ಹೃತಿಕ್ ರೋಷನ್ (Hrithik Roshan) ಅವರು ಬಾಲಿವುಡ್ನ ಸ್ಟಾರ್ ಹೀರೋ. ಅವರು ಹಿಂದಿಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಫಿಟ್ನೆಸ್ಗೆ ಸಾಕಷ್ಟು ಆದ್ಯತೆ ನೀಡುತ್ತಾರೆ. ಅವರು ಎಂದಿಗೂ ವರ್ಕೌಟ್ ಮಿಸ್ ಮಾಡಿದವರಲ್ಲ. ಅವರು ಇತ್ತೀಚೆಗೆ ಫಿಟ್ನೆಸ್ಗೆ ಹೆಚ್ಚು ಆದ್ಯತೆ ಕೊಟ್ಟಿಲ್ಲ ಎನಿಸುತ್ತದೆ. ಈ ಕಾರಣದಿಂದಲೇ ಅವರ ಸಿಕ್ಸ್ ಪ್ಯಾಕ್ (Six Pack) ಮಾಯ ಆಗಿತ್ತು. ಈಗ ಅದು ಮರಳಿ ಬಂದಿದೆ. ಅದೂ ಐದು ವಾರಗಳಲ್ಲಿ. ಇದಕ್ಕೆಲ್ಲ ಅವರು ಧನ್ಯವಾದ ಹೇಳಿದ್ದು ಗರ್ಲ್ಫ್ರೆಂಡ್ (Saba Azad) ಸಬಾ ಆಜಾದ್ಗೆ. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡಿರುವ ಪೋಸ್ಟ್ ಗಮನ ಸೆಳೆಯುತ್ತಿದೆ.
ಹೃತಿಕ್ ರೋಷನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಡ್ಯಾನ್ಸ್ನಲ್ಲಿ ಮಾಸ್ಟರ್ ಕೂಡ ಹೌದು. ಇನ್ನು ಅವರು ಸದಾ ಸಿಕ್ಸ್ ಪ್ಯಾಕ್ನಲ್ಲಿ ಮಿಂಚುತ್ತಾರೆ. ಆಗಸ್ಟ್ ತಿಂಗಳಲ್ಲಿ ಹೃತಿಕ್ ಅವರ ಸಿಕ್ಸ್ ಪ್ಯಾಕ್ ಮಾಯ ಆಗಿತ್ತು. ಆದರೆ, ಅಕ್ಟೋಬರ್ 7 ಎನ್ನುವವರೆಗೆ ಅವರು ಮತ್ತೆ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಎರಡೂ ಫೋಟೋನ ಹೋಲಿಕೆ ಮಾಡಿ ಹೊಸ ಪೋಸ್ಟ್ ಮಾಡಿದ್ದಾರೆ.
‘ಆರಂಭದಿಂದ ಕೊನೆಯವರೆಗೆ ಬೇಕಾಗಿದ್ದು ಐದು ವಾರ. ನನ್ನ ದೇಹದ ಎಲ್ಲಾ ಭಾಗಗಳಿಗೆ ಧನ್ಯವಾದ. ನೀವು ಒಳ್ಳೆಯ ಫೈಟ್ನ ಇಷ್ಟಪಡುತ್ತೀರಿ. ಲವ್ ಯೂ ಆಲ್. ಈಗ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳುವ ಸಮಯ. ಪ್ರೀತಿ ಪಾತ್ರರಿಗೆ, ಪ್ರಮುಖ ಕೆಲಸಗಳಿಗೆ, ಪಾರ್ಟಿಗಳಿಗೆ ನೋ ಎನ್ನೋದು ಕಷ್ಟದ ಕೆಲಸ. ರಾತ್ರಿ 9 ಗಂಟೆಗೆ ಸರಿಯಾಗಿ ಮಲಗೋದು ಮತ್ತೂ ಕಷ್ಟದ ಕೆಲಸ. ಸುಲಭದ ವಿಚಾರ ಎಂದರೆ ಒಂದೇ ರೀತಿಯ ಮನಸ್ಥಿತಿಯ ಪಾರ್ಟ್ನರ್ನ ಹೊಂದುವುದು. ಸಬಾ ಥ್ಯಾಂಕ್ಯೂ. ಕ್ರಿಸ್ ಅವರಂಥ ಮೆಂಟರ್ ಸಿಕ್ಕಿದ್ದು ಅದೃಷ್ಟ. ಎಲ್ಲರಿಗೂ ನನ್ನ ಧನ್ಯವಾದ’ ಎಂದು ಅವರು ಬರೆದುಕೊಂಡಿದ್ದಾರೆ.
ಐಷಾರಾಮಿ ಕಾರು ಬಿಟ್ಟು ಮೆಟ್ರೋ ಏರಿದ ಹೃತಿಕ್; ಇದು ಪಬ್ಲಿಸಿಟಿ ಸ್ಟಂಟ್ ಅಲ್ಲ
ಇನ್ನು, ಅವರು ವಿಶೇಷ ಟಿಪ್ಪಣಿ ಕೂಡ ಬರೆದಿದ್ದಾರೆ. ‘ನಾನು ನನ್ನ ಸಿನಿಮಾ ಪಾತ್ರಕ್ಕಾಗಿ ಇದನ್ನೆಲ್ಲ ಮಾಡುತ್ತೇನೆ. ನನಗೆ ಚಾಲೆಂಜ್ ಎಂದರೆ ಇಷ್ಟ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಸಿಕ್ಸ್ ಕಳೆದುಕೊಂಡಿದ್ದು ಮತ್ತು ಅದನ್ನು ಮರಳಿ ಪಡೆದಿದ್ದು ಸಿನಿಮಾಗಾಗಿಯೇ ಎನ್ನುವ ಪ್ರಶ್ನೆ ಮೂಡಿದೆ. ಹೃತಿಕ್ ರೋಷನ್ ಅವರು ಸದ್ಯ ‘ಫೈಟರ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ. ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. 2024ರ ಜನವರಿ 25ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಫೇಮಸ್ ಆದ ಸಿದ್ದಾರ್ಥ್ ಆನಂದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಒಂದೇ ಸಿನಿಮಾದಲ್ಲಿ ಜೂ. ಎನ್ಟಿಆರ್, ಶಾರುಖ್ ಖಾನ್, ಸಲ್ಮಾನ್, ಹೃತಿಕ್ ರೋಷನ್?
ಹೃತಿಕ್ ರೋಷನ್ ಅವರು ಸುಸ್ಸಾನೆ ಖಾನ್ ಅವರನ್ನು 2000ನೇ ಇಸ್ವಿಯಲ್ಲಿ ಮದುವೆ ಆದರು. ಆ ಬಳಿಕ ಅವರಿಂದ 2014ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಹಲವು ಬಾರಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದೆ. ಈಗ ಸಬಾ ಜೊತೆ ಹೃತಿಕ್ ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗಲಿ ಎಂಬುದು ಫ್ಯಾನ್ಸ್ ಕೋರಿಕೆ. ಇಬ್ಬರ ಮಧ್ಯೆ 12 ವರ್ಷ ವಯಸ್ಸಿನ ಅಂತರ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.