‘ರಾಮಾಯಣ ಸಿನಿಮಾ ಸೋತರೆ..’; ಯಶ್ ಚಿತ್ರದ ನಿರ್ಮಾಪಕನ ಬೋಲ್ಡ್ ಹೇಳಿಕೆ
ರಾಮಾಯಣ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಚಿತ್ರದ ಯಶಸ್ಸು ಅಥವಾ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.ಈ ಚಿತ್ರವು ಹಾಲಿವುಡ್ ಚಿತ್ರಗಳಿಗೆ ಸಮನಾಗಿರುವ ಗುಣಮಟ್ಟವನ್ನು ಹೊಂದಿದೆ ಎಂಬುದು ಅವರ ಅಭಿಪ್ರಾಯ. ಚಿತ್ರದಲ್ಲಿ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿದ್ದಾರೆ.

‘ರಾಮಾಯಣ’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್ (Yash), ಸಾಯಿ ಪಲ್ಲವಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಎರಡು ಪಾರ್ಟ್ಗಳು ಬರಲಿದ್ದು, ಇದರ ಬಜೆಟ್ 4 ಸಾವಿರ ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇದು ಭಾರತದ ಅತ್ಯಂತ ದುಬಾರಿ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಈ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ ಬಗ್ಗೆ ಒಂದು ದೊಡ್ಡ ಹೇಳಿಕೆ ನೀಡಿದ್ದಾರೆ.
ಯಾವುದೇ ಸಿನಿಮಾ ಸೋತರೂ ನಿರ್ಮಾಪಕರು ಅದನ್ನು ಒಪ್ಪಿಕೊಳ್ಳಲು ರೆಡಿ ಇರೋದಿಲ್ಲ. ಸಿನಿಮಾ ರಿಲೀಸ್ ಆಗಿ ಹೀನಾಯ ಕಲೆಕ್ಷನ್ ಮಾಡುತ್ತಿದ್ದರೂ ಸಕ್ಸಸ್ ಮೀಟ್ ಆಯೋಜನೆ ಮಾಡಿದ ಸಾಕಷ್ಟು ಉದಾಹರಣೆ ಇದೆ. ಇನ್ನೂ ಕೆಲವರು, ಸಿನಿಮಾ ಸೋಲಿನ ಹೊಣೆಯನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದರೆ, ‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಇದಕ್ಕೆ ಭಿನ್ನ. ಸಿನಿಮಾ ರಿಲೀಸ್ಗೆ ವರ್ಷ ಇರುವಾಗಲೇ ಚಿತ್ರದ ಬಗ್ಗೆ ವಿಶ್ವಾಸ ಹೊರಹಾಕಿದ್ದಾರೆ.
‘ರಾಮಾಯಣ’ ಕೇವಲ ಭಾರತದವರಿಗಾಗಿ ಮಾಡುತ್ತಿರುವ ಸಿನಿಮಾ ಅಲ್ಲ. ಇದು ವಿಶ್ವಕ್ಕಾಗಿ ಮಾಡುತ್ತಿರುವ ಸಿನಿಮಾ ಎಂದು ನಮಿತ್ ಹೇಳಿದ್ದಾರೆ. ರಾಮಾಯಣ ಹಿಂದೂಗಳ ನಂಬಿಕೆಯಲ್ಲಿ ಇದೆ. ಆದರೆ, ಈ ಚಿತ್ರ ಇದರ ಮೇಲೆ ನಂಬಿಕೆ ಇರುವವರು ಹಾಗೂ ನಂಬಿಕೆ ಇಲ್ಲದವರು ಇಬ್ಬರನ್ನು ರಂಜಿಸುತ್ತದೆ ಎಂದು ಹೇಳಿದ್ದಾರೆ ಅವರು.
ಇದನ್ನೂ ಓದಿ: ಎಲ್ಲೆ ಮೀರಿದ ಪುಷ್ಪಾ ಮಾತು; ಮಧ್ಯಸ್ಥಿಕೆಗೆ ಬರ್ತಾರಾ ರಾಕಿಂಗ್ ಸ್ಟಾರ್ ಯಶ್?
ಹಾಲಿವುಡ್ನ ಖ್ಯಾತ ಸಿನಿಮಾಗಳ ಜೊತೆ ನಮಿತ್ ಅವರು ರಾಮಾಯಣ ಚಿತ್ರವನ್ನು ಹೋಲಿಸಿದ್ದಾರೆ. ‘ಪಾಶ್ಚಾತ್ಯರು ರಾಮಾಯಣ ಚಿತ್ರವನ್ನು ಇಷ್ಪಟ್ಟಿಲ್ಲ ಎಂದರೆ ನಾನು ಅದನ್ನು ವೈಫಲ್ಯ ಎಂದೇ ಪರಿಗಣಿಸುತ್ತೇನೆ. ಇದು ವಿಶ್ವದವರನ್ನು ಉದ್ದೇಶಿಸಿ ಮಾಡಿದ ಸಿನಿಮಾ. ನಿಮಗೂ ಇದು ಇಷ್ಟ ಆಗಿಲ್ಲ ಎಂದರೆ ತಪ್ಪು ನನ್ನದೇ ಎಂದುಕೊಳ್ಳುತ್ತೇನೆ. ಇನ್ನೂ ಉತ್ತಮವಾಗಿ ಕೆಲಸ ಮಾಡಬಹುದಿತ್ತು ಎಂದು ಭಾವಿಸುತ್ತೇನೆ’ ಎಂದಿದ್ದಾರೆ ನಿರ್ಮಾಪಕರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








