ನಟಿ ಸನ್ನಿ ಲಿಯೋನ್ (Sunny Leone) ಅವರು ಈ ಮೊದಲು ನೀಲಿ ಚಿತ್ರರಂಗದಲ್ಲಿದ್ದರು. ಅವರ ಮೊದಲ ಹೆಸರು ಕರಂಜೀತ್ ಕೌರ್ ವೋಹ್ರಾ ಎಂದಾಗಿತ್ತು. ಕೆನಡಾದಲ್ಲಿ ವಾಸವಾಗಿದ್ದ ಸಿಖ್ ಕುಟುಂಬದಲ್ಲಿ ಸನ್ನಿ ಜನಿಸಿದರು. ಅವರಿಗೆ ಅಡಲ್ಟ್ ಎಂಟರ್ಟೇನ್ಮೆಂಟ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡೋದು ಅನಿವಾರ್ಯ ಆಯಿತು. 2000ನೇ ಇಸವಿಯಲ್ಲಿ ಸನ್ನಿ ಪೋರ್ನ್ ಇಂಡಸ್ಟ್ರಿಯಲ್ಲಿ ಮಿಂಚಿದರು. ದಶಕಗಳ ಬಳಿಕ ಭಾರತಕ್ಕೆ ಬಂದರು. 2011ರಲ್ಲಿ ಬಿಗ್ ಬಾಸ್ಗೆ ಕಾಲಿಟ್ಟರು. ಬಾಲಿವುಡ್ಗೆ ಬರೋಕೆ ಇದು ಸಹಕಾರಿ ಆಯಿತು. ಹಾಗಾದರೆ ಸನ್ನಿ ಲಿಯೋನ್ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
‘ನಾನು ಅಮೆರಿಕದಲ್ಲಿ ಮ್ಯಾಗಜಿನ್ ಒಂದರಲ್ಲಿ ಸಂದರ್ಶಕಿಯಾಗಿ ಕೆಲಸ ಮಾಡುತ್ತಿದೆ. ‘ನಿಮ್ಮ ಹೆಸರು ಹೇಗಿರಬೇಕು ಎಂದು ನೀವು ಬಯಸುತ್ತೀರಿ’ ಎಂದು ಅವರು ನನನ್ನು ಕೇಳಿದರು. ನನಗೆ ಏನು ಹೇಳಬೇಕು ಎಂದು ಗೊತ್ತಿರಲಿಲ್ಲ. ನಾನು ಅದಕ್ಕೂ ಮೊದಲು ಟ್ಯಾಕ್ಸ್ ಫರ್ಮ್ನಲ್ಲಿ, ಎಚ್ಆರ್ ವಿಭಾಗದಲ್ಲಿ ಕೆಲಸ ಮಾಡಿದ್ದೆ. ಹೀಗಾಗಿ, ಏನು ಹೇಳಬೇಕು ಎಂಬುದೇ ಗೊತ್ತಾಗಿರಲಿಲ್ಲ’ ಎಂದಿದ್ದಾರೆ ಸನ್ನಿ.
‘ನನ್ನ ಹೆಸರನ್ನು ಸನ್ನಿ ಎಂದು ನೀವು ಬರೆದುಕೊಳ್ಳಿ. ಕೊನೆಯ ಹೆಸರನ್ನು ನೀವೆ ಆಯ್ಕೆ ಮಾಡಿಕೊಳ್ಳಿ ಎಂದೆ. ಸನ್ನಿ ಅನ್ನೋದು ನನ್ನ ಸಹೋದರನ ನಿಕ್ನೇಮ್ ಆಗಿತ್ತು. ನನ್ನ ಸಹೋದರನ ಹೆಸರು ಸಂದೀಪ್ ಸಿಂಗ್. ನಾವು ಅವರನ್ನು ಸನ್ನಿ ಎಂದು ಕರೆಯುತ್ತಿದ್ದೆವು. ನನ್ನ ಹೆಸರನ್ನು ಸನ್ನಿ ಎಂದು ಮಾಡಿಕೊಂಡಿದ್ದು ನನ್ನ ಅಮ್ಮನಿಗೆ ಇಷ್ಟ ಆಗಿರಲಿಲ್ಲ’ ಎಂದಿದ್ದಾರೆ ಸನ್ನಿ ಲಿಯೋನ್.
ಇದನ್ನೂ ಓದಿ: ಪವನ್ ಕಲ್ಯಾಣ್-ರೋಜಾ ಜಟಾಪಟಿ ಮಧ್ಯೆ ಸನ್ನಿ ಲಿಯೋನ್ ಎಂಟ್ರಿ
‘ಮ್ಯಾಗಜಿನ್ ಸಂಸ್ಥೆಗೆ ಇಟಲಿಯವರು ಮಾಲೀಕರಾಗಿದ್ದರು. ಲಿಯೋನ್ ಎಂಬುದನ್ನು ನೀಡಿದ್ದು ಅವರೇ. ನಾನು ಅದನ್ನು ಹಾಗೆಯೇ ಇಟ್ಟುಕೊಂಡೆ. ಆಗ ನನಗೆ 19 ವರ್ಷ ಮಾತ್ರ’ ಎಂದಿದ್ದಾರೆ ಸನ್ನಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:30 am, Fri, 21 July 23