ಗೋವಿಂದ 2ನೇ ಮದುವೆ ವದಂತಿ ಸುಳ್ಳು: ಸುನೀತಾ ವಿರುದ್ಧ ನಟನ ಮ್ಯಾನೇಜರ್ ಗರಂ

ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗ ಆಗಿದೆ. ಈ ನಡುವೆ ಸುನೀತಾ ಅವರು ಗೋವಿಂದ ಮೇಲೆ ಸಾಕಷ್ಟು ಆರೋಪ ಮಾಡುತ್ತಿದ್ದಾರೆ. ಗೋವಿಂದ ಅವರು 2ನೇ ಮದುವೆಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಕೂಡ ಸುನೀತಾ ಹೇಳಿದ್ದಾರೆ.

ಗೋವಿಂದ 2ನೇ ಮದುವೆ ವದಂತಿ ಸುಳ್ಳು: ಸುನೀತಾ ವಿರುದ್ಧ ನಟನ ಮ್ಯಾನೇಜರ್ ಗರಂ
Govinda, Sunita Ahuja

Updated on: Aug 23, 2026 | 7:14 AM

ಬಾಲಿವುಡ್‌ನ ಹಿರಿಯ ನಟ ಗೋವಿಂದ (Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ಕೌಟುಂಬಿಕ ಕಲಹ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ನಟಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಗೋವಿಂದ ಎರಡನೇ ಮದುವೆಯಾಗಲು ರೆಡಿಯಾಗಿದ್ದಾರೆ ಎಂದು ಸುನೀತಾ (Sunita Ahuja) ಮಾಡಿರುವ ಆರೋಪವನ್ನು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಶಿ ಸಿನ್ಹಾ, ‘ಅಂತಹ ಯಾವುದೇ ಯೋಜನೆಗಳಿಲ್ಲ. ಗೋವಿಂದ ಅವರ ಎರಡನೇ ಮದುವೆ ನಡೆಯುತ್ತಿಲ್ಲ. ಸುನೀತಾ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಹೀಗಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮಾತು ಮುಂದುವರಿಸಿದ ಶಶಿ ಸಿನ್ಹಾ ಅವರು, ‘ಗೋವಿಂದ ಅವರು ಎಂದಿಗೂ ಸುನೀತಾ ವಿರುದ್ಧ ಬಹಿರಂಗವಾಗಿ ಒಂದೇ ಒಂದು ಮಾತು ಆಡಿಲ್ಲ. ಆದರೆ ಸುನೀತಾ ಮಾತ್ರ ಸಾರ್ವಜನಿಕವಾಗಿ ರಂಪಾಟ ಮಾಡುತ್ತಿದ್ದಾರೆ. ನಿಜವಾಗಿಯೂ ಗೋವಿಂದ ಮರುಮದುವೆಯಾಗಲು ಬಯಸಿದ್ದರೆ ಅವರೇ ಮೊದಲಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದರು’ ಎಂದು ತಿರುಗೇಟು ನೀಡಿದ್ದಾರೆ.

ವಿಚ್ಛೇದನ ಅರ್ಜಿ ವಾಪಸ್:

ಕೆಲ ದಿನಗಳ ಹಿಂದೆ ರಾಖಿ ಸಾವಂತ್ ಜೊತೆಗಿನ ಫೋನ್ ಸಂಭಾಷಣೆಯಲ್ಲಿ ಸುನೀತಾ, ‘ಗೋವಿಂದ ಮತ್ತು ಕೋಮಲ್ ಮದುವೆಯಾಗಲು ಯೋಜಿಸುತ್ತಿದ್ದರು, ಹಾಗಾಗಿ ನಾನು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದೆ’ ಎಂದು ಹೇಳಿದ್ದರು. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಗೋವಿಂದ ಮತ್ತು ಕೋಮಲ್ ಒಟ್ಟಿಗೆ ಕಾಣಿಸಿಕೊಂಡ ನಂತರ ಈ ವಿವಾದ ಭುಗಿಲೆದ್ದಿತ್ತು.

‘ಶುಗರ್ ಡ್ಯಾಡಿ’ ಎಂಬ ಆರೋಪ:

ಪಾಪಾರಾಜಿಗಳ ಮುಂದೆ ಮಾತನಾಡಿದ್ದ ಸುನೀತಾ, ಗೋವಿಂದ ಅವರನ್ನು ಕೋಮಲ್ ಅವರ ‘ಶುಗರ್ ಡ್ಯಾಡಿ’ ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೋವಿಂದ, ತಮ್ಮ ತೇಜೋವಧೆ ಮಾಡದಂತೆ ಮತ್ತು ಮಿತಿಯಲ್ಲಿರುವಂತೆ ಸುನೀತಾಗೆ ಎಚ್ಚರಿಕೆ ನೀಡಿದ್ದರು. ಈ ಎಲ್ಲ ಘಟನೆಗಳಿಂದಾಗಿ ಗೋವಿಂದ ಮತ್ತು ಸುನೀತಾ ಅವರ ಸಂಸಾರದ ಗಲಾಟೆ ಬೀದಿಗೆ ಬಂತು.

ಇದನ್ನೂ ಓದಿ: ಮಗಳ ವಯಸ್ಸಿನ ನಟಿ ಜೊತೆ ಗೋವಿಂದ ಸುತ್ತಾಟ; ಕೆಂಡಾಮಂಡಲ ಆದ ಪತ್ನಿ ಸುನೀತಾ

1987ರಲ್ಲಿ ವಿವಾಹವಾಗಿದ್ದ ಈ ದಂಪತಿ ನಡುವೆ ಕಳೆದ ಎರಡು ವರ್ಷಗಳಿಂದ ಕಾನೂನು ಸಮರ ನಡೆಯುತ್ತಿತ್ತು. 2024ರಲ್ಲಿ ಸುನೀತಾ ಅವರು ಗೋವಿಂದ ವಿರುದ್ಧ ಕೌಟುಂಬಿಕ ಹಿಂಸೆ ಹಾಗೂ ಪರಸ್ತ್ರೀ ಸಂಬಂಧದ ಆರೋಪದ ಹೊರಸಿ, ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಆಗಸ್ಟ್ 19ರಂದು ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us