ಹಿಂದಿ ಸಿನಿಮಾಗಳಲ್ಲಿ ಬರುವ ರೊಮ್ಯಾಂಟಿಕ್ ದೃಶ್ಯ, ಕಿಸ್ಸಿಂಗ್ ದೃಶ್ಯದ ಚರ್ಚೆ ಬಂದಾಗ ಅಲ್ಲಿ ಇಮ್ರಾನ್ ಹಷ್ಮಿ (Emraan Hashmi) ಹೆಸರು ಇರುತ್ತಿತ್ತು. ಅವರು ಮಾಡುತ್ತಿದ್ದ ಪಾತ್ರಗಳೆಲ್ಲವೂ ಅದೇ ರೀತಿ ಇರುತ್ತಿತ್ತು. ಆದರೆ, ಈಗ ಅವರು ತಮ್ಮ ತಮ್ಮ ಇಮೇಜ್ ಸಂಪೂರ್ಣವಾಗಿ ಬದಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಚಿತ್ರರಂಗದಲ್ಲಿ ಅವರು ವಿಲನ್ ಪಾತ್ರ ಮಾಡುವತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ‘ಟೈಗರ್ 3’ ಚಿತ್ರದಲ್ಲಿ ವಿಲನ್ ಆಗಿ ಮಿಂಚಿದ್ದ ಇಮ್ರಾನ್, ಈಗ ‘ಡಾನ್ 3’ ಚಿತ್ರದಲ್ಲೂ ನೆಗೆಟಿವ್ ಪಾತ್ರ ಮಾಡಲು ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವರ್ಷ ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಇಮ್ರಾನ್ ಅವರು ಮಾಜಿ ಐಎಸ್ಐ ಏಜೆಂಟ್ ಪಾತ್ರ ಮಾಡಿದ್ದರು. ಅವರ ನಟನೆ ಎಲ್ಲರ ಮೆಚ್ಚುಗೆ ಪಡೆಯಿತು. ಹಿಂದೆಂದೂ ಕಾಣಿಸದ ಅವತಾರದಲ್ಲಿ ಇಮ್ರಾನ್ ಹಷ್ಮಿ ನಟಿಸಿದ್ದರು. ಈಗ ‘ಡಾನ್ 3’ ಚಿತ್ರದಲ್ಲೂ ಅವರು ವಿಲನ್ ರೋಲ್ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿರೋದು ಒಂದು ಭೇಟಿ.
‘ಟೈಗರ್ 3’ ಚಿತ್ರವನ್ನು ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರ ಮನೆಗೆ ಇಮ್ರಾನ್ ಹಷ್ಮಿ ಭೇಟಿ ನೀಡಿದ್ದಾರೆ. ಈ ಭೇಟಿ ವೇಳೆ ‘ಡಾನ್ 3’ ಬಗ್ಗೆ ಚರ್ಚೆಗಳು ನಡೆದಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ‘ಡಾನ್ ಕಡೆಯಿಂದ ಒಂದೊಳ್ಳೆಯ ಸುದ್ದಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಸದ್ಯ ಎಲ್ಲವೂ ಅಂತೆಕಂತೆ ಹಂತದಲ್ಲಿವೆ. ಚಿತ್ರತಂಡದವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಿದೆ.
ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್’ ಹಾಗೂ ‘ಡಾನ್ 2’ ಚಿತ್ರಗಳಲ್ಲಿ ಶಾರುಖ್ ಖಾನ್ ಅವರು ಡಾನ್ ಪಾತ್ರ ಮಾಡಿದ್ದರು. ಈಗ ಸರಣಿಯ ಮೂರನೇ ಚಿತ್ರಕ್ಕೆ ರಣವೀರ್ ಅವರ ಎಂಟ್ರಿ ಆಗಿದ್ದು, ಶಾರುಖ್ ಹೊರ ನಡೆದಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ. ಶಾರುಖ್ ಅಭಿಮಾನಿಗಳಿಗೆ ಇದು ಇಷ್ಟ ಆಗಿಲ್ಲ. ಹೀಗಾಗಿ ರಣವೀರ್ ಸಿಂಗ್ ಅವರನ್ನು ಟ್ರೋಲ್ ಮಾಡಿದ್ದರು. ಆದರೆ, ಫರ್ಹಾನ್ ಅವರು ರಣವೀರ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. 2025ರ ವೇಳೆಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಡಾನ್ 3’ ನಿರ್ದೇಶಕ ಫರ್ಹಾನ್ ಅಖ್ತರ್ ನಿವಾಸಕ್ಕೆ ಕಿಯಾರಾ ಅಡ್ವಾಣಿ ಭೇಟಿ; ಅಭಿಮಾನಿಗಳಲ್ಲಿ ಮೂಡಿತು ಕುತೂಹಲ
‘ಡಾನ್ 3’ ಚಿತ್ರದಲ್ಲಿ ರಣವೀರ್ ಸಿಂಗ್ ಪಾತ್ರ ಮಾತ್ರ ಅಂತಿಮವಾಗಿದೆ. ‘ಡಾನ್’ ಹಾಗೂ ‘ಡಾನ್ 2’ ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚೋಪ್ರಾ ಈ ಸಿನಿಮಾದಲ್ಲಿ ನಟಿಸೋದು ಅನುಮಾನ ಎನ್ನಲಾಗುತ್ತಿದೆ. ರಿತೇಶ್ ಸಿದ್ವಾನಿ ಹಾಗೂ ಫರ್ಹಾನ್ ಅಖ್ತರ್ ಅವರು ಎಕ್ಸೆಲ್ ಎಂಟರ್ಟೇನ್ಮೆಂಟ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ