿನಿಮಾ 32 ಕೋಟಿ ರೂಪಾಯಿ ಬಾಚಿಕೊಂಡಿತು. ಭಾನುವಾರ ಸಿನಿಮಾದ ಗಳಿಕೆ 40 ಕೋಟಿ ರೂಪಾಯಿ ಎಂದು ವರದಿ ಆಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 100 ಕೋಟಿ ರೂಪಾಯಿ ಸಮೀಪಿಸಿದೆ.
2023ರಲ್ಲಿ ಬಂದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಅದಕ್ಕೂ ಮೊದಲು ಅವರು ದೊಡ್ಡ ಗೆಲುವು ಕಂಡಿದ್ದು 2019ರ ‘ಗಲ್ಲಿ ಬಾಯ್’ ಸಿನಿಮಾದಲ್ಲಿ. ಈಗ ಅವರಿಗೆ ‘ಧುರಂಧರ್’ ಮತ್ತೊಂದು ಗೆಲುವು ತಂದುಕೊಟ್ಟಿದೆ.
ಇದನ್ನೂ ಓದಿ: ವಿರೋಧದ ನಡುವೆಯೂ ಗೆದ್ದ ರಣವೀರ್ ಸಿಂಗ್: ‘ಧುರಂಧರ್’ ಕಲೆಕ್ಷನ್ ಸೂಪರ್
ಇನ್ನು, ‘ಧುರಂಧರ್ 2’ ಸಿನಿಮಾ ರಿಲೀಸ್ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಈದ್ ಪ್ರಯುಕ್ತ ಮಾರ್ಚ್ 19ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಕೂಡ ರಿಲೀಸ್ ಆಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಕ್ಲ್ಯಾಶ್ ಏರ್ಪಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




