ಸಲ್ಮಾನ್ ಖಾನ್​ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು

ಬಾಬಾ ಸಿದ್ಧಿಕಿ ಸಾವಿನಿಂದಾಗಿ ಸಲ್ಮಾನ್​ ಖಾನ್​ ಮತ್ತು ಅವರ ಆಪ್ತರಿಗೆ ಆತಂಕ ಹೆಚ್ಚಾಗಿದೆ. ಸಿದ್ಧಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಹೊತ್ತುಕೊಂಡಿದೆ. ಅಲ್ಲದೇ ಸಲ್ಮಾನ್​ ಖಾನ್​ ಅವರಿಗೆ ಸಹಾಯ ಮಾಡುವ ಎಲ್ಲರಿಗೂ ಇದೇ ಗತಿ ಎಂಬರ್ಥ ಬರುವ ರೀತಿಯಲ್ಲಿ ಪೋಸ್ಟ್​ ಮಾಡಲಾಗಿದೆ. ಹಾಗಾಗಿ ಸಲ್ಮಾನ್​ ಖಾನ್​ ಅವರ ಆಪ್ತ ಬಳಗಕ್ಕೆ ಚಿಂತೆ ಶುರುವಾಗಿದೆ.

ಸಲ್ಮಾನ್ ಖಾನ್​ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು
ಸಲ್ಮಾನ್​ ಖಾನ್​, ಬಾಬಾ ಸಿದ್ಧಿಕಿ
Follow us
ಮದನ್​ ಕುಮಾರ್​
|

Updated on: Oct 13, 2024 | 8:38 PM

ಸಲ್ಮಾನ್​ ಖಾನ್​ ಮೇಲೆ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಹಗೆ ಸಾಧಿಸುತ್ತಿದ್ದಾನೆ. ಕೃಷ್ಣಮೃಗ ಭೇಟೆಗೆ ಪ್ರತಿಕಾರವಾಗಿ ಸಲ್ಮಾನ್​ ಖಾನ್​ ಹತ್ಯೆ ಮಾಡುವುದಾಗಿ ಲಾರೆನ್ಸ್​ ಬಿಷ್ಣೋಯ್​ ಪಣ ತೊಟ್ಟಿರುವುದು ಗೊತ್ತೇ ಇದೆ. ಕೆಲವು ತಿಂಗಳ ಹಿಂದೆ ಸಲ್ಮಾನ್​ ಖಾನ್​ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಈಗ ಸಲ್ಮಾನ್ ಖಾನ್ ಅವರ ಆಪ್ತರಾದ ಬಾಬಾ ಸಿದ್ಧಿಕಿ ಹತ್ಯೆ ಮಾಡಲಾಗಿದೆ. ಬಾಬಾ ಸಿದ್ಧಿಕಿ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿರುವಾಗಲೇ ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನವರು ಈ ಹತ್ಯೆಯ ಹೊಣೆ ಹೊತ್ತಿದ್ದಾರೆ.

ಲಾರೆನ್ಸ್​ ಬಿಷ್ಣೋಯ್ಸ್ ಗ್ಯಾಂಗ್​ನವರು ಎನ್ನಲಾದ ವ್ಯಕ್ತಿಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾಗಿದೆ. ಅದರ ಸ್ಕ್ರೀನ್​ ಶಾಟ್​ ವೈರಲ್ ಆಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್​ ಖಾನ್​ ನಡುವೆ ಆಪ್ತ ಒಡನಾಟ ಇತ್ತು. ಅನೇಕ ಸಂದರ್ಭಗಳಲ್ಲಿ ಬಾಬಾ ಸಿದ್ಧಿಕಿ ಮನೆಗೆ ಸಲ್ಲು ತೆರಳಿದ್ದರು. ಸಲ್ಮಾನ್​ ಖಾನ್​ಗೆ ಸಹಾಯ ಮಾಡಿದ್ದಕ್ಕಾಗಿ ಸಿದ್ಧಿಕಿಯ ಹತ್ಯೆ ನಡೆದಂತಿದೆ.

ಫೇಸ್​ಬುಕ್​ ಪೋಸ್ಟ್ ಮೂಲಕ ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಲಾಗಿದೆ. ‘ಸಲ್ಮಾನ್​ ಖಾನ್.. ನಮಗೆ ಈ ಯುದ್ಧ ಬೇಕಿರಲಲ್ಲ. ಆದರೆ ನೀವು ನಮ್ಮ ಸಹೋದರರ ಜೀವಕ್ಕೆ ಹಾನಿ ಮಾಡಿದ್ದೀರಿ. ಒಂದು ಸಮಯದಲ್ಲಿ ಬಾಬಾ ಸಿದ್ಧಿಕಿಗೆ ದಾವುದ್ ಜೊತೆ ಲಿಂಕ್ ಇತ್ತು. ಅನುಜ್ ತಾಪನ್, ದಾವುದ್, ಬಾಲಿವುಡ್, ರಾಜಕೀಯ ಮತ್ತು ಆಸ್ತಿ ಡೀಲ್ ಜೊತೆ ಸಿದ್ಧಿಕಿಗೆ ನಂಟು ಇದ್ದಿದ್ದರಿಂದ ಈ ಸಾವು’ ಎಂದು ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಯಾರನ್ನೂ ಭೇಟಿ ಮಾಡಲ್ಲ: ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ನಿರ್ಧಾರ

‘ನಮಗೆ ಯಾರ ಮೇಲೂ ದ್ವೇಷ ಇಲ್ಲ. ಸಲ್ಮಾನ್​ ಖಾನ್ ಮತ್ತು ದಾವುದ್​ ಗ್ಯಾಂಗ್​ಗೆ ಯಾರೇ ಸಹಾಯ ಮಾಡಿದರೂ ಕೂಡ ಇಂಥದ್ದಕ್ಕೆ ಸಿದ್ಧರಾಗಿರಬೇಕು. ನಮ್ಮ ಸಹೋದರರನ್ನು ಕೊಂದರೆ ನಾವು ಪ್ರತಿಕ್ರಿಯಿಸುತ್ತೇವೆ. ಎಂದಿಗೂ ನಾವಾಗಿಯೇ ಮೊದಲು ದಾಳಿ ಮಾಡಿಲ್ಲ. ಜೈ ಶ್ರೀರಾಮ್, ಜೈ ಭಾರತ್​’ ಎಂದು ಬರಹ ಪೂರ್ಣಗೊಳಿಸಲಾಗಿದೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ ಸಲ್ಮಾನ್​ ಖಾನ್​ ನಿವಾಸದ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಬಾಬಾ ಸಿದ್ಧಿಕಿ ಅವರ ಅಂತ್ಯಕ್ರಿಯೆಯಲ್ಲಿ ಸಲ್ಮಾನ್​ ಖಾನ್​ ಭಾಗಿ ಆಗಿದ್ದಾರೆ. ಸಿನಿಮಾ ಮತ್ತು ಇನ್ನುಳಿದ ಕೆಲಸಗಳಿಗೆ ಸಂಬಂಧಿಸಿದ ಎಲ್ಲ ಮೀಟಿಂಗ್​ಗಳನ್ನು ಅವರು ಕ್ಯಾನ್ಸಲ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ