ಯಶ್, ರಣ್​​ಬೀರ್ ಕಪೂರ್ ‘ರಾಮಾಯಣ’ ಸಿನಿಮಾಕ್ಕೆ ಕೊರಿಯೋಗ್ರಾಫರ್ ಯಾರು ಗೊತ್ತೆ?

Ramayana movie: ಯಶ್, ರಣ್​​ಬೀರ್ ಕಪೂರ್ ಜಂಟಿಯಾಗಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ಹೆಚ್ಚು ಬಜೆಟ್​ನ ಸಿನಿಮಾ ಆಗಿದೆ. ಈ ಸಿನಿಮಾಕ್ಕಾಗಿ ಪ್ರತಿ ವಿಭಾಗದ ಅತ್ಯುತ್ತಮ ಕಲಾವಿದರನ್ನು, ತಂತ್ರಜ್ಞರನ್ನು ದುಡಿಸಿಕೊಳ್ಳಲಾಗುತ್ತಿದೆ. ಇದೀಗ ಸಿನಿಮಾದ ಹಾಡುಗಳ ನೃತ್ಯ ಸಂಯೋಜನೆಗೆ ಅತ್ಯುತ್ತಮ ಕಲಾವಿದರನ್ನು ಆರಿಸಲಾಗಿದೆ. ಯಾರದು? ಅವರ ವಿಶೇಷತೆ ಏನು?

ಯಶ್, ರಣ್​​ಬೀರ್ ಕಪೂರ್ ‘ರಾಮಾಯಣ’ ಸಿನಿಮಾಕ್ಕೆ ಕೊರಿಯೋಗ್ರಾಫರ್ ಯಾರು ಗೊತ್ತೆ?
Ramayana

Updated on: Nov 07, 2025 | 11:24 AM

ನಟ ಯಶ್, ರಣ್​ಬೀರ್ ಕಪೂರ್, ಸಾಯಿ ಪಲ್ಲವಿ ಇನ್ನೂ ಹಲವು ಸ್ಟಾರ್ ನಟ-ನಟಿಯರು ಒಟ್ಟಿಗೆ ನಟಿಸುತ್ತಿರುವ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ‘ರಾಮಾಯಣ’ ಪ್ರತಿ ವಿಭಾಗದಲ್ಲಿಯೂ ಅದ್ಧೂರಿತನ, ಐಶಾರಾಮಿತನ ಮೆರೆಯುತ್ತಿದೆ. ಪ್ರತಿ ವಿಭಾಗದ ಅತ್ಯುತ್ತಮ ತಂತ್ರಜ್ಞರನ್ನು ಕರೆಸಿ ಸಿನಿಮಾಕ್ಕಾಗಿ ದುಡಿಸಿಕೊಳ್ಳಲಾಗುತ್ತಿದೆ. ಸಂಗೀತಕ್ಕೆ ಇಬ್ಬರು ಆಸ್ಕರ್ ವಿಜೇತರನ್ನು ಒಟ್ಟಿಗೆ ಸೇರಿಸಿರುವ ‘ರಾಮಾಯಣ’ ನಿರ್ಮಾಪಕರು ಈಗ ಹಾಡುಗಳ ಕೊರಿಯೋಗ್ರಫಿಗೆ ಸಹ ಭಾರತದ ಅತ್ಯುತ್ತಮ ನೃತ್ಯ ಕಲಾವಿದರನ್ನು ಆರಿಸಿಕೊಂಡಿದೆ.

‘ದಿಲ್ ತೋ ಪಾಗಲ್ ಹೇ’ ಸೇರಿದಂತೆ ಬಾಲಿವುಡ್​ನ ಹಲವು ಅತ್ಯುತ್ತಮ ಮತ್ತು ಕ್ಲಾಸಿಕ್ ನೃತ್ಯಗಳನ್ನು ಸಂಯೋಜಿಸಿರುವ ಶ್ಯಾಮಕ್ ದವಾರ್ ಅವರು ಇದೀಗ ‘ರಾಮಾಯಣ’ ಸಿನಿಮಾಕ್ಕಾಗಿ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಶ್ಯಾಮಕ್ ದವಾರ್ ಅವರೇ ಖಾತ್ರಿ ಪಡಿಸಿದ್ದಾರೆ. ಶ್ಯಾಮಕ್ ದವಾರ್ ಅವರು ಬಾಲಿವುಡ್​ನ ಲೆಜೆಂಡರಿ ನೃತ್ಯ ನಿರ್ದೇಶಕರುಗಳಲ್ಲಿ ಒಬ್ಬರಾಗಿದ್ದಾರೆ. ಬಾಲಿವುಡ್​ನ ಹಲವು ಕ್ಲಾಸಿಕ್ ಹಾಡುಗಳಿಗೆ ಅಷ್ಟೇ ಕ್ಲಾಸಿಕ್ ಆಗಿ ಅವರು ನೃತ್ಯ ಸಂಯೋಜಿಸಿದ್ದಾರೆ.

ಶ್ಯಾಮಕ್ ಅವರು ಸಿನಿಮಾಗಳಿಗೆ ನೃತ್ಯ ಸಂಯೋಜಿಸುವುದು ಬಹಳ ಅಪರೂಪ. ಅವರಿಗೆ ಪ್ರಾಜೆಕ್ಟ್ ಇಷ್ಟವಾದರಷ್ಟೆ ಅವರು ನೃತ್ಯ ನಿರ್ದೇಶಿಸಲು ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ಯಾಮಕ್, ‘ನಾನೀಗ ಮಾಡುತ್ತಿರುವ ಪ್ರಾಜೆಕ್ಟ್ ದಿಲ್ ತೋ ಪಾಗಲ್ ಹೇ’ ಅಲ್ಲ ಬದಲಿಗೆ ‘ರಾಮಾಯಣ’. ಆ ಸಿನಿಮಾ ನನಗೆ ಆಸಕ್ತಿದಾಯಕ ಎನಿಸಿತು, ಅಲ್ಲಿನ ವಾತಾವರಣ, ಸವಾಲುಗಳು ನನಗೆ ಇಷ್ಟವಾದವು ಹಾಗಾಗಿ ನಾನು ಒಪ್ಪಿಕೊಂಡಿದ್ದೇನೆ. ವಿಶೇಷವಾದುದನ್ನು ‘ರಾಮಾಯಣಕ್ಕಾಗಿ ನಾನು ಮಾಡುತ್ತಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಚಿತ್ರದ ಸಂಭಾವನೆಯನ್ನು ಕ್ಯಾನ್ಸರ್ ಮಕ್ಕಳ ಚಿಕಿತ್ಸೆಗೆ ನೀಡಿದ ವಿವೇಕ್ ಒಬೆರಾಯ್

ಶ್ಯಾಮಕ್ ಅವರು ‘ದಿಲ್ ತೋ ಪಾಗಲ್ ಹೇ’ ಸಿನಿಮಾ ಮೂಲಕ ಬಾಲಿವುಡ್​ನ ನೃತ್ಯ ಶೈಲಿಯನ್ನೇ ಬದಲಾಯಿಸಿದವು. ಅದಾದ ಬಳಿಕ ಅವರು ‘ತಾಲ್’ ಸಿನಿಮಾ ಕೆಲ ಹಾಡುಗಳಿಗೆ ನೃತ್ಯ ಸಂಯೋಜಿಸಿದರು. ‘ಧೂಮ್ 2’, ‘ತಾರೆ ಜಮೀನ್ ಪರ್’, ‘ಯುವರಾಜ’, ‘ರಬ್​ ನೇ ಬನಾದಿ ಜೋಡಿ’, ‘ಭಾಗ್ ಮಿಲ್ಕಾ ಭಾಗ್’ ಈ ರೀತಿಯ ಕೆಲವೇ ಸಿನಿಮಾಗಳ ಕೆಲವು ಹಾಡುಗಳಿಗಷ್ಟೆ ನೃತ್ಯ ಸಂಯೋಜಿಸಿದ್ದಾರೆ.

ಸಿನಿಮಾಗಳ ಹೊರತಾಗಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನೀಡಲಾಗುವ ನೃತ್ಯ ಪ್ರದರ್ಶನಗಳಿಗೆ ಕೊರಿಯೋಗ್ರಾಫ್ ಮಾಡಿದ್ದಾರೆ. 2010ರ ಕಾಮನ್​​ವೆಲ್ತ್ ಗೇಮ್ ಸಮಾರೋಪದ ನೃತ್ಯ, 2006ರ ಕಾಮನ್​​ವೆಲ್ತ್ ಸಮಾರೋಪದ ಪ್ರದರ್ಶನ, ದಾವೋಸ್​​ನ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ನಡೆದ ಉದ್ಘಾಟನಾ ನೃತ್ಯ ಪ್ರದರ್ಶನ, 2023ರ ಪುರುಷರ ಹಾಕಿ ವಿಶ್ವಕಪ್ ಉದ್ಘಾಟನೆ, ಫಿಡೆ ಚೆಸ್ ಚಾಂಪಿಯನ್​​ಶಿಪ್​​ ಉದ್ಘಾಟನಾ ಕಾರ್ಯಕ್ರಮಕ್ಕಾಗಿಯೂ ಇವರು ನೃತ್ಯ ಸಂಯೋಜನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ