AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ಯಕ್ಕಂತೂ ಆಗಲ್ಲ ‘ಹೇರಾ ಫೇರಿ 3’; ಅಕ್ಷಯ್ ಕೊಟ್ಟ ಕಾರಣ ಏನು?

ಅಕ್ಷಯ್ ಕುಮಾರ್ 'ಹೇರಾ ಫೇರಿ 3' ಸದ್ಯಕ್ಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಳಂಬಕ್ಕೆ ಪ್ರಮುಖ ಕಾರಣ ರಿವೀಲ್ ಮಾಡಿದ್ದಾರೆ. ಈ ಬದಲಿಗೆ 'ವೆಲ್‌ಕಮ್ 3' ಕಡೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಹಿಂದಿನ ಎರಡು ಭಾಗಗಳು ಭಾರಿ ಯಶಸ್ಸು ಕಂಡಿದ್ದರಿಂದ, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರೂ, ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಸಮಯ ಬೇಕಾಗಬಹುದು.

ಸದ್ಯಕ್ಕಂತೂ ಆಗಲ್ಲ ‘ಹೇರಾ ಫೇರಿ 3’; ಅಕ್ಷಯ್ ಕೊಟ್ಟ ಕಾರಣ ಏನು?
ಹೇರಾ ಫೇರಿ 3
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 18, 2026 | 10:37 AM

Share

ಅಕ್ಷಯ್ ಕುಮಾರ್ (Akshay Kumar) ಅಭಿನಯದ ಸಾಕಷ್ಟು ಸಿನಿಮಾಗಳು ಜನಮನ್ನಣೆ ಪಡೆದಿವೆ. ಅದರಲ್ಲಿ ‘ಹೇರಾ ಫೇರಿ’ ಸರಣಿ ಕೂಡ ಒಂದು. ಈ ಚಿತ್ರ ಶೀಘ್ರವೇ ಸೆಟ್ಟೇರಲಿದೆ ಎಂದು ಹೇಳಲಾಗಿತ್ತು. ಆದರೆ, ಅದರ ಬಗ್ಗೆ ಯಾವುದೇ ಅಪ್​​ಡೇಟ್ ಬಂದಿಲ್ಲ. ಪರೇಶ್ ರಾವಲ್ ಆರಂಭದಲ್ಲಿ ಕಿರಿಕ್ ಮಾಡಿದರು. ನಂತರ ಅವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಆದರೆ ಚಿತ್ರದ ಕೆಲಸ ಇನ್ನೂ ಪ್ರಾರಂಭವಾಗಿಲ್ಲ. ಈಗ, ‘ಹೇರಾ ಫೆರಿ 3’ ಸದ್ಯಕ್ಕೆ ಸೆಟ್ಟೇರಲ್ಲ ಎಂದು ಅಕ್ಷಯ್ ಕುಮಾರ್ ಸ್ವತಃ ದೃಢಪಡಿಸಿದ್ದಾರೆ.

‘ಹೇರಾ ಫೇರಿ 3 ಸಿನಿಮಾ ಈಗ ಆರಂಭ ಆಗುತ್ತಿಲ್ಲ. ಇದರಿಂದ ಸಾಕಷ್ಟು ಜನರಿಗೆ ಬೇಸರವಾಗಿದೆ. ಆದರೆ ಪರವಾಗಿಲ್ಲ, ನಾವು ‘ವೆಲ್‌ಕಮ್ 3’ ಮಾಡುತ್ತೇವೆ’ ಎಂದು ಅಕ್ಷಯ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿದರು. ಚಿತ್ರದ ಬಗ್ಗೆ ವಿಷಯಗಳು ಬಗೆಹರಿದಿವೆಯೇ ಎಂದು ಕೇಳಿದಾಗ, ‘ಈಗ ಏನೋ ನಡೆಯುತ್ತಿದೆ. ಅದನ್ನು ಓಪನ್ ಆಗಿ ಹೇಳಲು ಸಾಧ್ಯವಿಲ್ಲ. ಆದರೆ, ಸಿನಿಮಾ ಸದ್ಯಕ್ಕಂತೂ ಆಗಲ್ಲ’ ಎಂದು ಹೇಳಿದರು ಅಕ್ಷಯ್.

ಮುಂದಿನ ಒಂದು ಅಥವಾ ಎರಡು ವರ್ಷಗಳ ಕಾಲ ಈ ಚಿತ್ರ ನಿರ್ಮಾಣವಾಗುವುದಿಲ್ಲವೇ ಎಂದು ಅಕ್ಷಯ್ ಕುಮಾರ್ ಅವರನ್ನು ಕೇಳಿದಾಗ, ‘ಮುಂದಿನ ವರ್ಷಕ್ಕಂತೂ ಸೆಟ್ಟೇರಲ್ಲ’ ಎಂದು ಉತ್ತರಿಸಿದರು. ಪರೇಶ್ ಅವರ ಜೊತೆ ಮನಸ್ತಾಪ ಪೂರ್ಣಗೊಂಡಿತೇ ಎಂದು ಕೇಳಿದಾಗ ನಾನು, ಸುನೀಲ್ ಶೆಟ್ಟಿ ಹಾಗೂ ಪರೇಶ್ ವೆಲ್ಕಮ್ ಟು ದಿ ಜಂಗಲ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇವೆ ಎಂದಿದ್ದಾರೆ.

‘ಸಂದರ್ಶನಗಳಲ್ಲಿ, ಕ್ಯಾಮೆರಾ ಎದುರು ಚರ್ಚಿಸಲಾಗದ ಕೆಲವು ವಿಷಯಗಳಿವೆ. ಇವು ಒಪ್ಪಂದಗಳು. ಒಂದು ಪ್ರಾಜೆಕ್ಟ್ ತಡ ಆಗಲು ಹಲವು ಕಾರಣ ಇರುತ್ತದೆ. ಸಮಯ ಬಂದಾಗ, ಈ ಚಿತ್ರವನ್ನು ನಿರ್ಮಿಸಲಾಗುವುದು. ಆದರೆ ಅಷ್ಟರಲ್ಲಿ ನನಗೆ ವಯಸ್ಸಾಗಿರಬಾರದು’ ಎಂದಿದ್ದಾರೆ.

ಇದನ್ನೂ ಓದಿ: ಸತತ ಸೋಲಿನ ಸುಳಿಯಲ್ಲಿರುವ ಅಕ್ಷಯ್ ಕುಮಾರ್ ಸಂಭಾವನೆಯಲ್ಲಿ ಭಾರೀ ಕಡಿತ

‘ಹೇರಾ ಫೆರಿ’ ಚಿತ್ರದ ಹಿಂದಿನ ಎರಡೂ ಭಾಗಗಳು ಭಾರಿ ಯಶಸ್ಸನ್ನು ಕಂಡವು. ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದವು ಮತ್ತು ಎರಡೂ ಕಲ್ಟ್ ಕ್ಲಾಸಿಕ್ ಸ್ಥಾನಮಾನವನ್ನು ಹೊಂದಿವೆ. ಅಭಿಮಾನಿಗಳು “ಹೇರಾ ಫೆರಿ 3” ಗಾಗಿ ಕಾತರದಿಂದ ಕಾಯುತ್ತಿದ್ದಾರೆ, ಆದರೆ ಆ ಕಾಯುವಿಕೆ ಎಷ್ಟು ಕಾಲ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us