ಕೇರಳದಲ್ಲಿ ‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ಸಲ್ಮಾನ್ ಋಣ ತೀರಿಸಿದ ರಾಜ್ ಬಿ ಶೆಟ್ಟಿ
ಒಂದು ಸಿನಿಮಾ ಪರಭಾಷೆಯಲ್ಲಿ ಹೋಗಿ ಯಶಸ್ಸು ಕಾಣಬೇಕು ಎಂದರೆ ಅಲ್ಲಿ ಒಳ್ಳೆಯ ಹಂಚಿಕೆದಾರರು ಬೇಕೆ ಬೇಕು. ಅದೇ ರೀತಿ ‘ಸು ಫ್ರಮ್ ಸೋ’ ಚಿತ್ರವನ್ನು ದುಲ್ಖರ್ ಅವರು ಮಲಯಾಳಂನಲ್ಲಿ ಹಂಚಿಕೆ ಮಾಡಿದ್ದರು. ಇದರಿಂದ ಸಿನಿಮಾಗೆ ಅಲ್ಲಿ ಮೈಲೇಜ್ ಸಿಕ್ಕಿತು. ಈಗ ರಾಜ್ ಅವರು ದುಲ್ಖರ್ ನಿರ್ಮಾಣದ ಸಿನಿಮಾನ ಕರ್ನಾಟಕದಲ್ಲಿ ಹಂಚಿಕೆ ಮಾಡುತ್ತಿದ್ದಾರೆ.

ರಾಜ್ ಬಿ. ಶೆಟ್ಟಿ (Raj B Shetty) ನಿರ್ಮಾಣದ ‘ಸು ಫ್ರಮ್ ಸೋ’ ಕೇವಲ ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಭೇಷ್ ಎನಿಸಿಕೊಂಡಿತು. ಮಲಯಾಳಂನಲ್ಲಿ ಜನರು ಸಿನಿಮಾನ ಇಷ್ಟಪಟ್ಟರು. ಅಲ್ಲಿ ದುಲ್ಖರ್ ಸಲ್ಮಾನ್ ಅವರು ಚಿತ್ರವನ್ನು ಹಂಚಿಕೆ ಮಾಡಿದ್ದರು. ಈಗ ಈ ಸಹಾಯಕ್ಕೆ ಪ್ರತಿಯಾಗಿ ರಾಜ್ ಬಿ. ಶೆಟ್ಟಿ ಅವರು ದುಲ್ಖರ್ಗೆ ಸಹಾಯ ಒಂದನ್ನು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಒಂದು ಸಿನಿಮಾ ಪರಭಾಷೆಯಲ್ಲಿ ಹೋಗಿ ಯಶಸ್ಸು ಕಾಣಬೇಕು ಎಂದರೆ ಅಲ್ಲಿ ಒಳ್ಳೆಯ ಹಂಚಿಕೆದಾರರು ಬೇಕೆ ಬೇಕು. ಅದೇ ರೀತಿ ‘ಸು ಫ್ರಮ್ ಸೋ’ ಚಿತ್ರವನ್ನು ದುಲ್ಖರ್ ಅವರು ಮಲಯಾಳಂನಲ್ಲಿ ಹಂಚಿಕೆ ಮಾಡಿದ್ದರು. ಇದರಿಂದ ಸಿನಿಮಾಗೆ ಅಲ್ಲಿ ಮೈಲೇಜ್ ಸಿಕ್ಕಿತು. ದುಲ್ಖರ್ ಅವರ ಮಲಯಾಳಂ ಸಿನಿಮಾವನ್ನು ಈಗ ರಾಜ್ ಅವರು ಕನ್ನಡದಲ್ಲಿ ಹಂಚಿಕೆ ಮಾಡುತ್ತಿದ್ದಾರೆ.
‘ಹೃದಯಂ’ ಸಿನಿಮಾ ಮೂಲಕ ಫೇಮಸ್ ಆದ ಕಲ್ಯಾಣಿ ಪ್ರಿಯದರ್ಶನ್ ಹಾಗೂ ‘ಪ್ರೇಮಲು’ ಸಿನಿಮಾ ಖ್ಯಾತಿಯ ನಸ್ಲೆನ್ ‘ಲೋಕಃ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 28ರಂದು ರಿಲೀಸ್ ಆಗುತ್ತಿದೆ. ಇದು ಮೂಲತಃ ಮಲಯಾಳಂ ಸಿನಿಮಾ. ಇದನ್ನು ನಿರ್ಮಾಣ ಮಾಡಿದ್ದು ದುಲ್ಖರ್ ಸಲ್ಮಾನ್ ಅವರು. ಈ ಚಿತ್ರವನ್ನು ಕರ್ನಾಟಕದಲ್ಲಿ ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ಸ್ ಹಂಚಿಕೆ ಮಾಡುತ್ತಿದೆ. ಈ ಬಗ್ಗೆ ದುಲ್ಖರ್ ಸಲ್ಮಾನ್ ಪ್ರೊಡಕ್ಷನ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.
ಇದನ್ನೂ ಓದಿ: ಶಿವಣ್ಣ-ಉಪ್ಪಿ-ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ದುಲ್ಖರ್ ಸಲ್ಮಾನ್ ಅವರು ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡುತ್ತಿದ್ದಾರೆ. ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ ಏಳನೇ ಸಿನಿಮಾ ಇದಾಗಿದೆ. ಸೂಪರ್ ಹೀರೋ ಶೈಲಿಯಲ್ಲಿ ಚಿತ್ರ ಮೂಡಿ ಬರುತ್ತಿದೆ. ಡಾಮಿನಿಕ್ ಅರುಣ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. 2017ರಲ್ಲಿ ‘ತರಂಗಂ’ ಹೆಸರಿನ ಸಿನಿಮಾ ಮಾಡಿ ಅವರು ಜನಪ್ರಿಯತೆ ಪಡೆದಿದ್ದರು. ಈ ಸಿನಿಮಾಗೆ ಕರ್ನಾಟಕದಲ್ಲಿ ಒಳ್ಳೆಯ ಬೇಡಿಕೆ ಸೃಷ್ಟಿ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:58 am, Fri, 22 August 25








