AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಚಿತ್ರದ ಸಂಭಾವನೆಯನ್ನು ಕ್ಯಾನ್ಸರ್ ಮಕ್ಕಳ ಚಿಕಿತ್ಸೆಗೆ ನೀಡಿದ ವಿವೇಕ್ ಒಬೆರಾಯ್

ಬಾಲಿವುಡ್​ನ ಖ್ಯಾತ ನಟ ವಿವೇಕ್ ಒಬೆರಾಯ್ ಅವರು ಜನರ ಹೃದಯ ಗೆಲ್ಲುವಂತಹ ಕೆಲಸ ಮಾಡಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿರುವ ಅವರು ತಮ್ಮ ಪಾಲಿನ ಸಂಭಾವನೆಯನ್ನು ದಾನ ಮಾಡಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿವೇಕ್ ಒಬೆರಾಯ್ ಅವರು ಈ ಕುರಿತು ಮಾತಾಡಿದ್ದಾರೆ.

‘ರಾಮಾಯಣ’ ಚಿತ್ರದ ಸಂಭಾವನೆಯನ್ನು ಕ್ಯಾನ್ಸರ್ ಮಕ್ಕಳ ಚಿಕಿತ್ಸೆಗೆ ನೀಡಿದ ವಿವೇಕ್ ಒಬೆರಾಯ್
Vivek Oberoi
ಮದನ್​ ಕುಮಾರ್​
|

Updated on: Oct 29, 2025 | 7:38 PM

Share

ನಟ ವಿವೇಕ್ ಒಬೆರಾಯ್ (Vivek Oberoi) ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಗಳನ್ನು ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರು ಮಾಡುತ್ತಿದ್ದಾರೆ. ಭಾರಿ ದೊಡ್ಡ ಬಜೆಟ್​​ನಲ್ಲಿ ‘ರಾಮಾಯಣ’ ಸಿನಿಮಾ (Ramayana Movie) ತಯಾರಾಗುತ್ತಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣ ಇದೆ. ಎಲ್ಲರಿಗೂ ಭರ್ಜರಿ ಸಂಭಾವನೆ (Ramayana Movie Remuneration) ನೀಡಲಾಗುತ್ತಿದೆ. ಆದರೆ ಈ ಸಿನಿಮಾದಲ್ಲಿ ನಟಿಸಲು ವಿವೇಕ್ ಒಬೆರಾಯ್ ಅವರು ಒಂದು ರೂಪಾಯಿ ಸಂಭಾವನೆ  ಕೂಡ ಪಡೆದುಕೊಳ್ಳುತ್ತಿಲ್ಲ! ಆ ಬಗ್ಗೆ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಮಿತ್ ಮಲ್ಹೋತ್​ರ ಅವರು ‘ರಾಮಾಯಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರು ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ಪಾತ್ರವರ್ಗದಲ್ಲಿ ಇರುವ ಕಲಾವಿದರು ಕೂಡ ಬಹಳ ನಿರೀಕ್ಷೆ ಹೊಂದಿದ್ದಾರೆ. ಸಿನಿಮಾ ಬಗ್ಗೆ ವಿವೇಕ್ ಒಬೆರಾಯ್ ಅವರು ಮಾತನಾಡಿದ್ದಾರೆ.

‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಈ ಚಿತ್ರದಲ್ಲಿ ನಟಿಸಲು ವಿವೇಕ್ ಒಬೆರಾಯ್ ಅವರು ಸಂಭಾವನೆ ಬೇಡ ಎಂದಿದ್ದಾರೆ. ತಮಗೆ ಸಂಭಾವನೆ ನೀಡುವ ಬದಲು ಅದೇ ಹಣವನ್ನು ಕ್ಯಾನ್ಸರ್ ಮಕ್ಕಳ ಚಿಕಿತ್ಸೆಗೆ ನೀಡುವಂತೆ ನಿರ್ಮಾಪಕರಿಗೆ ತಿಳಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

‘ನಿರ್ಮಾಪಕ ನಮಿತ್ ಮಲ್ಹೋತ್ರ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣ ಮೂಲಕ ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಲಿವುಡ್ ಸಿನಿಮಾಗಳಿಗೆ ರಾಮಾಯಣ ಸಿನಿಮಾ ಉತ್ತರ ನೀಡಲಿದೆ. 7ರಿಂದ 8 ಆಸ್ಕರ್ ಪ್ರಶಸ್ತಿ ಪಡೆದ ವಿಎಫ್​ಎಕ್ಸ್ ಕಂಪನಿ ಇದಕ್ಕಾಗಿ ಕೆಲಸ ಮಾಡುತ್ತಿದೆ’ ಎಂದು ವಿವೇಕ್ ಒಬೆರಾಯ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ಒಂದಲ್ಲ, ಎರಡಲ್ಲ ‘ರಾಮಾಯಣ’ ಬಜೆಟ್ ನಾಲ್ಕು ಸಾವಿರ ಕೋಟಿ ರೂಪಾಯಿ; ಯಶ್ ಪಾಲೆಷ್ಟು?

‘ರಾಮಾಯಣವು ಪುರಾಣವೋ ಅಥವಾ ಇತಿಹಾಸವೋ ಎಂಬ ವಾದ ಇದೆ. ನಾವು ಇದನ್ನು ಇತಿಹಾಸ ಎಂದು ನಂಬುತ್ತೇವೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ಬಹಳ ಗ್ರೇಟ್. ನನಗೆ ತುಂಬಾ ಖುಷಿ ಆಗಿದೆ. ಯಶ್, ನಮಿತ್, ರಕುಲ್ ಪ್ರೀತ್ ಸಿಂಗ್ ಮುಂತಾದವರ ಜೊತೆ ಕೆಲಸ ಮಾಡಿದ್ದು ಮಜವಾಗಿತ್ತು. ನನ್ನ ಪಾತ್ರಕ್ಕೆ ಇನ್ನೂ ಒಂದೆರಡು ದಿನಗಳ ಶೂಟಿಂಗ್ ಬಾಕಿ ಇದೆ’ ಎಂದು ವಿವೇಕ್ ಒಬೆರಾಯ್ ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.