‘ಜವಾನ್​’, ‘ಪಠಾಣ್​’ ರೀತಿಯೇ ‘ಡಂಕಿ’ ಕೂಡ ಹಿಟ್​ ಆಗುತ್ತೆ ಎಂಬುದಕ್ಕೆ ಇಲ್ಲಿವೆ ಕಾರಣಗಳು..

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ ಮೇಲೆ ಅಭಿಮಾನಿಗಳಿಗೆ ಸಖತ್​ ಭರವಸೆ ಇದೆ. ಪ್ರತಿ ಸಿನಿಮಾದಲ್ಲಿ ಅವರು ವಿಶೇಷವಾದ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ಜೊತೆ ಶಾರುಖ್​ ಖಾನ್​ ಅವರು ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಡಂಕಿ’ ಸಿನಿಮಾದ ಬಲ ಹೆಚ್ಚಿದೆ.

‘ಜವಾನ್​’, ‘ಪಠಾಣ್​’ ರೀತಿಯೇ ‘ಡಂಕಿ’ ಕೂಡ ಹಿಟ್​ ಆಗುತ್ತೆ ಎಂಬುದಕ್ಕೆ ಇಲ್ಲಿವೆ ಕಾರಣಗಳು..
‘ಡಂಕಿ’ ಸಿನಿಮಾ ಪೋಸ್ಟರ್​

Updated on: Dec 15, 2023 | 3:14 PM

ನಟ ಶಾರುಖ್​ ಖಾನ್​ (Shah Rukh Khan) ಅಭಿನಯದ ‘ಡಂಕಿ’ ಸಿನಿಮಾ ಡಿಸೆಂಬರ್​ 21ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾ ಕ್ಲಾಸ್​ ಆಗಿರಲಿದೆ. ಹಾಗಾಗಿ ಇದರ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು ಆಗಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ವರ್ಷ ಬಿಡುಗಡೆ ಆದ ‘ಜವಾನ್​’ ಮತ್ತು ‘ಪಠಾಣ್​’ (Pathaan) ಸಿನಿಮಾಗಳು ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿ ಬೀಗಿವೆ. ಹಾಗಾದರೆ ಡಂಕಿ’ (Dunki Movie) ಕೂಡ ಅದೇ ರೀತಿ ಕಲೆಕ್ಷನ್​ ಮಾಡುತ್ತಾ? ಹೌದು ಎಂಬುದು ಅನೇಕರ ಅಭಿಪ್ರಾಯ. ಅದಕ್ಕೆ ಬಲವಾದ ಕಾರಣಗಳು ಕೂಡ ಇವೆ.

ರಾಜ್​ಕುಮಾರ್​ ಹಿರಾನಿ:

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ ಮೇಲೆ ಅಭಿಮಾನಿಗಳಿಗೆ ಸಖತ್​ ಭರವಸೆ ಇದೆ. ‘3 ಈಡಿಯಟ್ಸ್​’, ‘ಪಿಕೆ’, ‘ಮುನ್ನಾಭಾಯ್​​ ಎಂಬಿಬಿಎಸ್​’ ರೀತಿಯ ಗಮನಾರ್ಹ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರು ನಿರ್ದೇಶನ ಮಾಡುವ ಸಿನಿಮಾಗಳು ಖಂಡಿತವಾಗಿಯೂ ಚೆನ್ನಾಗಿ ಇರುತ್ತವೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇದೆ. ಆದ್ದರಿಂದ ‘ಡಂಕಿ’ ಕೂಡ ಸೂಪರ್​ ಹಿಟ್​ ಆಗಲಿದೆ ಎಂಬುದು ಸಿನಿಪ್ರಿಯರ ಊಹೆ.

ಭರ್ಜರಿ ಕಾಂಬಿನೇಷನ್​:

ರಾಜ್​ಕುಮಾರ್​ ಹಿರಾನಿ ಅವರ ಜೊತೆ ಶಾರುಖ್​ ಖಾನ್​ ಅವರು ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ. ಇಬ್ಬರ ಫ್ಯಾನ್​ ಫಾಲೋಯಿಂಗ್​ ದೊಡ್ಡದಾಗಿದೆ. ರಾಜ್​ಕುಮಾರ್​ ಹಿರಾನಿ ಮತ್ತು ಶಾರುಖ್​ ಖಾನ್​ ಅವರು ಜೊತೆಯಾಗಿ ಮೋಡಿ ಮಾಡುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇದೆ. ಹಾಗಾಗಿ ಜನರು ಈ ಸಿನಿಮಾವನ್ನು ಖಂಡಿತವಾಗಿಯೂ ಗೆಲ್ಲಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: ‘ಡಂಕಿ’ ಚಿತ್ರದ ರಿಲೀಸ್​ ಟೆನ್ಷನ್​ ಮರೆತು ಮಾಲ್ಡೀವ್ಸ್​ಗೆ ತೆರಳಿದ ತಾಪ್ಸಿ ಪನ್ನು

ವಿಶೇಷವಾದ ಕಥೆ:

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾದಲ್ಲಿ ವಿಶೇಷವಾದ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಾಮಿಡಿ ಮತ್ತು ಎಮೋಷನಲ್​ ದೃಶ್ಯಗಳ ಮೂಲಕ ಅವರು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾರೆ. ‘ಡಂಕಿ’ ಸಿನಿಮಾದಲ್ಲೂ ಅದು ಮುಂದುವರಿದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಈ ಕಾರಣದಿಂದಲೂ ಜನರು ‘ಡಂಕಿ’ ಸಿನಿಮಾಗೆ ಮನಸೋಲುವ ಸಾಧ್ಯತೆ ದಟ್ವಾಗಿದೆ.

ಇನ್ನೊಂದೆಡೆ ‘ಸಲಾರ್​’:

ಡಿಸೆಂಬರ್ 21ರಂದು ‘ಡಂಕಿ’ ತೆರೆಕಂಡರೆ, ಡಿಸೆಂಬರ್​ 22ರಂದು ‘ಸಲಾರ್​’ ಬಿಡುಗಡೆ ಆಗಲಿದೆ. ಹಾಗಿದ್ದರೂ ಕೂಡ ಅದರಿಂದ ‘ಡಂಕಿ’ ಸಿನಿಮಾಗೆ ಹೆಚ್ಚೇನೂ ಎಫೆಕ್ಟ್​ ಆಗುವುದಿಲ್ಲ ಎಂಬುದು ಬಾಕ್ಸ್​ ಆಫೀಸ್​ ತಜ್ಞರ ಅಭಿಪ್ರಾಯ. ಉತ್ತರ ಭಾರತದಲ್ಲಿ ಪ್ರಭಾಸ್​ ಅವರು ಮೊದಲಿನಂತೆ ಭರವಸೆ ಉಳಿಸಿಕೊಂಡಿಲ್ಲ. ‘ಸಾಹೋ’, ‘ರಾಧೆ ಶ್ಯಾಮ್​’, ‘ಆದಿಪುರುಷ್​’ ಸಿನಿಮಾಗಳ ಸೋಲಿನಿಂದ ಅವರ ಚಾರ್ಮ್​ ಕಡಿಮೆ ಆಗಿದೆ. ಹಾಗಾಗಿ ‘ಸಲಾರ್​’ ಎದುರು ‘ಡಂಕಿ’ ಅಬ್ಬರಿಸಲಿದೆ ಎಂಬುದು ಅನೇಕರ ವಾದ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us