‘ಹುಡುಗಿಯರೂ ಅಸಹ್ಯವಾಗಿ ಮುಟ್ಟುತ್ತಾರೆ’: ಕೆಟ್ಟ ಘಟನೆ ವಿವರಿಸಿದ ‘ಹೀರಾಮಂಡಿ’ ನಟಿ

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ’ ವೆಬ್​ ಸಿರೀಸ್​ನಲ್ಲಿ ಸಂಜೀದಾ ಶೇಖ್​ ನಟಿಸಿದ್ದಾರೆ. ಇದರಲ್ಲಿ ಅವರು ವಹೀದಾ ಎಂಬ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಜನರಿಂದ ಮೆಚ್ಚುಗೆ ಸಿಕ್ಕಿದೆ. ಈ ನಡುವೆ ಸಂಜೀದಾ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಜೀವನದಲ್ಲಿ ನಡೆದ ಒಂದು ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.

‘ಹುಡುಗಿಯರೂ ಅಸಹ್ಯವಾಗಿ ಮುಟ್ಟುತ್ತಾರೆ’: ಕೆಟ್ಟ ಘಟನೆ ವಿವರಿಸಿದ ‘ಹೀರಾಮಂಡಿ’ ನಟಿ
ಸಂಜೀದಾ ಶೇಖ್​

Updated on: Jun 02, 2024 | 10:21 PM

ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ‘ಹೀರಾಮಂಡಿ’ (Heeramandi) ವೆಬ್​ ಸರಣಿಯಲ್ಲಿ ಅನೇಕ ಕಲಾವಿದರು ನಟಿಸಿದ್ದಾರೆ. ಪ್ರಮುಖವಾಗಿ ನಟಿಯರಿಗೆ ಈ ವೆಬ್​ ಸಿರೀಸ್​ನಲ್ಲಿ ಪ್ರಾಮುಖ್ಯತೆ ಸಿಕ್ಕಿದೆ. ಒಂದು ಮುಖ್ಯವಾದ ಪಾತ್ರದಲ್ಲಿ ನಟಿ ಸಂಜೀದಾ ಶೇಖ್​ (Sanjeeda Shaikh) ಅವರು ಅಭಿನಯಿಸಿದ್ದಾರೆ. ‘ಹೀರಾಮಂಡಿ’ ಬಿಡುಗಡೆ ಆದ ಬಳಿಕ ಅವರ ಖ್ಯಾತಿ ಹೆಚ್ಚಾಗಿದೆ. ಇತ್ತೀಚೆಗೆ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಂದು ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಯುವತಿಯೊಬ್ಬಳಿಂದ ತಮಗೆ ಕೆಟ್ಟ ಅನುಭವ ಆಗಿತ್ತು ಎಂದು ಸಂಜೀದಾ ಶೇಖ್​ ಹೇಳಿದ್ದಾರೆ.

‘ಹುಡುಗಿಯೊಬ್ಬಳು ತುಂಬ ಅಶ್ಲೀಲವಾಗಿ ನಡೆದುಕೊಂಡ ಘಟನೆ ನನಗೆ ನೆನಪಿದೆ. ನಾನು ಒಂದು ನೈಟ್​ ಕ್ಲಬ್​ನಲ್ಲಿದ್ದೆ. ನನ್ನ ಬಳಿ ಬಂದ ಯುವತಿಯೊಬ್ಬಳು ನನ್ನ ಸ್ತನಗಳನ್ನು ಮುಟ್ಟಿ ಮುಂದಕ್ಕೆ ಸಾಗಿದಳು. ಅದರಿಂದ ನನಗೆ ಶಾಕ್​ ಆಯಿತು. ಏನಾಯಿತು ಎಂಬುದೇ ತಿಳಿಯಲಿಲ್ಲ. ಗಂಡಸರು ಕೆಟ್ಟದಾಗಿ ವರ್ತಿಸುತ್ತಾರೆ ಎಂಬುದನ್ನು ನಾವು ಕೇಳಿದ್ದೇವೆ. ಆ ವಿಚಾರದಲ್ಲಿ ಹುಡುಗಿಯರೂ ಕಡಿಮೆ ಏನಿಲ್ಲ’ ಎಂದು ಸಂಜೀದಾ ಶೇಖ್​ ಹೇಳಿದ್ದಾರೆ.

‘ನೀವು ತಪ್ಪು ಹಾದಿಯಲ್ಲಿ ಹೋಗಿದ್ದರೆ ಅದರಲ್ಲಿ ಗಂಡು-ಹೆಣ್ಣು ಎಂಬ ಭೇದ ಇಲ್ಲ. ತಪ್ಪು ತಪ್ಪೇ. ನಿಮ್ಮ ಜೊತೆ ಮಹಿಳೆ ತಪ್ಪಾಗಿ ನಡೆದುಕೊಂಡಿದ್ದರೂ ಆಕೆಗೆ ಹೇಳಿ’ ಎಂದಿದ್ದಾರೆ ಸಂಜೀದಾ ಶೇಖ್​. ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಸಂಜೀದಾ ಫೇಮಸ್​ ಆಗಿದ್ದಾರೆ. ‘ಹೀರಾಮಂಡಿ’ ವೆಬ್​ ಸರಣಿಯ ಯಶಸ್ಸಿನಿಂದ ಅವರಿಗೆ ಅವಕಾಶಗಳು ಹೆಚ್ಚಾಗಿವೆ.

ಇದನ್ನೂ ಓದಿ: ‘ಹೀರಾಮಂಡಿ’ ಸೂಪರ್​ ಹಿಟ್​ ಆದ್ರೂ ಶರ್ಮಿನ್​ಗೆ ತಪ್ಪಲಿಲ್ಲ ಟ್ರೋಲ್​ ಕಾಟ

2012ರಲ್ಲಿ ಸಂಜೀದಾ ಶೇಖ್​ ಅವರು ಆಮಿರ್​ ಅಲಿ ಜೊತೆ ಮದುವೆ ಆಗಿದ್ದರು. ಆದರೆ 2021ರಲ್ಲಿ ಅವರು ವಿಚ್ಛೇದನ ನೀಡಿದರು. ಬಳಿಕ ನಟ ಹರ್ಷವರ್ಧನ್​ ರಾಣೆ ಜೊತೆ ಸಂಜೀದಾ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗಾಸಿಪ್​ ಹರಡಿತ್ತು. ಇಬ್ಬರೂ ಜೊತೆಯಾಗಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ವರದಿ ಆಗಿತ್ತು. ಡೇಟಿಂಗ್​ ವಿಚಾರವನ್ನು ಹರ್ಷವರ್ಧನ್​ ರಾಣೆ ಅವರು ತಳ್ಳಿ ಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us