AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್’ ಸಿನಿಮಾ ಆಫರ್ ತಿರಸ್ಕರಿಸಿದರಾ ನಾಗಾರ್ಜುನ?

Dhurandhar movie: ‘ಧುರಂಧರ್’ ಸಿನಿಮಾನಲ್ಲಿ ಅಕ್ಷಯ್ ಖನ್ನ ನಟಿಸಿರುವ ರಹಮಾನ್ ಡಕೈತ್ ಪಾತ್ರ ಸಖತ್ ಹಿಟ್ ಆಗಿದೆ. ಈ ಪಾತ್ರ ಮೊದಲಿಗೆ ದಕ್ಷಿಣದ ಸ್ಟಾರ್ ನಟನಿಗೆ ಆಫರ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ತೆಲುಗಿನ ಸ್ಟಾರ್ ಹೀರೋ ಆಗಿರುವ ಅಕ್ಕಿನೇನಿ ನಾಗಾರ್ಜುನ ಅವರಿಗೆ ರಹಮಾನ್ ಡಕೈತ್ ಪಾತ್ರ ಆಫರ್ ಆಗಿತ್ತು, ಆದರೆ ಅವರು ಪಾತ್ರವನ್ನು ತಿರಸ್ಕರಿಸಿದರು ಎನ್ನಲಾಗುತ್ತಿದೆ. ಈಗ ಸ್ವತಃ ನಾಗಾರ್ಜುನ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಧುರಂಧರ್’ ಸಿನಿಮಾ ಆಫರ್ ತಿರಸ್ಕರಿಸಿದರಾ ನಾಗಾರ್ಜುನ?
Dhurandhar Nagarjuna
ಮಂಜುನಾಥ ಸಿ.
|

Updated on: Feb 15, 2026 | 4:14 PM

Share

ಬಾಲಿವುಡ್‌ನ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಧುರಂಧರ್’ (Dhurandhar) ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನೇ ಬರೆದಿದೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಸಿನಿಮಾನಲ್ಲಿ ಅವರಷ್ಟೆ ಪ್ರಾಮುಖ್ಯತೆಯನ್ನು ಇತರೆ ಪಾತ್ರಗಳು ಸಹ ಪಡೆದುಕೊಂಡಿವೆ. ಅದರಲ್ಲೂ ರಹಮಾನ್ ಡಕೈತ್ ಪಾತ್ರವಂತೂ ಸೂಪರ್ ಹಿಟ್ ಆಗಿದೆ. ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ, ತಾವೇಕೆ ಬಾಲಿವುಡ್​ನ ಪ್ರತಿಭಾವಂತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಈ ಪಾತ್ರ ಮೊದಲಿಗೆ ದಕ್ಷಿಣದ ಸ್ಟಾರ್ ನಟನಿಗೆ ಆಫರ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ತೆಲುಗಿನ ಸ್ಟಾರ್ ಹೀರೋ ಆಗಿರುವ ಅಕ್ಕಿನೇನಿ ನಾಗಾರ್ಜುನ ಅವರಿಗೆ ರಹಮಾನ್ ಡಕೈತ್ ಪಾತ್ರ ಆಫರ್ ಆಗಿತ್ತು, ಆದರೆ ಅವರು ಪಾತ್ರವನ್ನು ತಿರಸ್ಕರಿಸಿದರು ಎನ್ನಲಾಗುತ್ತಿದೆ. ಈಗ ಸ್ವತಃ ನಾಗಾರ್ಜುನ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ನಾಗಾರ್ಜುನ, ‘ಖಂಡಿತವಾಗಿಯೂ ಇಲ್ಲ, ನನಗೆ ಈ ಪಾತ್ರದ ಆಫರ್ ಬಂದಿರಲಿಲ್ಲ. ಆದರೆ ಅಂತಹ ಅದ್ಭುತ ಪಾತ್ರ ನನಗೆ ಸಿಗಬೇಕಿತ್ತು ಎಂದು ಈಗ ಅನಿಸುತ್ತಿದೆ. ‘ಧುರಂಧರ್’ ಒಂದು ಅದ್ಭುತ ಸಿನಿಮಾ. ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಶೈಲಿ ನನಗೆ ತುಂಬಾ ಇಷ್ಟವಾಯಿತು. ಚಿತ್ರದಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ, ವಿಶೇಷವಾಗಿ ಅಕ್ಷಯ್ ಖನ್ನಾ ಅವರ ಅಭಿನಯ ಅದ್ಭುತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮಗೆ ಆಫರ್ ಬಂದಿಲ್ಲ ಎಂಬ ವಿಷಯವನ್ನು ಸ್ಪಷ್ಟಪಡಿಸಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನಾಗಾರ್ಜುನ ಅವರು ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಕೂಲಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ದೊಡ್ಡ ಹಿಟ್ ಆಗದೇ ಇದ್ದರೂ ಸಹ ನಾಗಾರ್ಜುನ ಅವರು ಹೊಸ ಪ್ರಯೋಗಕ್ಕೆ ತಮ್ಮನ್ನು ಒಗ್ಗಿಸಿಕೊಂಡಿದ್ದು ಪ್ರಶಂಸೆಗೆ ಕಾರಣವಾಯ್ತು. ಇದೇ ಕಾರಣಕ್ಕೆ ಈಗ ‘ಧುರಂಧರ್’ ಸಿನಿಮಾದ ನೆಗೆಟಿವ್ ರೋಲ್ ಆಫರ್ ಸಹ ಬಂದಿರಬಹುದು ಎಂದು ನೆಟ್ಟಿಗರು ಊಹೆ ಮಾಡಿ ಸುದ್ದಿ ಹಬ್ಬಿಸಿದ್ದರು. ಆದರೆ ಅದನ್ನು ನಾಗಾರ್ಜುನ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ತಾವು ಅಂಥಹಾ ಪಾತ್ರದಲ್ಲಿ ನಟಿಸಲು ಸಿದ್ದ ಎಂದು ಪರೋಕ್ಷವಾಗಿ ಹೇಳಿದ್ದಾರೆ. ನಾಗಾರ್ಜುನ ಅವರು ಇತ್ತೀಚೆಗೆ ವಿಲನ್ ಪಾತ್ರ, ಪ್ರಮುಖ ಪೋಷಕ ಪಾತ್ರಗಳಲ್ಲಿ ಸಹ ನಟಿಸುತ್ತಿದ್ದಾರೆ ಧನುಶ್ ನಾಯಕನಾಗಿ ನಟಿಸಿದ್ದ ‘ಕುಬೇರ’ ಸಿನಿಮಾನಲ್ಲಿಯೂ ನಾಗಾರ್ಜುನ ಪ್ರಮುಖ ಪೋಷಕ ಪಾತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ:‘ಧುರಂಧರ್ 2’ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ‘ಟಾಕ್ಸಿಕ್’

ಇದೀಗ ನಾಗಾರ್ಜುನ ಅವರು ವೃತ್ತಿಜೀವನದ 100ನೇ ಸಿನಿಮಾನಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ. ಇದನ್ನು ಆರ್‌ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ನಟಿ ಟಬು ಕೂಡ ನಟಿಸುವ ಸಾಧ್ಯತೆ ಇದೆ. ಸಿನಿಮಾಕ್ಕೆ ‘ಲಾಟರಿ ಕಿಂಗ್’ ಎಂದು ಹೆಸರಿಡಲಾಗಿದೆ. ಸಿನಿಮಾವನ್ನು ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಸ್​​ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಮುಂದಿನ ವರ್ಷದ ಸಂಕ್ರಾಂತಿಗೆ ತಮ್ಮ ನಟನೆಯ ಸಿನಿಮಾ ಬಿಡುಗಡೆ ಮಾಡುವುದಾಗಿ ಈಗಾಗಲೇ ನಾಗಾರ್ಜುನ ಘೋಷಣೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆಲ್ಕೋಹಾಲ್ ಸೇವಿಸುತ್ತಾ ಪ್ರಶ್ನೆ ಪತ್ರಿಕೆ ಪರಿಶೀಲಿಸುತ್ತಿರುವ ಶಿಕ್ಷಕ!
ಆಲ್ಕೋಹಾಲ್ ಸೇವಿಸುತ್ತಾ ಪ್ರಶ್ನೆ ಪತ್ರಿಕೆ ಪರಿಶೀಲಿಸುತ್ತಿರುವ ಶಿಕ್ಷಕ!
ಉಪಚುನಾವಣಾ ಫಲಿತಾಂಶದ ಬಗ್ಗೆ ಸಚಿವ ಜಮೀರ್​ ಎದುರು ಸಿಎಂ ಹೇಳಿದ್ದೇನು?
ಉಪಚುನಾವಣಾ ಫಲಿತಾಂಶದ ಬಗ್ಗೆ ಸಚಿವ ಜಮೀರ್​ ಎದುರು ಸಿಎಂ ಹೇಳಿದ್ದೇನು?
ಶ್ರೇಯಸ್ ಹಿಡಿದ ಕ್ಯಾಚ್ ನೋಡಿ ದಂಗಾದ ಮುಂಬೈ ಆಟಗಾರರು; ವಿಡಿಯೋ
ಶ್ರೇಯಸ್ ಹಿಡಿದ ಕ್ಯಾಚ್ ನೋಡಿ ದಂಗಾದ ಮುಂಬೈ ಆಟಗಾರರು; ವಿಡಿಯೋ
ಅಮಿತ್ ಶಾರನ್ನು ನೋಡಿ ಚಾಣಕ್ಯನೂ ಶಾಕ್ ಆಗುತ್ತಿದ್ದ;ಪ್ರಿಯಾಂಕಾ ಗಾಂಧಿ ಲೇವಡಿ
ಅಮಿತ್ ಶಾರನ್ನು ನೋಡಿ ಚಾಣಕ್ಯನೂ ಶಾಕ್ ಆಗುತ್ತಿದ್ದ;ಪ್ರಿಯಾಂಕಾ ಗಾಂಧಿ ಲೇವಡಿ
ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್
ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್
ಮಂತ್ರಾಲಯ ಬಳಿ ಅಪಘಾತ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಗಾಯಾಳು
ಮಂತ್ರಾಲಯ ಬಳಿ ಅಪಘಾತ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಗಾಯಾಳು
ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್
ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್
ವಿನಯ್ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ
ವಿನಯ್ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್