AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ ರೈ ರೀತಿಯಲ್ಲೇ ಕಾಣುವ ಈ ಸೋಶಿಯಲ್ ಮೀಡಿಯಾ ಸ್ಟಾರ್ ಯಾರು?

ಇತ್ತೀಚೆಗೆ ಬಣ್ಣದ ಲೋಕದಲ್ಲಿ ಐಶ್ವರ್ಯಾ ರೈ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಳೆದು, ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಅವರ ಜನಪ್ರಿಯತೆ ಕಡಿಮೆ ಆಗಿಲ್ಲ.

ಐಶ್ವರ್ಯಾ ರೈ ರೀತಿಯಲ್ಲೇ ಕಾಣುವ ಈ ಸೋಶಿಯಲ್ ಮೀಡಿಯಾ ಸ್ಟಾರ್ ಯಾರು?
ಆಶಿತಾ ಸಿಂಗ್
TV9 Web
| Edited By: |

Updated on: Sep 02, 2022 | 10:56 AM

Share

ಸೆಲೆಬ್ರಿಟಿಗಳ ಹೋಲಿಕೆ ಇದೆ ಎಂಬ ಕಾರಣಕ್ಕೆ ಅನೇಕರು ಖ್ಯಾತಿ ಪಡೆದುಕೊಂಡ ಉದಾಹರಣೆ ಇದೆ. ವಿರಾಟ್ ಕೊಹ್ಲಿ (Virat Kohli), ಸಲ್ಮಾನ್ ಖಾನ್, ಹೃತಿಕ್ ರೋಷನ್ ರೀತಿ ಕಾಣಿಸಿಕೊಂಡ ಕಾರಣಕ್ಕೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಐಶ್ವರ್ಯಾ ರೈ (Aishwarya Rai) ರೀತಿಯಲ್ಲೇ ಕಾಣುವ ಆಶಿತಾ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಅವರಿಗೆ ಲಕ್ಷಾಂತರ ಮಂದಿ ಹಿಂಬಾಲಕರು ಇದ್ದಾರೆ.

ಐಶ್ವರ್ಯಾ ರೈ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಬಣ್ಣದ ಲೋಕದಲ್ಲಿ ಐಶ್ವರ್ಯಾ ರೈ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಳೆದು, ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಅವರ ಜನಪ್ರಿಯತೆ ಕಡಿಮೆ ಆಗಿಲ್ಲ. ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ. ಅದೇ ರೀತಿ ಅವರಂತೆ ಕಾಣುವ ಆಶಿತಾ ಸಿಂಗ್ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಅವರ ಹೊಸಹೊಸ ರೀಲ್ಸ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Devdas: ‘ದೇವದಾಸ್​’ ಚಿತ್ರಕ್ಕೆ 20 ವರ್ಷ; ಸಂಭ್ರಮಿಸಿದ ಐಶ್ವರ್ಯಾ ರೈ ಬಚ್ಚನ್​, ಸಂಜಯ್​ ಲೀಲಾ ಬನ್ಸಾಲಿ
Image
‘ಪೊನ್ನಿಯಿನ್​ ಸೆಲ್ವನ್​’ ಚಿತ್ರದ ಟೀಸರ್ ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ; ಗಮನ ಸೆಳೆದ ಐಶ್ವರ್ಯಾ, ವಿಕ್ರಮ್
Image
ನಟಿ ಐಶ್ವರ್ಯಾ ರೈ ಜತೆ ಡ್ಯಾನ್ಸ್ ಮಾಡಿದ ಆರಾಧ್ಯಾ; ಇಲ್ಲಿದೆ ಕ್ಯೂಟ್ ವಿಡಿಯೋ
Image
ನಟಿ ಐಶ್ವರ್ಯಾ ರೈ ಅವರ ಒಟ್ಟೂ ಆಸ್ತಿ ಎಷ್ಟು? ನಟನೆಯಿಂದ ದೂರ ಉಳಿದರೂ ಬರುತ್ತಿದೆ ಕೋಟಿ ಕೋಟಿ ದುಡ್ಡು

ಆಶಿತಾ ಹಂಚಿಕೊಂಡ ಹೊಸ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನೀವು ಐಶ್ವರ್ಯಾ ರೈ ಪ್ರೋ ಮ್ಯಾಕ್ಸ್​’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ‘ಸಲ್ಮಾನ್ ಖಾನ್ ನಿಮಗೆ ಪ್ರಪೋಸ್ ಮಾಡಿದರೆ ನೀವು ಯಾವ ರೀತಿಯಲ್ಲಿ ಉತ್ತರಿಸುತ್ತೀರಿ’ ಎಂಬ ಪ್ರಶ್ನೆಯನ್ನು ಇಟ್ಟಿದ್ದಾರೆ. ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಒಂದು ಕಾಲದಲ್ಲಿ ಪ್ರೀತಿಯಲ್ಲಿದ್ದರು. ಇಬ್ಬರೂ ಡೇಟಿಂಗ್ ನಡೆಸಿದ್ದರು. ಆದರೆ, ಇವರ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ.

ಐಶ್ವರ್ಯಾ ರೈ ಅವರು ‘ಪೊನ್ನಿಯಿನ್ ಸೆಲ್ವನ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ತಮಿಳು ಸಿನಿಮಾ ಆಗಿದ್ದು ಮಣಿ ರತ್ನಮ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್, ಕಾರ್ತಿ, ತ್ರಿಷಾ ಸೇರಿ ಅನೇಕ ಸ್ಟಾರ್​ಗಳು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ಅವರ ಪಾತ್ರ ಈಗಾಗಲೇ ರಿವೀಲ್ ಆಗಿದೆ.