- Kannada News Photo gallery Thalapathy Vijay TVK Madhurai Maanadu filled with Crowd here are the photos
ದಳಪತಿ ವಿಜಯ್ ಸಮಾವೇಶಕ್ಕೆ ಸೇರಿದ ಜನರ ಸಂಖ್ಯೆ ನೋಡಿ; ಅಬ್ಬಬ್ಬಾ ಇಷ್ಟೊಂದಾ?
ದಳಪತಿ ವಿಜಯ್ ಅವರು ತಮ್ಮದೇ ಸ್ವಂತ ಪಕ್ಷ ಕಟ್ಟಿದ್ದು, ಟಿವಿಕೆ ಎಂದು ಹೆಸರು ಇಟ್ಟಿದ್ದಾರೆ. ಈ ಪಕ್ಷ 2026ರ ತಮಿಳುನಾಡು ವಿಧಾನಸಭೆಯಲ್ಲಿ ಸ್ಪರ್ಧೆ ಮಾಡಲಿದೆ. ಸದ್ಯ ವಿಜಯ್ ಅವರ ಮಧುರೈ ಸಮಾವೇಶದ ವೇಳೆ ಸೇರಿರುವ ಜನರ ಸಂಖ್ಯೆ ಅಚ್ಚರಿ ಮೂಡಿಸುವಂತೆ ಇದೆ.
Updated on:Aug 22, 2025 | 9:50 AM

ದಳಪತಿ ವಿಜಯ್ ಅವರ ಅಭಿಮಾನಿ ಬಳಗ ದೊಡ್ದದಿದೆ. ಹೀರೋ ಆಗಿ ಅವರು ಸಾಕಷ್ಟು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಮಧುರೈನ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಪಕ್ಷ ಘೋಷಣೆ ವೇಳೆ ವಿಜಯ್ ಅವರು ದೊಡ್ಡ ಸಮಾವೇಶ ಆಯೋಜನೆ ಮಾಡಿದ್ದರು. ಇದಾದ ಬಳಿಕ ನಡೆದ ಮತ್ತೊಂದು ದೊಡ್ಡ ಸಮಾವೇಶ ಇದಾಗಿದೆ. ಮಧುರೈ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯ ಜನರು ನೆರೆದಿದ್ದರು. ಆ ಫೋಟೋಗಳು ವೈರಲ್ ಆಗಿವೆ.

ಅಭಿಮಾನಿಗಳನ್ನು ನೋಡಿ ದಳಪತಿ ವಿಜಯ್ ಅವರು ಭಾವುಕರಾದರು. ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಅವರು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೋದಾಗಿ ಹೇಳಿಕೆ ನೀಡಿದ್ದಾರೆ. ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ ಎಂದಿದ್ದಾರೆ.

ವಿಜಯ್ ಅವರು ಸಮಾವೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಸೇರಿಸಿದ್ದಾರೆ ನಿಜ. ಆದರೆ, ಇದನ್ನು ಅವರು ಮತವಾಗಿ ಬದಲಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ. ಒಂದೊಮ್ಮೆ ಬಂದವರೆಲ್ಲರೂ ಟಿವಿಕೆಗೆ ಮತ ಹಾಕಿದರೆ ಅವರ ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ವಿಜಯ್ ಅವರು ಮಧುರೈನ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸೋದಾಗಿ ಹೇಳಿದ್ದಾರೆ. ಚುನಾವಣೆಗೆ ಒಂದು ವರ್ಷ ಇರುವಾಗಲೇ ಅವರು ಈ ರೀತಿಯ ಘೋಷಣೆ ಮಾಡಿದ್ದಾರೆ ಅನ್ನೋದು ವಿಶೇಷ. ಪಕ್ಷ ಗೆದ್ದರೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
Published On - 7:32 am, Fri, 22 August 25




