ಕುಳಿತಲ್ಲೇ ನಿದ್ರಿಸುತ್ತಾರೆ ಸಂಜಯ್ ದತ್; ಅನಿವಾರ್ಯವಾಗಿ ಜೈಲಿನಲ್ಲಿ ಕಲಿತ ತಂತ್ರವಿದು  

1993ರಲ್ಲಿ ಮುಂಬೈನಲ್ಲಿ ಬಾಂಬ್ ಬ್ಲಾಸ್ಟ್ ನಡೆಯಿತು. ಈ ಸಮಯದಲ್ಲಿ ಸಂಜಯ್ ದತ್ ಅವರ ಬಳಿ ಶಸ್ತ್ರಾಸ್ತ್ರಗಳಿದ್ದವು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು. ಅವರಿಗೆ ಶಿಕ್ಷೆ ಕೂಡ ಆಯಿತು. ಪುಣೆಯ ಯರವಾಡ ಜೈಲಿನಲ್ಲಿ ಅವರು ಹಲವು ವರ್ಷ ಇರಬೇಕಾಯಿತು.

ಕುಳಿತಲ್ಲೇ ನಿದ್ರಿಸುತ್ತಾರೆ ಸಂಜಯ್ ದತ್; ಅನಿವಾರ್ಯವಾಗಿ ಜೈಲಿನಲ್ಲಿ ಕಲಿತ ತಂತ್ರವಿದು  
ಸಂಜಯ್ ದತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 14, 2024 | 7:48 AM

ಸಂಜಯ್ ದತ್ ಅವರು ಬಾಲಿವುಡ್​ನಲ್ಲಿ 40 ವರ್ಷಗಳನ್ನು ಕಳೆದಿದ್ದಾರೆ. ಅವರು ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗಲೂ ಬಾಲಿವುಡ್​ನಲ್ಲಿ ಸಿನಿಮಾ ಮಾಡುವುದನ್ನು ಮುಂದುವರಿಸಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಸಂಜಯ್ ದತ್ ಅವರು 1971ರಲ್ಲಿ ‘ರೇಶ್ಮಾ ಔರ್ ಶೇರಾ’ ಸಿನಿಮಾದಲ್ಲಿ ಬಾಲಕ ಕಲಾವಿದರಾಗಿ ಬಣ್ಣದ ಬದುಕು ಆರಂಭಿಸಿದ್ದರು. ನಂತರ ಹೀರೋ ಆದರು. ಅವರು ಜೈಲಿನಲ್ಲಿ ಕಾಲ ಕಳೆದ ಕಾಲವೊಂದಿತ್ತು. ಈ ಬಗ್ಗೆ ಮಾತನಾಡಿದ್ದರು.

1993ರಲ್ಲಿ ಮುಂಬೈನಲ್ಲಿ ಬಾಂಬ್ ಬ್ಲಾಸ್ಟ್ ನಡೆಯಿತು. ಈ ಸಮಯದಲ್ಲಿ ಸಂಜಯ್ ದತ್ ಅವರ ಬಳಿ ಶಸ್ತ್ರಾಸ್ತ್ರಗಳಿದ್ದವು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು. ಅವರಿಗೆ ಶಿಕ್ಷೆ ಕೂಡ ಆಯಿತು. ಪುಣೆಯ ಯರವಾಡ ಜೈಲಿನಲ್ಲಿ ಅವರು ಹಲವು ವರ್ಷ ಇರಬೇಕಾಯಿತು. ಆಗ ಅವರು ಕುಳಿತು ನಿದ್ದೆ ಮಾಡುತ್ತಿದ್ದರು.

ಜೈಲಿನಲ್ಲಿ ಶಿಕ್ಷೆ ಅನುಭವಿಸುವಾಗ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಜೈಲಿನಲ್ಲಿ ಕುಳಿತೇ ಅವರು ನಿದ್ದೆ ಮಾಡುತ್ತಿದ್ದರು. ಅದುವೇ ಅವರಿಗೆ ಅಭ್ಯಾಸ ಆಗಬೇಕಾಯಿತು. ರಿತೇಶ್ ದೇಶ್​ಮುಖ್ ಹಾಗೂ ಸಾಜಿದ್ ಖಾನ್ ನಡೆಸಿಕೊಡುತ್ತಿದ್ದ ‘ಯಾರೋ ಕಿ ಭಾರತ್’ ಶೋನಲ್ಲಿ ಸಂಜಯ್ ದತ್ ಭಾಗಿ ಆಗಿ ಅವರು ಈ ಬಗ್ಗೆ ಹೇಳಿದ್ದರು.

ಅಜಯ್ ದೇವಗನ್, ಅಭಿಷೇಕ್ ಬಚ್ಚನ್ ಜೊತೆ ಈ ಶೋನಲ್ಲಿ ಬಂದಿದ್ದರು. ‘ಅವರು ಕುಳಿತಲ್ಲೇ ನಿದ್ದೆ ಮಾಡುತ್ತಾರೆ’ ಎಂದು ಅಭಿಷೇಕ್ ಬಚ್ಚನ್ ಹೇಳಿದರು. ಸಾಜಿದ್ ಏಕೆ ಎಂದು ಕೇಳಿದರು. ‘ಮಳೆ ಬಂದಾಗ ಸೆಲ್​ಗಳಲ್ಲಿ ನೀರು ತುಂಬುತ್ತಿತ್ತು. ನಾವು ನೀರಲ್ಲೇ ಮಲಗಬೇಕಿತ್ತು. ಹೀಗಾಗಿ ಕುಳಿತು ನಾನು ನಿದ್ದೆ ಮಾಡುತ್ತಿದ್ದೆವು. ಅದುವೇ ಅಭ್ಯಾಸ ಆಗೋಯ್ತು. ಈಗಲೂ ಹಾಗೆಯೇ ಮಲಗುತ್ತೇನೆ’ ಎಂದರು ಅವರು.

ಸಂಜಯ್ ದತ್ ಜೀವನ ಆಧರಿಸಿದ ‘ಸಂಜು’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ರಾಜ್​ಕುಮಾರ್ ಹಿರಾನಿ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಸಂಜಯ್ ದತ್ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸಿದ್ದರು. ಅವರು ಅನುಭವಿಸಿದ ತೊಂದರೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಯಿತು.

ಇದನ್ನೂ ಓದಿ: ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್

ಸಂಜಯ್ ದತ್ ಅವರು ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಜೋಗಿ ಪ್ರೇಮ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ