ಕ್ಯಾಮೆರಾ ಎದುರಲ್ಲೇ ಬಯಲಾಯ್ತು ‘ಧುರಂಧರ್’ ಗಾಯಕಿಯ ಕಳ್ಳಾಟ; ಭಾರಿ ಟ್ರೋಲ್

ಲೈವ್ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಜಾಸ್ಮಿನ್ ಸ್ಯಾಂಡ್ಲಸ್ ಅವರು ಕಳ್ಳಾಟ ಆಡಿದ್ದಾರೆ. ಕ್ಯಾಮೆರಾದಲ್ಲಿ ಅವರ ಈ ವರ್ತನೆ ಸೆರೆಯಾಗಿದೆ. ಲೈವ್ ಆಗಿ ಹಾಡುವ ಬದಲು ಲಿಪ್ ಸಿಂಕ್ ಮಾಡಿ ಜಾಸ್ಮಿನ್ ಸ್ಯಾಂಡ್ಲಸ್ ಅವರು ಸಿಕ್ಕಿ ಬಿದ್ದಿದ್ದಾರೆ. ಈ ವಿವಾದದ ಬಗ್ಗೆ ಅವರು ಸದ್ಯಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಕ್ಯಾಮೆರಾ ಎದುರಲ್ಲೇ ಬಯಲಾಯ್ತು ‘ಧುರಂಧರ್’ ಗಾಯಕಿಯ ಕಳ್ಳಾಟ; ಭಾರಿ ಟ್ರೋಲ್
Jasmine Sandlas

Updated on: Apr 22, 2026 | 4:02 PM

ಖ್ಯಾತ ಪಂಜಾಬಿ ಗಾಯಕಿ ಜಾಸ್ಮಿನ್ ಸ್ಯಾಂಡ್ಲಸ್ (Jasmine Sandlas) ಸದ್ಯ ವಿವಾದವೊಂದರ ಕೇಂದ್ರಬಿಂದುವಾಗಿದ್ದಾರೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ (Dhurandhar) ಸಿನಿಮಾದ ಹಾಡುಗಳ ಮೂಲಕ ಜಾಸ್ಮಿನ್ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಆದರೆ ಈ ಗಾಯಕಿಯ ಇತ್ತೀಚಿನ ಲೈವ್ ಕಾನ್ಸರ್ಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೇದಿಕೆ ಮೇಲೆ ಲಿಪ್ ಸಿಂಕ್ (Lip Sync) ಮಾಡಿದ್ದು ಹಾಗೂ ಮೈ ಮೇಲೆ ನೀರು ಸುರಿದುಕೊಂಡಿದ್ದು ಟೀಕೆಗೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಏಪ್ರಿಲ್ 19ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜಾಸ್ಮಿನ್ ಸ್ಯಾಂಡ್ಲಸ್ ಹಾಡು ಹೇಳುತ್ತಿದ್ದರು. ಲೆಹೆಂಗಾ ಧರಿಸಿ ಮಿಂಚುತ್ತಿದ್ದ ಅವರು, ತಮ್ಮ ಹಿಟ್ ಹಾಡು ‘ಶರಾರತ್’ ಹಾಡುತ್ತಿದ್ದಾಗ ಹಠಾತ್ತನೆ ಮೈಮೇಲೆ ನೀರು ಸುರಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ವೇದಿಕೆಯ ಮೇಲೆ ಹಾಡಿನ ಹುಕ್ ಸ್ಟೆಪ್ ಹಾಕುತ್ತಾ ಪ್ರೇಕ್ಷಕರನ್ನು ರಂಜಿಸಲು ಯತ್ನಿಸಿದರು. ಆದರೆ, ಅವರ ಈ ಓವರ್ ಆ್ಯಕ್ಟಿಂಗ್ ನೋಡಿ ಜನರಿಗೆ ಕಿರಿಕಿರಿ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಗಮನಿಸಿದರೆ ಒಂದು ಹಂತದಲ್ಲಿ ಜಾಸ್ಮಿನ್ ಸ್ಯಾಂಡ್ಲಸ್ ಅವರು ಮೈಕ್ ಕೆಳಗೆ ಇಳಿಸಿದರೂ ಹಿನ್ನೆಲೆಯಲ್ಲಿ ಹಾಡು ಪ್ಲೇ ಆಗುತ್ತಿರುವುದು ಕಂಡುಬಂದಿದೆ. ಇದು ಲಿಪ್ ಸಿಂಕ್ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಆದ್ದರಿಂದ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಲೈವ್ ಕಾನ್ಸರ್ಟ್‌ನಲ್ಲೂ ಇವರು ಲೈವ್ ಆಗಿ ಹಾಡುವುದಿಲ್ಲ’ ಎಂದು ಟೀಕಿಸಲಾಗಿದೆ.

ಜಾಸ್ಮಿನ್ ಸ್ಯಾಂಡ್ಲಸ್ ವೈರಲ್ ವಿಡಿಯೋ:

‘ಇವರನ್ನು ಹಾಡಲು ಕರೆಸಿದ್ದಾರೋ ಅಥವಾ ನಟನೆ ಮಾಡಲು ಕರೆಸಿದ್ದಾರೋ’ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ‘ಕೇವಲ ಎರಡು ಹಾಡುಗಳು ಹಿಟ್ ಆದ ಕೂಡಲೇ ಇವರ ಅತಿರೇಕದ ವರ್ತನೆ ಜಾಸ್ತಿಯಾಗಿದೆ’ ಎಂಬ ಟೀಕೆ ಕೂಡ ಬಂದಿದೆ. ಇಷ್ಟೆಲ್ಲ ಟೀಕೆಗಳ ನಡುವೆಯೂ ಜಾಸ್ಮಿನ್ ಸ್ಯಾಂಡ್ಲಸ್ ಅವರ ಅಪ್ಪಟ ಅಭಿಮಾನಿಗಳು ಅವರ ಪರವಾಗಿಯೇ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ತಯಾರಾಗಿದ್ದು ಹೇಗೆ ಗೊತ್ತಾ? ಚಿತ್ರಮಂದಿರದಲ್ಲೇ ನೋಡಿ ಮೇಕಿಂಗ್ ವಿಡಿಯೋ

ಸೂಪರ್ ಹಿಟ್ ಆಗಿರುವ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಒಟ್ಟು ಐದು ಹಾಡುಗಳಿಗೆ ಜಾಸ್​ಮಿನ್ ಸ್ಯಾಂಡ್ಲಸ್ ಧ್ವನಿಯಾಗಿದ್ದಾರೆ. ‘ಶರಾರತ್’, ‘ಮೈ ಔರ್ ತೂ’, ‘ಆರಿ ಆರಿ’ ಮತ್ತು ‘ಜೈಯೇ ಸಜನಾ’ ಹಾಡುಗಳು ಈಗಾಗಲೇ ಭಾರಿ ಫೇಮಸ್ ಆಗಿವೆ. ಈ ಹಾಡುಗಳ ಮೂಲಕ ಜಾಸ್ಮಿನ್ ಸ್ಯಾಂಡ್ಲಸ್ ಅವರಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us