‘ಬಿಗ್ ಬಾಸ್ ಹಿಂದಿ ಸೀಸನ್ 18’ ಇತ್ತೀಚೆಗೆ ಆರಂಭ ಆಯಿತು. ಈ ಸೀಸನ್ಗೆ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಮಹೇಶ್ ಬಾಬು ಅವರ ಅತ್ತಿಗೆ ಶಿಲ್ಪಾ ಶಿರೋಡ್ಕರ್ ಅವರು ದೊಡ್ಮನೆಗೆ ಬಂದಿದ್ದಾರೆ. ಅದೇ ರೀತಿ ಅನಿರುದ್ಧ್ ಆಚಾರ್ಯ ಕೂಡ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಈ ಮಧ್ಯೆ ಬಿಗ್ ಬಾಸ್ನ ಮನೆಗೆ ಕತ್ತೆ ಕೂಡ ಅತಿಥಿ ಆಗಿ ಬಂದಿತ್ತು. ಈಗ ಈ ಶೋನಿಂದ ಕತ್ತೆಯನ್ನು ಹೊರಕ್ಕೆ ತರಲಾಗಿದೆ.
ಕತ್ತೆಯನ್ನು ಬಿಗ್ ಬಾಸ್ಗೆ ಏಕೆ ತರಲಾಗಿತ್ತು? ಇದೊಂದು ಪ್ರಯೋಗವೇ ಎನ್ನುವ ಪ್ರಶ್ನೆಯೂ ಮೂಡಿತ್ತು. ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಅನೇಕರು ಈ ವಿಚಾರವಾಗಿ ಧ್ವನಿ ಎತ್ತಿದ್ದರು. ಹೀಗಾಗಿ, ಮ್ಯಾಕ್ಸ್ ಹೆಸರಿನ ಕತ್ತೆಯನ್ನು ಹೊರಕ್ಕೆ ತರಲಾಗಿದೆ. ಇದು ಪ್ರಾಣಿ ಪ್ರಿಯರಿಗೆ ಖುಷಿ ನೀಡಿದೆ.
ಈ ಮೊದಲು ಪ್ರಾಣಿ ದಯಾ ಸಂಘದವರಾದ ಪೆಟಾದವರು ಸಲ್ಮಾನ್ ಖಾನ್ ಶೋಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಬಳಿ ತಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತರಲು ಕೋರಲಾಗಿತ್ತು. ಕೊನೆಗೂ ಈಗ ಕತ್ತೆಯನ್ನು ಹೊರಕ್ಕೆ ತರಲಾಗಿದೆ. ಈ ಬಾರಿ ಬಿಗ್ ಬಾಸ್ನಿಂದ ಹೊರಕ್ಕೆ ಹೋದ ಸ್ಪರ್ಧಿ ಕತ್ತೆಯೇ ಆಗಿದೆ ಅನ್ನೋದು ವಿಶೇಷ.
ಇತ್ತೀಚೆಗೆ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತಪಡಿಸಲಾಯಿತು. ‘ಧನ್ಯವಾದಗಳು ಮೇನಕಾ ಸಂಜಯ್ ಗಾಂಧಿ ಅವರೇ. ಪ್ರಾಣಿಗಳ ಪರವಾಗಿ ಇರುವ ಪಿಎಫ್ಎನ ಮುಖ್ಯಸ್ಥರಾಗಿ ನೀವು ಕತ್ತೆಯನ್ನು ಹೊರತರುವಲ್ಲಿ ಹೋರಾಡಿದ್ದೀರಿ’ ಎಂದು ಬರೆದುಕೊಳ್ಳಲಾಗಿದೆ.
ಈ ಮೊದಲು ವಾಹಿನಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ‘ಕತ್ತೆಯೂ ಒಂದು ಪ್ರಾಣಿ. ಅದು ಮನರಂಜನೆಗೆ ಬಳಕೆ ಆಗಬಾರದು. ಅವುಗಳು ಶಬ್ದವನ್ನು ಕಂಡರೆ ಭಯಪಡುತ್ತವೆ. ಹೀಗಾಗಿ, ಇದು ಸರಿ ಅಲ್ಲ. ಸಲ್ಮಾನ್ ಖಾನ್ ಅವರೇ ನಿಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತನ್ನಿ’ ಎಂದು ಆಗ್ರಹಿಸಲಾಗಿತ್ತು.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು
ಸಲ್ಮಾನ್ ಖಾನ್ ಅವರ ವಿಚಾರಕ್ಕೆ ಬರೋದಾದರೆ ಅವರ ಆಪ್ತರು ಎನಿಸಿಕೊಂಡಿರುವ ಬಾಬಾ ಸಿದ್ಧಿಕಿ ಅವರನ್ನು ಇತ್ತೀಚೆಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಇದು ಶಾಕಿಂಗ್ ಎನಿಸಿದೆ. ಈ ಘಟನೆಯಿಂದ ಹೊರಕ್ಕೆ ಬರೋಕೆ ಅವರಿಗೆ ಸಾಕಷ್ಟು ಸಮಯ ಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.