ಬೆಂಗಳೂರಿನಲ್ಲೂ ಎಣ್ಣೆ ಹಾಡು ಹಾಡಲಿದ್ದಾರೆ ದಿಲ್ಜಿತ್ ದೊಸ್ಸಾಂಜ್

|

Updated on: Nov 19, 2024 | 3:04 PM

Diljit Dosanjh: ಪಂಜಾಬಿ ಗಾಯಕ, ನಟ ದಿಲ್ಜಿತ್ ದೊಸ್ಸಾಂಜ್​ ತಮ್ಮ ಹಾಡುಗಳಲ್ಲಿ ಮದ್ಯದ ಬಗ್ಗೆ ಹಾಡು ಹಾಡುತ್ತಾರೆ. ಇದೇ ವಿಷಯಕ್ಕೆ ಇತ್ತೀಚೆಗೆ ತೆಲಂಗಾಣ ಸರ್ಕಾರ ನೊಟೀಸ್​ ನೀಡಿತ್ತು. ಆದರೆ ದಿಲ್ಜಿತ್ ದೊಸ್ಸಾಂಜ್ ಮದ್ಯದ ಬಗ್ಗೆ ಹಾಡುಗಳನ್ನು ಹಾಡಲಿದ್ದಾರೆ.

ಬೆಂಗಳೂರಿನಲ್ಲೂ ಎಣ್ಣೆ ಹಾಡು ಹಾಡಲಿದ್ದಾರೆ ದಿಲ್ಜಿತ್ ದೊಸ್ಸಾಂಜ್
Follow us on

ನಟ, ದಿಲ್ಜಿತ್ ದೊಸ್ಸಾಂಜ್, ವಿಶ್ವ ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು. ಹಾಲಿವುಡ್ ಪಾಪ್ ತಾರೆಯರ ರೀತಿಯಲ್ಲಿ ದಿಲ್ಜಿತ್ ದೊಸ್ಸಾಂಜ್ ಅವರ ಲೈವ್ ಕಾನ್ಸರ್ಟ್​ಗಳು ಭಾರಿ ಜೋರಾಗಿ ನಡೆಯುತ್ತಿವೆ. ಆಸ್ಟ್ರೇಲಿಯಾ, ಲಂಡನ್, ನ್ಯೂಯಾರ್ಕ್​ ಹಲವು ಮಹಾನಗರಗಳಲ್ಲಿ ದಿಲ್ಜಿತ್​ರ ಲೈವ್ ಕಾನ್ಸರ್ಟ್ ನೋಡಲು ಲಕ್ಷಾಂತರ ಮಂದಿ ಬರುತ್ತಿದ್ದಾರೆ. ಭಾರತದಲ್ಲಂತೂ ದಿಲ್ಜೀತ್​ರ ಕಾನ್ಸರ್ಟ್​ ಟಿಕೆಟ್​ಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿವೆ. ಇದೀಗ ಭಾರತದ ಪ್ರಮುಖ ನಗರಗಳಲ್ಲಿ ಕಾನ್ಸರ್ಟ್​ಗಳು ನಡೆಯುತ್ತಿವೆ. ಆದರೆ ಇತ್ತೀಚೆಗಷ್ಟೆ ದಿಲ್ಜಿತ್ ದೊಸ್ಸಾಂಜ್ ತೆಲಂಗಾಣದ ಹೈದರಾಬಾದ್​ನಲ್ಲಿ ಲೈವ್ ಕಾನ್ಸರ್ಟ್ ನಡೆಸಿಕೊಟ್ಟಿದ್ದರು. ಆದರೆ ತೆಲಂಗಾಣ ಸರ್ಕಾರ ದಿಲ್ಜೀತ್​ಗೆ ನೊಟೀಸ್​ ಒಂದನ್ನು ನೀಡಿತ್ತು.

ದಿಲ್ಜಿತ್ ದೊಸ್ಸಾಂಗ್ ತಮ್ಮ ಹಾಡುಗಳಲ್ಲಿ ಮದ್ಯ, ಮಾದಕ ವಸ್ತು, ಹಿಂಸೆಯ ವೈಭವೀಕರಣ ಮಾಡುತ್ತಾ ಬಂದಿದ್ದು, ತೆಲಂಗಾಣದ ಲೈವ್ ಕಾನ್ಸರ್ಟ್​ನಲ್ಲಿ ಆ ರೀತಿಯ ಯಾವುದೇ ಹಾಡುಗಳನ್ನು ಹಾಡಬಾರದೆಂದು ತೆಲಂಗಾಣ ಸರ್ಕಾರ ಮುಂಚಿತವಾಗಿ ನೊಟೀಸ್ ನೀಡಿತ್ತು. ಆದರೆ ದಿಲ್ಜೀತ್ ದೊಸ್ಸಾಂಜ್ ಇದನ್ನು ನಿರ್ಲಕ್ಷಿಸಿದ್ದಾರೆ. ಈ ಕುರಿತು ಮಾತನಾಡಿರುವ ದಿಲ್ಜೀತ್ ದೊಸ್ಸಾಂಗ್, ‘ಭಾರತದ ಎಲ್ಲ ರಾಜ್ಯಗಳಲ್ಲಿಯೂ ಮದ್ಯ ನಿಷೇಧ ಮಾಡಿದರೆ ನಾನು ಸಹ ಮದ್ಯದ ಬಗ್ಗೆ ಹಾಡು ಹಾಡುವುದನ್ನು ನಿಲ್ಲಿಸುತ್ತೇನೆ’ ಎಂದಿದ್ದಾರೆ. ಆ ಮೂಲಕ ತಾವು ತಮ್ಮ ಹಾಡುಗಳಲ್ಲಿ ಮದ್ಯವನ್ನು ವೈಭವೀಕರಿಸುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಖ್ಯಾತ ಗಾಯಕ ದಿಲ್ಜಿತ್ ದೊಸ್ಸಾಂಜ್​ಗೆ ನೊಟೀಸ್ ನೀಡಿದ ತೆಲಂಗಾಣ ಸರ್ಕಾರ

‘ಗುಜರಾತ್​ನಲ್ಲಿ ನಾನು ಮದ್ಯವನ್ನು ಕೊಂಡಾಡುವ ಹಾಡುಗಳನ್ನು ನಾನು ಹಾಡುವುದಿಲ್ಲ ಏಕೆಂದರೆ ಇಲ್ಲಿ ಮದ್ಯ ನಿಷೇಧವಾಗಿದೆ. ಒಂದೊಮ್ಮೆ ದೇಶದಲ್ಲಿರುವ ಎಲ್ಲ ಬಾರುಗಳನ್ನು ಸರ್ಕಾರ ಬಂದ್ ಮಾಡಿದಲ್ಲಿ ನಾನು ಸಹ ಮದ್ಯದ ಬಗ್ಗೆ ಹಾಡುವುದನ್ನು ನಿಲ್ಲಿಸುತ್ತೇನೆ. ಈ ಬಗ್ಗೆ ನಾನು ಶಪಥ ಮಾಡುತ್ತೇನೆ. ಯುವಕರನ್ನು ಮೂರ್ಖರನ್ನಾಗಿ ಮಾಡಲು ಬರುವುದಿಲ್ಲ, ಮದ್ಯ ಸರ್ಕಾರದ ಪ್ರಮುಖ ಆದಾಯದ ಮೂಲ. ಕೋವಿಡ್ ಸಮಯದಲ್ಲಿ ಎಲ್ಲ ಬಂದ್ ಆಗಿದ್ದವು ಆದರೆ ಆಗಲೂ ಸಹ ಬಾರುಗಳು ತೆರೆದಿದ್ದವು’ ಎಂದಿದ್ದಾರೆ.

ಡಿಸೆಂಬರ್ 06 ರಂದು ದಿಲ್ಜಿತ್ ದೊಸ್ಸಾಂಜ್ ಬೆಂಗಳೂರಿನಲ್ಲಿ ಶೋ ನಡೆಸಿಕೊಡಲಿದ್ದಾರೆ. ಅಂದು ಸಹ ಅವರು ದಿಲ್ಜಿತ್ ದೊಸ್ಸಾಂಜ್, ಮದ್ಯದ ಕುರಿತು ಹಾಡುಗಳನ್ನು ಹಾಡಲಿದ್ದಾರೆ. ದಿಲ್ಜಿತ್ ಎಲ್ಲೇ ಕಾನ್ಸರ್ಟ್ ನಡೆಸಿದರೂ ಅಲ್ಲಿನ ಸ್ಥಳೀಯ ಗಾಯಕರನ್ನು ವೇದಿಕೆಗೆ ಕರೆತಂದು ಕೆಲ ಹಾಡುಗಳನ್ನು ಹಾಡಿಸುತ್ತಾರೆ. ಬೆಂಗಳೂರಿನಲ್ಲಿ ಯಾವ ಸ್ಥಳೀಯ ಗಾಯಕನನ್ನು ಕರೆದುಕೊಂಡು ಬರಲಿದ್ದಾರೆ ಕಾದು ನೋಡಬೇಕಿದೆ. ಪಂಜಾಬಿ ಜನರಲ್ಲಿ ಮದ್ಯ ತುಸು ಸಾಮಾನ್ಯ ವಿಷಯ. ಪಂಜಾಬಿ ಗಾಯಕರು, ಮದ್ಯ, ಡ್ರಗ್ಸ್​, ಮಾಫಿಯಾ, ಲೈಂಗಿಕತೆ ಬಗ್ಗೆ ಹಲವಾರು ಹಾಡುಗಳನ್ನು ಮಾಡಿದ್ದು, ಅವು ಬಹಳ ಜನಪ್ರಿಯಗೊಂಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ