AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್’ ಗೆದ್ದರೂ ರಣವೀರ್ ಸಿಂಗ್ ‘ಶಕ್ತಿಮಾನ್’ ಆಗಲು ಸಾಧ್ಯವಿಲ್ಲ: ಕಾರಣ ಏನು?

ಕಿರುತೆರೆಯಲ್ಲಿ ಸೂಪರ್ ಹಿಟ್ ಆಗಿದ್ದ ಶಕ್ತಿಮಾನ್ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ತಯಾರಿ ನಡೆದಿದೆ. ಆದರೆ ಶಕ್ತಿಮಾನ್ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ರಣವೀರ್ ಸಿಂಗ್ ಅವರಿಗೆ ಶಕ್ತಿಮಾನ್ ಪಾತ್ರ ಹೊಂದಿಕೆ ಆಗುವುದಿಲ್ಲ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.

‘ಧುರಂಧರ್’ ಗೆದ್ದರೂ ರಣವೀರ್ ಸಿಂಗ್ ‘ಶಕ್ತಿಮಾನ್’ ಆಗಲು ಸಾಧ್ಯವಿಲ್ಲ: ಕಾರಣ ಏನು?
Ranveer Singh, Mukesh Khanna
ಮದನ್​ ಕುಮಾರ್​
|

Updated on: Apr 21, 2026 | 7:13 PM

Share

ಭಾರತದ ಮೊದಲ ಸೂಪರ್ ಹೀರೋ ‘ಶಕ್ತಿಮಾನ್’ (Shaktimaan) ಕಥೆಯನ್ನು ಬೆಳ್ಳಿತೆರೆಗೆ ತರುವ ಪ್ಲ್ಯಾನ್ ಇದೆ. ಆದರೆ, ಈ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕಿರುತೆರೆಯ ಶಕ್ತಿಮಾನ್ ನಟ ಮುಖೇಶ್ ಖನ್ನಾ Mukesh Khanna ಅವರು ಸಹಮತಿ ಸೂಚಿಸುತ್ತಿಲ್ಲ. ರಣವೀರ್ ಎಷ್ಟೇ ದೊಡ್ಡ ನಟನಾಗಿದ್ದರೂ ಅವರು ಶಕ್ತಿಮಾನ್ ಪಾತ್ರಕ್ಕೆ ಸೂಕ್ತವಲ್ಲ ಎಂದು ಮುಖೇಶ್ ಖನ್ನಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ರಣವೀರ್ ಸಿಂಗ್ (Ranveer Singh) ಅವರ ನಟನಾ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೂ, ಪಾತ್ರದ ಘನತೆಯ ವಿಚಾರದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ರಣವೀರ್ ಸಿಂಗ್ ಅವರ ಇತ್ತೀಚಿನ ಯಶಸ್ವಿ ಚಿತ್ರಗಳಾದ ‘ಧುರಂಧರ್’ ಮತ್ತು ‘ಧುರಂಧರ್ 2’ ಬಗ್ಗೆ ಮಾತನಾಡಿದ ಖನ್ನಾ, ‘ಅವರು ಅದ್ಭುತ ಶಕ್ತಿಯುಳ್ಳ ನಟ. ಅವರು ಧುರಂಧರ್, ಗಲ್ಲಿ ಬಾಯ್ ಅಥವಾ ಖಿಲ್ಜಿಯಂತಹ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಬಲ್ಲರು. ಆದರೆ ಶಕ್ತಿಮಾನ್ ಪಾತ್ರಕ್ಕೆ ಕೇವಲ ನಟನೆಯಷ್ಟೇ ಸಾಲದು, ಆ ಪಾತ್ರಕ್ಕೆ ಒಪ್ಪುವ ಮುಖವೂ ಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಅಕ್ಷಯ್ ಕುಮಾರ್ ಅವರು ಪೃಥ್ವಿರಾಜ್ ಚೌಹಾಣ್ ಪಾತ್ರ ಮಾಡಿದರು. ಎಷ್ಟೇ ಕಾಸ್ಟ್ಯೂಮ್ ಮತ್ತು ವಿಗ್ ಹಾಕಿದರೂ ಅವರು ಆ ಪಾತ್ರದಂತೆ ಕಾಣಲಿಲ್ಲ. ಐತಿಹಾಸಿಕ ಅಥವಾ ಪೌರಾಣಿಕ ಪಾತ್ರಗಳಿಗೆ ಒಂದು ರೀತಿಯ ಸರಳತೆ ಮತ್ತು ಗಾಂಭೀರ್ಯ ಬೇಕು. ಅದು ರಣವೀರ್ ಅವರ ಇಮೇಜ್‌ಗೆ ಹೊಂದಿಕೆಯಾಗುವುದಿಲ್ಲ’ ಎಂದು ಮುಖೇಶ್ ಖನ್ನಾ ಅವರು ಹೇಳಿದ್ದಾರೆ.

ಸೋನಿ ಪಿಕ್ಚರ್ಸ್ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಉತ್ಸುಕವಾಗಿದ್ದು, ರಣವೀರ್ ಅವರನ್ನೇ ನಾಯಕನನ್ನಾಗಿ ಮಾಡಲು ಬಯಸಿದೆ. ‘ಸೋನಿ ಸಂಸ್ಥೆ ನನಗೆ ಕೋಟಿಗಟ್ಟಲೆ ಹಣ ನೀಡಲು ಸಿದ್ಧವಿದೆ. ಈ ಪ್ರಾಜೆಕ್ಟ್ ತಡೆಹಿಡಿಯುತ್ತಿರುವುದರಿಂದ ನನಗೂ ಆರ್ಥಿಕವಾಗಿ ನಷ್ಟವಾಗುತ್ತಿದೆ. ಆದರೆ ನನಗೆ ಹಣಕ್ಕಿಂತ ಪಾತ್ರದ ಗುಣಮಟ್ಟ ಮುಖ್ಯ. ನನಗೆ ಸ್ಟಾರ್ ನಟ ಬೇಡ, ದೇಶಾದ್ಯಂತ ಆಡಿಷನ್ ನಡೆಸಿ, ಶಕ್ತಿಮಾನ್‌ನಂತಹ ಮುಗ್ಧತೆ ಮತ್ತು ಶಕ್ತಿ ಇರುವ ಹೊಸ ಮುಖವನ್ನು ಹುಡುಕಲು ನಾನು ಸಿದ್ಧನಿದ್ದೇನೆ’ ಎಂದು ಮುಖೇಶ್ ಖನ್ನಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಂಬಾನಿ ಮಗನ ಹುಟ್ಟುಹಬ್ಬದ ಪಾರ್ಟಿ: ಕುಣಿದು ಕುಪ್ಪಳಿಸಿದ ನಟ ರಣವೀರ್ ಸಿಂಗ್

ಒಮ್ಮೆ ಸೋನಿ ಸಂಸ್ಥೆಯು ರಣವೀರ್ ಮತ್ತು ಮುಖೇಶ್ ಖನ್ನಾ ನಡುವೆ ಮೀಟಿಂಗ್ ಏರ್ಪಡಿಸಿತ್ತು. ರಣವೀರ್ ಅವರು ಮುಖೇಶ್ ಖನ್ನಾ ಅವರನ್ನು ಒಪ್ಪಿಸಲು ಪ್ರಯತ್ನಿಸಿದ್ದರು. ಆದರೆ ಖನ್ನಾ ಮಾತ್ರ ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ, ‘ನಿನಗೆ ಶಕ್ತಿಮಾನ್ ಆಗಲು ಇಷ್ಟವಿದ್ದರೆ, ಅದರ ಬದಲು ವಿಲನ್ ತಾಮ್ರಾಜ್ ಕಿಲ್ವಿಶ್ ಪಾತ್ರ ಮಾಡು’ ಎಂದು ರಣವೀರ್‌ಗೆ ಸಲಹೆ ನೀಡಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us