ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ (Ram Mandir Inauguration) ಆಗಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ರಾಮ ಮಂದಿರ ಉದ್ಘಾಟನೆಗೂ ಮುನ್ನ ಅನೇಕ ಕಾರ್ಯಕ್ರಮಗಳು ಜರುಗಲಿವೆ. ಈಗಾಗಲೇ ಸಂಭ್ರಮ ಮನೆ ಮಾಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿ ಆಗಲಿದ್ದಾರೆ. ವಿವಿಧ ಭಾಷೆಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಕೆಲವು ಸೆಲೆಬ್ರಿಟಿಗಳು ಅಯೋಧ್ಯೆಯಲ್ಲಿ (Ayodhya) ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಿದ್ದಾರೆ. ಜನವರಿ 17ರಂದು ಹೇಮಾ ಮಾಲಿನಿ (Hema Malini) ಅವರು ರಾಮಾಯಣದ ಕಥೆ ಆಧರಿಸಿದ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ವಿಡಿಯೋ ಮೂಲಕ ಹೇಮಾ ಮಾಲಿನಿ ಅವರು ಈ ಮಾಹಿತಿ ತಿಳಿಸಿದ್ದಾರೆ. ‘ರಾಮ ಮಂದಿರ ನಿರ್ಮಾಣಕ್ಕಾಗಿ ಜನರು ಎಷ್ಟೋ ವರ್ಷಗಳಿಂದ ಕಾದಿದ್ದರು. ರಾಮನ ಪ್ರಾಣ ಪ್ರತಿಷ್ಠಾಪನೆಯ ಸಮಯದಲ್ಲಿ ನಾನು ಮೊದಲ ಬಾರಿಗೆ ಅಯೋಧ್ಯಗೆ ಬರುತ್ತಿದ್ದೇನೆ. ಜನವರಿ 17ರಂದು ನಾನು ನನ್ನ ತಂಡದವರ ಜೊತೆ ಸಂಜೆ 7 ಗಂಟೆಗೆ ಆಯೋಧ್ಯ ಧಾಮದಲ್ಲಿ ರಾಮಾಯಣ ಆಧಾರಿತ ನೃತ್ಯ ಪ್ರದರ್ಶನ ಮಾಡಲಿದ್ದೇನೆ’ ಎಂದು ಹೇಳಿರುವ ಅವರು ಎಲ್ಲರಿಗೂ ಸ್ವಾಗತ ಕೋರಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಎಲ್ಕೆ ಅಡ್ವಾಣಿ
ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲು ಪ್ರಮುಖ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗುತ್ತಿದೆ. ಈಗಾಗಲೇ ಹಲವರ ಮನೆಗೆ ಆಹ್ವಾನ ಪತ್ರಿಕೆ ತಲುಪಿದೆ. ಆಲಿಯಾ ಭಟ್, ರಣಬೀರ್ ಕಪೂರ್, ಸನ್ನಿ ಡಿಯೋಲ್, ಆಯುಷ್ಮಾನ್ ಖುರಾನಾ, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಪ್ರಭಾಸ್, ಯಶ್, ಅನುಪಮ್ ಖೇರ್, ಮಾಧುರಿ ದೀಕ್ಷಿತ್ ಮುಂತಾದವರು ಭಾಗವಹಿಸುವ ನಿರೀಕ್ಷೆ ಇದೆ.
#WATCH | BJP leader Hema Malini says, “…I am coming to Ayodhya for the first time at the time of the ‘pranpratishtha’ of Ram Temple for which people were waiting for years…On January 17, I’ll be presenting a dance drama based on Ramayana in Ayodhya Dham…”
(Source: Hema… pic.twitter.com/TjY34WTFNO
— ANI (@ANI) January 14, 2024
ನಿರ್ದೇಶಕರಾದ ರೋಹಿತ್ ಶೆಟ್ಟಿ, ಸಂಜಯ್ ಲೀಲಾ ಬನ್ಸಾಲಿ, ರಾಜ್ ಕುಮಾರ್ ಹಿರಾನಿ ಮುಂತಾದವರಿಗೆ ಆಹ್ವಾನ ಹೋಗಿದೆ. ದಕ್ಷಿಣದ ಸೆಲೆಬ್ರಿಟಿಗಳಾದ ರಜನಿಕಾಂತ್, ರಿಷಬ್ ಶೆಟ್ಟಿ, ಮೋಹನ್ಲಾಲ್, ಚಿರಂಜೀವಿ, ಧನುಷ್ ಸೇರಿದಂತೆ ಅನೇಕರನ್ನು ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಜನವರಿ 22ಕ್ಕಾಗಿ ಎಲ್ಲರೂ ಕಾದಿದ್ದಾರೆ. ಅಂದಿನ ಸಮಾರಂಭ ಬಹಳ ಅದ್ದೂರಿಯಾಗಿ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ