‘ನಿಮ್ಮಂತ ಮಕ್ಕಳು ಮಾತ್ರ ಹಾಲು ಕುಡಿಯೋದು’; ಜಾನ್ವಿ ಕಾಲೆಳೆದ ಸೈಫ್ ಅಲಿ ಖಾನ್
ಜಾನ್ವಿ ಕಪೂರ್ ಅವರು ಈಗತಾನೇ ಚಿತ್ರರಂಗಕ್ಕೆ ಬಂದಿದ್ದಾರೆ. ಅವರು ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕಿದೆ. ಹಿರಿಯ ನಟರಿಗೆ ಅವರಿನ್ನೂ ಮಗು ತರ. ಇದನ್ನು ಸೈಫ್ ಅಲಿ ಖಾನ್ ಅವರು ಬೇರೆಯದೇ ರೀತಿಯಲ್ಲಿ ಹೇಳಿದ್ದರು. ಸೈಫ್ ಅವರು ಕೊಟ್ಟ ಕೌಂಟರ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಸೈಫ್ ಅಲಿ ಖಾನ್ ಅವರು ಅನುಭವಿ ನಟ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇತ್ತೀಚೆಗೆ ‘ದೇವರ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಪ್ರಚಾರಕ್ಕಾಗಿ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ತೆರಳಿದ್ದರು. ಈ ವೇಳೆ ಜಾನ್ವಿ ಕಪೂರ್ ಅವರ ಕಾಲನ್ನು ಸೈಫ್ ಅಲಿ ಖಾನ್ ಎಳೆದಿದ್ದರು. ಈ ವಿಡಿಯೋನ ವೈರಲ್ ಮಾಡಲಾಗಿದೆ.
ಜಾನ್ವಿ ಕಪೂರ್ ಅವರು ಈಗತಾನೇ ಚಿತ್ರರಂಗಕ್ಕೆ ಬಂದಿದ್ದಾರೆ. ಅವರು ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕಿದೆ. ಹಿರಿಯ ನಟರಿಗೆ ಅವರಿನ್ನೂ ಮಗು ತರ. ಇದನ್ನು ಸೈಫ್ ಅಲಿ ಖಾನ್ ಅವರು ಬೇರೆಯದೇ ರೀತಿಯಲ್ಲಿ ಹೇಳಿದ್ದರು. ಸೈಫ್ ಅವರು ಕೊಟ್ಟ ಕೌಂಟರ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಶೋನಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಈ ಸ್ಟೋರಿಯಲ್ಲಿ ಇದೆ ಉತ್ತರ.
ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ಪರೀಕ್ಷೆಗೆ ಒಳಗಾಗಿದ್ದರು. ಇದರಲ್ಲಿ ಕೆಲವು ವಿಚಾರಗಳು ಬಯಲಾಗಿವೆಯಂತೆ. ಪರೀಕ್ಷೆಯ ವರದಿಯ ಪ್ರಕಾರ ಸೈಫ್ ಅಲಿ ಖಾನ್ ಬ್ರೆಡ್ ಹಾಗೂ ಹಾಲನ್ನು ತಿನ್ನಬಾರದಂತೆ. ಇದನ್ನು ಅವರು ಶೋನಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ಕೌಟಂರ್ ಕೊಡೋಕೆ ಹೋಗಿ ಜಾನ್ವಿ ಮುಜುಗರ ಅನುಭವಿಸಿದರು.
‘ನಾನು ಮೈದಾ ತಿನ್ನುತ್ತೇನೆ, ಹಾಲನ್ನು ಕುಡಿಯುತ್ತೇನೆ. ನನಗೆ ಏನೂ ಆಗಿಲ್ಲ’ ಎಂದು ಹೇಳುತ್ತಾ ನಕ್ಕರು ಜಾನ್ವಿ ಕಪೂರ್. ಇದಕ್ಕೆ ಕೌಂಟರ್ ಕೊಟ್ಟ ಸೈಫ್ ಅಲಿ ಖಾನ್, ‘ಮಕ್ಕಳು ಮಾತ್ರ ಹಾಲು ಕುಡಿಯೋದು’ ಎಂದಿದ್ದಾರೆ. ಈ ಕೌಂಟರ್ಗೆ ಏನು ಹೇಳಬೇಕು ಎಂಬುದು ಜಾನ್ವಿಗೆ ಗೊತ್ತಾಗಲೇ ಇಲ್ಲ.
View this post on Instagram
ಇದನ್ನೂ ಓದಿ: ಸೀರೆಗೆ ಗ್ಲಾಮರ್ ಸ್ಪರ್ಶ ನೀಡಿದ ಪ್ಯಾನ್ ಇಂಡಿಯಾ ನಟಿ ಜಾನ್ವಿ ಕಪೂರ್
‘ದೇವರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರ ಈಗ ಒಟಿಟಿಗೂ ಕಾಲಿಟ್ಟಿದೆ. ಜೂನಿಯರ್ ಎನ್ಟಿಆರ್, ಸೈಫ್ ಅಲಿ ಖಾನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಾನ್ವಿ ಕಪೂರ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳೋದು ಕೆಲವೇ ನಿಮಿಷ ಮಾತ್ರ. ಈ ಕಾರಣಕ್ಕೆ ಅವರು ಅನೇಕರು ಟೀಕೆ ಎದುರಿಸಬೇಕಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.