ಶಾರುಖ್ ಖಾನ್ (Shah Rukh Khan) ನಿವಾಸ ಮನ್ನತ್ ಅಭಿಮಾನಿಗಳ ಪಾಲಿಗೆ ತುಂಬಾನೇ ವಿಶೇಷ ಎನಿಸಿಕೊಂಡಿದೆ. ಮನೆಯ ಹೊರಭಾಗದಲ್ಲಿರುವ ರಸ್ತೆಯಲ್ಲಿ ಫ್ಯಾನ್ಸ್ ಸದಾ ನೆರೆದಿರುತ್ತಾರೆ. ಅಪರೂಪಕ್ಕೊಮ್ಮೆ ಶಾರುಖ್ ಖಾನ್ ಅವರು ಮನೆಯ ಗ್ಯಾಲರಿಗೆ ಬಂದು ಕೈ ಬೀಸಿ ಹೋಗುತ್ತಾರೆ. ಇದನ್ನು ಕಣ್ತುಂಬಿಕೊಳ್ಳುವುದೇ ಫ್ಯಾನ್ಸ್ಗೆ ಹಬ್ಬ. ಈಗ ಶಾರುಖ್ ಖಾನ್ ಅವರ ಮನ್ನತ್ ನಿವಾಸದ ಆವರಣಕ್ಕೆ ಇಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅವರು ಮನೆ ಒಳಗೆ ಹೋಗುವ ಪ್ಲ್ಯಾನ್ನಲ್ಲಿದ್ದರು ಎನ್ನಲಾಗಿದೆ. ಅವರನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ನೀಡಿದ್ದು ಕೇಸ್ ದಾಖಲಾಗಿದೆ.
ಸೆಲೆಬ್ರಿಟಿಗಳನ್ನು ಮೀಟ್ ಮಾಡೋಕೆ ಫ್ಯಾನ್ಸ್ ನಾನಾ ಕಸರತ್ತು ನಡೆಸುತ್ತಾರೆ. ಇದಕ್ಕಾಗಿ ಅವರು ಯಾವ ಹಂತಕ್ಕೆ ಹೋಗೋಕೂ ರೆಡಿ ಇರುತ್ತಾರೆ. ಈಗಲೂ ಹಾಗೆಯೇ ಆಗಿದೆ. ಶಾರುಖ್ ಖಾನ್ ಅವರನ್ನು ಭೇಟಿ ಮಾಡೋಕೆ ಗುಜರಾತ್ನಿಂದ ಇಬ್ಬರು ಬಂದಿದ್ದಾರೆ. ಮನ್ನತ್ ನಿವಾಸದ ಹೊರಗೆ ಅವರು ಶಾರುಖ್ಗಾಗಿ ಕಾದು ನಿಂತಿದ್ದರು. ಆದರೆ, ಶಾರುಖ್ ಬರುವ ಸೂಚನೆ ಸಿಕ್ಕಿಲ್ಲ. ಹೀಗಾಗಿ, ಅವರು ಮನೆಯ ಗೋಡೆ ಏರಿ ನಿವಾಸದ ಆವರಣಕ್ಕೆ ಜಿಗಿದಿದ್ದಾರೆ!
ಇದನ್ನು ನೋಡಿದ ಭದ್ರತಾ ಸಿಬ್ಬಂದಿ, ಅವರನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಓರ್ವ 20 ವರ್ಷದವನು, ಮತ್ತೋರ್ವ 22 ವರ್ಷದವನು. ‘ನಾವು ಶಾರುಖ್ ಖಾನ್ ಅಭಿಮಾನಿಗಳು. ಅವರನ್ನು ಭೇಟಿ ಆಗೋಕೆ ಈ ರೀತಿ ಮಾಡಿದೆವು’ ಎಂದು ಅವರು ಹೇಳಿಕೊಂಡಿದ್ದಾರೆ. ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ‘ಮನ್ನತ್’ ನಿವಾಸಕ್ಕೆ ಕಳೆದ ವರ್ಷ ಹೊಸ ನೇಮ್ಪ್ಲೇಟ್ ಹಾಕಿಸಲಾಗಿದೆ. ಇದು ವಜ್ರಖಚಿತವಾಗಿದ್ದು, ಶಾರುಖ್ ಪತ್ನಿ ಗೌರಿ ಖಾನ್ ಅವರೇ ಇದನ್ನು ಡಿಸೈನ್ ಮಾಡಿದ್ದಾರೆ.
ಶಾರುಖ್ ಖಾನ್ ಅವರು ಗೆಲುವು ಕಾಣದೇ ಹಲವು ವರ್ಷಗಳೇ ಕಳೆದಿದ್ದವು. ಅವರ ನಟನೆಯ ‘ಪಠಾಣ್’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಹಿಂದಿ ವರ್ಷನ್ನಿಂದ 509 ಕೋಟಿ ರೂಪಾಯಿ ಗಳಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Fri, 3 March 23