ಇಟಲಿಯಲ್ಲಿ ‘ಫೈಟರ್’ ಶೂಟ್​ನಲ್ಲಿ ಬ್ಯುಸಿ ಆದ ಹೃತಿಕ್-ದೀಪಿಕಾ; ಇಲ್ಲಿದೆ ಫೋಟೋ

ಸಿದ್ದಾರ್ಥ್ ಆನಂದ್ ಸಿನಿಮಾಗಳಲ್ಲಿ ವಿದೇಶಿ ಲೊಕೇಷನ್​ಗಳು ಹೇರಳವಾಗಿರುತ್ತವೆ. ‘ಫೈಟರ್​’ನಲ್ಲೂ ಅದು ಮುಂದುವರಿದಿದೆ. ಇಟಲಿ ಬಳಿಕ ಈ ತಂಡ ಇನ್ನೂ ಕೆಲವು ದೇಶಗಳಿಗೆ ತೆರಳಿ ಶೂಟ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇಟಲಿಯಲ್ಲಿ ‘ಫೈಟರ್’ ಶೂಟ್​ನಲ್ಲಿ ಬ್ಯುಸಿ ಆದ ಹೃತಿಕ್-ದೀಪಿಕಾ; ಇಲ್ಲಿದೆ ಫೋಟೋ
ಹೃತಿಕ್-ದೀಪಿಕಾ

Updated on: Oct 05, 2023 | 12:30 PM

ಹೃತಿಕ್ ರೋಷನ್ (Hrithik Roshan) ಹಾಗೂ ದೀಪಿಕಾ ಪಡುಕೋಣೆ ಸದ್ಯ ಇಟಲಿಯಲ್ಲಿದ್ದಾರೆ. ‘ಫೈಟರ್’ ಸಿನಿಮಾ ಶೂಟ್​ನಲ್ಲಿ ಇವರು ಬ್ಯುಸಿ ಆಗಿದ್ದಾರೆ. ತಂಡದ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳು ವೈರಲ್ ಆಗಿವೆ. ಹೃತಿಕ್ ಹಾಗೂ ದೀಪಿಕಾ ಸೆಲ್ಫಿ ತೆಗೆದುಕೊಂಡಿದ್ದಾರೆ. ಹೆಸರಿಗೆ ತಕ್ಕಂತೆ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ 2024ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಸಿದ್ದಾರ್ಥ್ ಆನಂದ್ ಸಿನಿಮಾಗಳಲ್ಲಿ ಭರ್ಜರಿ ಆ್ಯಕ್ಷನ್ ಇರುತ್ತದೆ. ‘ವಾರ್’, ‘ಬ್ಯಾಂಗ್​ ಬ್ಯಾಂಗ್’ ಮುಂತಾದ ಸಿನಿಮಾಗಳೆ ಇದಕ್ಕೆ ಸಾಕ್ಷಿ. ಈಗ ಅವರು ‘ಫೈಟರ್’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಹೃತಿಕ್ ರೋಷನ್ ಅವರು ಮಾಸ್ ಸಿನಿಮಾದ ಮೂಲಕ ಫೇಮಸ್ ಆದವರು. ‘ವಾರ್’ ಚಿತ್ರದಲ್ಲಿ ಅವರು ಭರ್ಜರಿ ಆ್ಯಕ್ಷನ್ ಮರೆದಿದ್ದರು. ದೀಪಿಕಾ ಕೂಡ  ಕೆಲವು ಸಿನಿಮಾಗಳಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದರು. ‘ಫೈಟರ್’ ಚಿತ್ರದಲ್ಲಿ ಇವರಿಬ್ಬರ ಪಾತ್ರ ಹೇಗಿರಲಿದೆ ಅನ್ನೋ ಕುತೂಹಲ ಮೂಡಿದೆ.

ಸಿದ್ದಾರ್ಥ್ ಆನಂದ್ ಸಿನಿಮಾಗಳಲ್ಲಿ ವಿದೇಶಿ ಲೊಕೇಷನ್​ಗಳು ಹೇರಳವಾಗಿರುತ್ತವೆ. ‘ಫೈಟರ್​’ನಲ್ಲೂ ಅದು ಮುಂದುವರಿದಿದೆ. ಇಟಲಿ ಬಳಿಕ ಈ ತಂಡ ಇನ್ನೂ ಕೆಲವು ದೇಶಗಳಿಗೆ ತೆರಳಿ ಶೂಟ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ಏಳು ತಿಂಗಳ ಬಳಿಕ ಒಟಿಟಿಗೆ ಬಂದ ಹೃತಿಕ್ ರೋಷನ್ ಸಿನಿಮಾ ತಲುಪಲಿದೆ 40 ಕೋಟಿ ಜನರಿಗೆ

ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ನಟನೆಯ ‘ವಿಕ್ರಮ್ ವೇದ’ ಚಿತ್ರ ಸೋತಿದೆ. ಈಗ ಅವರು ಒಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸಿದ್ದಾರ್ಥ್ ಆನಂದ್  ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮೊದಲಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ