ಶಾರುಖ್ ತಲೆಯ ಮೇಲಿರುವ ಹಚ್ಚೆಯಲ್ಲಿ ಬರೆದಿರುವುದು ಏನು? ಕೊನೆಗೂ ರಿವೀಲ್ ಆಯ್ತು ರಹಸ್ಯ

‘ಜವಾನ್​’ ಪ್ರಿವ್ಯೂನಲ್ಲಿ ಶಾರುಖ್ ಖಾನ್ ಅವರು ಮೆಟ್ರೋ ಒಳಗೆ ಎಂಟ್ರಿ ಕೊಡುತ್ತಾರೆ. ಈ ವೇಳೆ ಅವರು ಬಾಲ್ಡ್​ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ.

ಶಾರುಖ್ ತಲೆಯ ಮೇಲಿರುವ ಹಚ್ಚೆಯಲ್ಲಿ ಬರೆದಿರುವುದು ಏನು? ಕೊನೆಗೂ ರಿವೀಲ್ ಆಯ್ತು ರಹಸ್ಯ
ಶಾರುಖ್ ಖಾನ್

Updated on: Jul 15, 2023 | 1:30 PM

ಇತ್ತೀಚೆಗೆ ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ ಸಿನಿಮಾದ ಪ್ರಿವ್ಯೂ ವೀಡಿಯೋ ಬಿಡುಗಡೆ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೂ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಈ ವಿಡಿಯೋದಲ್ಲಿ ಶಾರುಖ್​ ಖಾನ್ ಅವರು ಹಲವು ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬೋಳು ತಲೆ ಹೆಚ್ಚು ಗಮನ ಸೆಳೆದಿದೆ. ಬಾಲ್ಡ್​ ಲುಕ್ ಅನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಇಷ್ಟೇ ಅಲ್ಲ, ಅವರ ತಲೆಯ ಮೇಲೆ ಬರೆದ ಒಂದು ವಿಚಾರ ಎಲ್ಲರ ಗಮನ ಸೆಳೆದಿದೆ.

‘ಜವಾನ್​’ ಪ್ರಿವ್ಯೂನಲ್ಲಿ ಶಾರುಖ್ ಖಾನ್ ಅವರು ಮೆಟ್ರೋ ಒಳಗೆ ಎಂಟ್ರಿ ಕೊಡುತ್ತಾರೆ. ಈ ವೇಳೆ ಅವರು ಬಾಲ್ಡ್​ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಎಡ ಕಿವಿಯ ಮೇಲ್ಭಾಗದಲ್ಲಿ ಏನನ್ನೋ ಬರೆದುಕೊಂಡಿರುವುದು ಕಂಡು ಬಂದಿದೆ. ಹಚ್ಚೆಯಲ್ಲಿ ಏನು ಬರೆಯಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದರೆ ಈಗ ಆ ವಿಚಾರ ಗೊತ್ತಾಗಿದೆ. ಮನೋಬಾಲಾ ವಿಜಯಬಾಲನ್ ಟ್ವಿಟರ್‌ನಲ್ಲಿ ಶಾರುಖ್ ಖಾನ್ ಅವರ ಫೋಟೋವನ್ನು ಹಂಚಿಕೊಂಡಿದ್ದು, ಹಚ್ಚೆಯಲ್ಲೇನಿದೆ ಎಂಬುದನ್ನು ವಿವರಿಸಿದ್ದಾರೆ.

ಶಾರುಖ್ ಟ್ಯಾಟೂದಲ್ಲಿ ‘ಮಾ ಜಗತ್ ಜನನಿ’ ಎಂದು ಬರೆದುಕೊಂಡಿದ್ದಾರೆ. ಅಂದರೆ ‘ಜಗದ ತಾಯಿ’ ಎಂದರ್ಥ. ಪ್ರಿವ್ಯೂ ವೀಡಿಯೋ ನೋಡಿದ ಅನೇಕರು ಶಾರುಖ್ ಅವರ ಹಚ್ಚೆಗೂ ಸಿನಿಮಾದ ಕಥೆಗೂ ವಿಶೇಷ ಸಂಬಂಧ ಇರಬಹುದು ಎಂದು ಹೇಳುತ್ತಿದ್ದಾರೆ. ಆ ನಂಟು ಏನೆಂಬುದು ಚಿತ್ರ ಬಿಡುಗಡೆಯ ನಂತರವೇ ಗೊತ್ತಾಗಲಿದೆ.

ಪ್ರಿವ್ಯೂ ವಿಡಿಯೋದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರದ ತಾಯಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಈ ಟ್ಯಾಟೂಗೂ ದೀಪಿಕಾ ಪಾತ್ರಕ್ಕೂ ಏನಾದರೂ ನಂಟಿದೆಯೇ ಎನ್ನುವ ಪ್ರಶ್ನೆ ಮೂಡಿದೆ.


ಇದನ್ನೂ ಓದಿ: ‘ಶಾರುಖ್
ಜೊತೆ ಮತ್ತೆ ಸಿನಿಮಾ ಮಾಡಬೇಕಿದೆ’; ‘ಜವಾನ್’ ಪ್ರಿವ್ಯೂ ನೋಡಿ ಹೇಳಿಕೆ ನೀಡಿದ ಸ್ಟಾರ್ ನಿರ್ದೇಶಕ

‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಮೊದಲು ಜೂನ್ 2 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸಿನಿಮಾ ಕೆಲಸ ಪೂರ್ಣಗೊಳ್ಳದ ಕಾರಣ ರಿಲೀಸ್ ದಿನಾಂಕ ಬದಲಿಸಲಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಾರುಖ್ ಜೊತೆಗೆ ದೀಪಿಕಾ, ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ