Abhishek Bachchan: ‘ಪತ್ನಿಗೆ ಹೆಚ್ಚು ಸಿನಿಮಾ ಮಾಡಲು ಬಿಡಿ, ಮಗಳನ್ನು ನೀವು ನೋಡಿಕೊಳ್ಳಿ’ ಎಂದ ಅಭಿಮಾನಿ; ಅಭಿಷೇಕ್​ ಉತ್ತರ ಏನು?

|

Updated on: Apr 30, 2023 | 7:31 AM

Ponniyin Selvan 2: ಅಭಿಷೇಕ್​ ಬಚ್ಚನ್​ ಅವರಿಗೆ ಟ್ವಿಟರ್​ನಲ್ಲಿ ಟ್ರೋಲ್​ ಕಾಟ ಹೊಸದೇನೂ ಅಲ್ಲ. ಅನೇಕ ಕಟು ಟೀಕೆಗಳಿಗೆ ಅವರು ಸೂಕ್ತ ಉತ್ತರ ನೀಡಿದ್ದುಂಟು.

Abhishek Bachchan: ‘ಪತ್ನಿಗೆ ಹೆಚ್ಚು ಸಿನಿಮಾ ಮಾಡಲು ಬಿಡಿ, ಮಗಳನ್ನು ನೀವು ನೋಡಿಕೊಳ್ಳಿ’ ಎಂದ ಅಭಿಮಾನಿ; ಅಭಿಷೇಕ್​ ಉತ್ತರ ಏನು?
ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ
Follow us on

ನಟ ಅಭಿಷೇಕ್​ ಬಚ್ಚನ್​ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಕೂಡ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆರಂಭದ ದಿನಗಳಿಗೆ ಹೋಲಿಕೆ ಮಾಡಿದರೆ ಈಗ ಐಶ್ವರ್ಯಾ ಅವರು ಸಿನಿಮಾ ವಿಚಾರದಲ್ಲಿ ಸಖತ್​ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ನಟಿಸಿದ ‘ಪೊನ್ನಿಯಿನ್​ ಸೆಲ್ವನ್​ 2’ (Ponniyin Selvan 2) ಸಿನಿಮಾ ಬಿಡುಗಡೆಯಾಗಿ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾದಲ್ಲಿನ ಐಶ್ವರ್ಯಾ ರೈ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಎಂಬುದು ಫ್ಯಾನ್ಸ್​ ಆಸೆ. ಈ ವಿಷಯದಲ್ಲಿ ನೆಟ್ಟಿಗರೊಬ್ಬರು ಅಭಿಷೇಕ್​ ಬಚ್ಚನ್​ಗೆ ಸಲಹೆ ನೀಡಿದ್ದಾರೆ. ಅದಕ್ಕೆ ಅಭಿಷೇಕ್​ ಬಚ್ಚನ್​ (Abhishek Bachchan) ಕಡೆಯಿಂದ ನೇರ ಉತ್ತರ ಸಿಕ್ಕಿದೆ.

ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ಅದೇ ರೀತಿ ಅಭಿಷೇಕ್​ ಬಚ್ಚನ್​ ಕೂಡ ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದಾರೆ. ಕೆಲವೊಮ್ಮೆ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ನೇರವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಈಗ ಅಭಿಷೇಕ್​ ಬಚ್ಚನ್​ ಅವರಿಗೆ ಹಾಗೆಯೇ ಆಗಿದೆ. ‘ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಿ. ಮಗಳು ಆರಾಧ್ಯಾಳನ್ನು ನೀವು ನೋಡಿಕೊಳ್ಳಿ’ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ
Aishwarya Rai Birthday: ಐಶ್ವರ್ಯಾ ರೈ ಜನ್ಮದಿನ: ಹಳೆಯ ಫೋಟೋಗಳು ವೈರಲ್
Aishwarya Rai Birthday: 1500 ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಐಶ್ವರ್ಯಾ ರೈ 10 ಕೋಟಿ ರೂ. ಪಡೆಯುವಂತಾಗಿದ್ದು ಹೇಗೆ?
Aishwarya Rai: ವೇದಿಕೆ ಮೇಲೆ ಗುರು ಮಣಿರತ್ನಂ ಕಾಲಿಗೆ ನಮಸ್ಕಾರ ಮಾಡಿದ ಐಶ್ವರ್ಯಾ ರೈ​; ವಿಡಿಯೋ ವೈರಲ್​
ಐಶ್ವರ್ಯಾ ರೈ ರೀತಿಯಲ್ಲೇ ಕಾಣುವ ಈ ಸೋಶಿಯಲ್ ಮೀಡಿಯಾ ಸ್ಟಾರ್ ಯಾರು?

ಇದನ್ನೂ ಓದಿ: ಮಣಿರತ್ನಂ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ; ನಿರ್ದೇಶಕನ ಬಗ್ಗೆ ನಟಿಗೆ ಇದೆ ವಿಶೇಷ ಗೌರವ

ಅಭಿಷೇಕ್​ ಬಚ್ಚನ್​ ಅವರಿಗೆ ಟ್ವಿಟರ್​ನಲ್ಲಿ ಟ್ರೋಲ್​ ಕಾಟ ಹೊಸದೇನೂ ಅಲ್ಲ. ಅನೇಕ ಕಟು ಟೀಕೆಗಳಿಗೆ ಅವರು ಸೂಕ್ತ ಉತ್ತರ ನೀಡಿದ್ದುಂಟು. ಅಭಿಮಾನಿಗಳ ಸಲಹೆಯನ್ನು ಅವರು ಪಾಸಿಟಿವ್​ ಆಗಿ ಸ್ವೀಕರಿಸುತ್ತಾರೆ. ‘ಐಶ್ವರ್ಯಾಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಬೇಕಾ? ಸರ್.. ಯಾವುದಕ್ಕೂ ಅವರು ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅದರಲ್ಲೂ ಅವರು ಇಷ್ಟಪಡುವ ವಿಚಾರದಲ್ಲಿ ನನ್ನ ಅನುಮತಿಯ ಅವಶ್ಯಕತೆ ಇಲ್ಲ’ ಎಂದು ಅಭಿಷೇಕ್​ ಬಚ್ಚನ್​ ಹೇಳಿದ್ದಾರೆ.

‘ಪೊನ್ನಿಯಿನ್​ ಸೆಲ್ವನ್​ 2’ ಸಿನಿಮಾದಲ್ಲಿ ಐಶ್ವರ್ಯಾ ರೈ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಷೇಕ್​ ಬಚ್ಚನ್​ ಕೂಡ ಟ್ವಿಟರ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರ ಟ್ವೀಟ್​ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. 2007ರಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಮದುವೆ ಆಯಿತು. 2011ರಲ್ಲಿ ಆರಾಧ್ಯಾ ಜನಿಸಿದಳು. ‘ಗುರು’, ‘ಧೂಮ್​ 2’, ‘ರಾವಣ್​’, ‘ಕುಚ್​​ ನಾ ಕಹೋ’ ಮುಂತಾದ ಸಿನಿಮಾಗಳಲ್ಲಿ ಅಭಿಷೇಕ್​ ಮತ್ತು ಐಶ್ವರ್ಯಾ ಜೋಡಿಯಾಗಿ ನಟಿಸಿದ್ದಾರೆ. ಇಬ್ಬರೂ ಒಂದಾಗಿ ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ ಎಂಬ ಆಸೆಯನ್ನೂ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Sun, 30 April 23