ಸ್ಮಶಾನದ ಪಕ್ಕದಲ್ಲಿ ಮನೆ ಮಾಡಿದ್ದೇ ತಪ್ಪಾಯ್ತು; ಈ ನಟಿಯ ಜೀವನದಲ್ಲಾಯಿತು ಚಿತ್ರ ವಿಚಿತ್ರ ಅನುಭವ

|

Updated on: Jul 29, 2023 | 7:15 AM

ನರ್ಗೀಸ್ ಅವರಿಗೆ ವಿಚಿತ್ರ ಅನುಭವಗಳು ಆಗಿದ್ದರಿಂದ ಇದನ್ನು ಅವರು ನಂಬುತ್ತಾರೆ. ಮುಂಬೈನಲ್ಲಿ ಇದ್ದಾಗ ಒಂದಷ್ಟು ಹಾರರ್ ಅನುಭವ ಅವರಿಗೆ ಆಗಿತ್ತು.

ಸ್ಮಶಾನದ ಪಕ್ಕದಲ್ಲಿ ಮನೆ ಮಾಡಿದ್ದೇ ತಪ್ಪಾಯ್ತು; ಈ ನಟಿಯ ಜೀವನದಲ್ಲಾಯಿತು ಚಿತ್ರ ವಿಚಿತ್ರ ಅನುಭವ
ನರ್ಗೀಸ್
Follow us on

ರಣಬೀರ್ ಕಪೂರ್ (Ranbir Kapoor) ನಟನೆಯ ‘ರಾಕ್​ಸ್ಟಾರ್’ ಚಿತ್ರದ ಮೂಲಕ ನರ್ಗೀಸ್ ಫಕ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಮದ್ರಾಸ್ ಕೆಫೆ’, ‘ಹೌಸ್‌ಫುಲ್ 3’, ‘ಮೇ ತೇರಾ ಹೀರೋ’ ಮೊದಲಾದ ಹಿಂದಿ ಸಿನಿಮಾಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ವಿಶೇಷ ಸಾಂಗ್​ಗೆ ಹೆಜ್ಜೆ ಹಾಕಿ ಅವರು ಹೆಸರು ಮಾಡಿದ್ದಾರೆ. ಈಗ ಅವರು ಟಾಲಿವುಡ್‌ಗೆ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಪವನ್ ಕಲ್ಯಾಣ್ ನಟನೆಯ, ಕ್ರಿಶ್ ನಿರ್ದೇಶನದ ‘ಹರಿಹರ ವೀರಮಲ್ಲು’ (Hari Hara Veera Mallu Movie) ಚಿತ್ರದಲ್ಲಿ ನರ್ಗೀಸ್ ಫಕ್ರಿ ನಟಿಸುತ್ತಿದ್ದಾರೆ. ಈಗ ಅವರು ಮುಂಬೈನಲ್ಲಿ ಉಂಟಾದ ಭಯಾನಕ ಅನುಭವಗಳ ಬಗ್ಗೆ ಹೇಳಿದ್ದಾರೆ.

ಕೆಲವೊಂದು ಮನೆಯಲ್ಲಿ ಉಳಿದುಕೊಂಡಾಗ ನೆಗೆಟಿವ್ ಎನರ್ಜಿ ಫೀಲ್ ಆಗುತ್ತದೆ. ಇದನ್ನು ಕೆಲವರು ನಂಬುತ್ತಾರೆ, ಇನ್ನೂ ಕೆಲವರು ನಂಬುವುದಿಲ್ಲ. ನರ್ಗೀಸ್ ಅವರಿಗೆ ಈ ರೀತಿ ಅನುಭವಗಳು ಆಗಿದ್ದರಿಂದ ಇದನ್ನು ಅವರು ನಂಬುತ್ತಾರೆ. ಮುಂಬೈನಲ್ಲಿ ಇದ್ದಾಗ ಒಂದಷ್ಟು ಹಾರರ್ ಅನುಭವ ಅವರಿಗೆ ಆಗಿತ್ತು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

‘ನಾನು ಮುಂಬೈನ ಬಾಂದ್ರಾದ ಹಿಲ್​ರೋಡ್​​ನಲ್ಲಿ ವಾಸಿಸುತ್ತಿದ್ದೆ. ನನ್ನ ಮನೆಯ ಸಮೀಪದಲ್ಲಿ ಒಂದು ಸ್ಮಶಾನವಿತ್ತು. ಆ ಅಪಾರ್ಟ್‌ಮೆಂಟ್‌ನಲ್ಲಿ ಇದ್ದಾಗ ನನಗೆ ಭಯಾನಕ ಕನಸುಗಳು ಬೀಳುತ್ತಿದ್ದವು. ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಭಯದಿಂದ ನಡುಗುತ್ತಿದ್ದ ನನಗೆ ರಾತ್ರಿ ಮೂರು ಗಂಟೆಗೆ ಎಚ್ಚರ ಆಗುತ್ತಿತ್ತು’ ಎಂದಿದ್ದಾರೆ ನರ್ಗೀಸ್.

‘ವಿಚಿತ್ರ ಕನಸು ಬೀಳುತ್ತಿತ್ತು. ಮಧ್ಯರಾತ್ರಿ ಓರ್ವ ಭಯಾನಕ ವ್ಯಕ್ತಿ ನನ್ನನ್ನು ಸ್ಮಶಾನಕ್ಕೆ ಕರೆದೊಯ್ದು ಮಾನವ ಮೂಳೆಗಳನ್ನು ತಿನ್ನುವಂತೆ ಒತ್ತಾಯಿಸುತ್ತಿದ್ದಂತೆ ಕನಸಿನಲ್ಲಿ ಕಾಣುತ್ತಿತ್ತು. ಸತತ ಮೂರ್ನಾಲ್ಕು ದಿನ ಇದೇ ಕನಸನ್ನು ಕಂಡಿದ್ದೆ. ಭಯದಿಂದ ತಕ್ಷಣ ಆ ಮನೆ ಬಿಟ್ಟು ದೆಹಲಿಗೆ ಬಂದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮಾದಕ ಲುಕ್​ನಲ್ಲಿ ಮಿಂಚಿದ ನರ್ಗೀಸ್ ಫಖ್ರಿ

ನರ್ಗೀಸ್ ಅವರು ಮನೆ ಬಿಟ್ಟು ಬಂದ ಬಳಿಕ ಅಲ್ಲೊಂದು ವಿಚಿತ್ರ ಘಟನೆ ನಡೆದಿತ್ತಂತೆ. ಈ ಬಗ್ಗೆ ಅವರಿಗೆ ನಂತರ ಮಾಹಿತಿ ಸಿಕ್ಕಿತ್ತು. ನರ್ಗೀಸ್ ಅವರು ಮನೆ ಖಾಲಿ ಮಾಡುವಾಗ ಆರು ಪಕ್ಷಿ ಮರಿಗಳು ಸಾವನ್ನಪ್ಪಿದ್ದವು. ಇದು ಮನೆಯ ವಸ್ತುಗಳನ್ನು ಸಾಗಿಸಲು ಬಂದವರಿಗೆ ಕಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ