‘ಶಾರುಖ್ ಜೊತೆ ಮತ್ತೆ ಸಿನಿಮಾ ಮಾಡಬೇಕಿದೆ’; ‘ಜವಾನ್’ ಪ್ರಿವ್ಯೂ ನೋಡಿ ಹೇಳಿಕೆ ನೀಡಿದ ಸ್ಟಾರ್ ನಿರ್ದೇಶಕ

‘ಪಠಾಣ್’ ಚಿತ್ರದಿಂದ ಅವರು ಗೆದ್ದು ಬೀಗಿದ್ದಾರೆ. ಅವರಿಗೆ ವರ್ಷ ಕಳೆದಂತೆ ಮಾರುಕಟ್ಟೆ ಹಿರಿದಾಗುತ್ತಿದೆ. ಈಗ ‘ಜವಾನ್’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಅವರು ರೆಡಿ ಆಗಿದ್ದಾರೆ.

‘ಶಾರುಖ್ ಜೊತೆ ಮತ್ತೆ ಸಿನಿಮಾ ಮಾಡಬೇಕಿದೆ’; ‘ಜವಾನ್’ ಪ್ರಿವ್ಯೂ ನೋಡಿ ಹೇಳಿಕೆ ನೀಡಿದ ಸ್ಟಾರ್ ನಿರ್ದೇಶಕ
ಶಾರುಖ್​ ಖಾನ್​
Follow us
ರಾಜೇಶ್ ದುಗ್ಗುಮನೆ
|

Updated on: Jul 15, 2023 | 10:58 AM

ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದರಿಂದ ಶಾರುಖ್ ಖಾನ್ (Shah Rukh Khan) ಅವರಿಗೆ ಸ್ವಲ್ಪ ಹಿನ್ನಡೆ ಆಯಿತು. ಆದರೆ, ಈಗ ಅವರು ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ‘ಪಠಾಣ್’ ಚಿತ್ರದಿಂದ ಅವರು ಗೆದ್ದು ಬೀಗಿದ್ದಾರೆ. ಅವರಿಗೆ ವರ್ಷ ಕಳೆದಂತೆ ಮಾರುಕಟ್ಟೆ ಹಿರಿದಾಗುತ್ತಿದೆ. ಈಗ ‘ಜವಾನ್’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಅವರು ರೆಡಿ ಆಗಿದ್ದಾರೆ. ಈಗ ಅವರ ಜೊತೆ ಮತ್ತೆ ಕೆಲಸ ಮಾಡಬೇಕು ಎಂದು ಬಾಲಿವುಡ್​​ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

ರೋಹಿತ್ ಶೆಟ್ಟಿ ಅವರು ‘ಗೋಲ್​ಮಾಲ್​’, ‘ಸಿಂಘಂ’, ‘ಸೂರ್ಯವಂಶಿ’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿ ಫೇಮಸ್ ಆಗಿದ್ದಾರೆ. ಅವರ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇರುತ್ತದೆ. ಶಾರುಖ್ ಖಾನ್ ನಟನೆಯ ‘ಚೆನ್ನೈ ಎಕ್ಸ್​ಪ್ರೆಸ್’ ಹಾಗೂ ‘ದಿಲ್​ವಾಲೆ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ರೋಹಿತ್ ಅವರಿಗೆ ತಮಿಳು ನಿರ್ದೇಶಕ ಅಟ್ಲಿ ಅವರ ಕೆಲಸದ ಬಗ್ಗೆ ಖುಷಿ ಇದೆ. ‘ಜವಾನ್’ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ನ್ಯೂಸ್​18 ಇಂಗ್ಲಿಷ್​ಗೆ ನೀಡಿದ ಸಂದರ್ಶನದಲ್ಲಿ ರೋಹಿತ್ ಶೆಟ್ಟಿ ಮಾತನಾಡಿದ್ದಾರೆ. ‘ನನಗೆ ಜವಾನ್ ಪ್ರೋಮೋ ಇಷ್ಟವಾಗಿದೆ. ನನಗೆ ಅಟ್ಲಿ ಅವರ ಕೆಲಸ ಇಷ್ಟವಾಗಿದೆ. ಅಟ್ಲಿ ಅವರ ಎಲ್ಲಾ ಚಿತ್ರಗಳನ್ನೂ ನೋಡುತ್ತೇನೆ. ಜವಾನ್ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಗಲಿದೆ’ ಎಂದು ರೋಹಿತ್ ಶೆಟ್ಟಿ ಹೇಳಿದ್ದಾರೆ.

ಶಾರುಖ್ ಖಾನ್ ಜೊತೆ ಮತ್ತೆ ಕೆಲಸ ಮಾಡುವ ಬಯಕೆಯನ್ನು ರೋಹಿತ್ ಶೆಟ್ಟಿ ಹೊಂದಿದ್ದಾರೆ. ‘ನಾನು ಅವರ ಜೊತೆ ಕೆಲಸ ಮಾಡೋಕೆ ಸಿದ್ಧನಿದ್ದೇನೆ. ಒಳ್ಳೆಯ ಸ್ಕ್ರಿಪ್ಟ್ ಬಂದರೆ ನಾನು ಅವರ ಜೊತೆ ಸಿನಿಮಾ ಮಾಡುತ್ತೇನೆ. ನನಗೆ ಜವಾನ್ ಪ್ರೋಮೋ ಇಷ್ಟವಾಗಿದೆ. ಅಟ್ಲಿ ಅವರ ಬಗ್ಗೆ ಎಷ್ಟು ಅಭಿಮಾನ ಇದೆ ಎಂಬುದು ಅವರಿಗೂ ಗೊತ್ತಿದೆ’ ಎಂದು ಹೇಳಿದ್ದಾರೆ ರೋಹಿತ್ ಶೆಟ್ಟಿ.

ಇದನ್ನೂ ಓದಿ: ಸಿಂಗಂ ಅಗೇನ್; ಚಿತ್ರಕ್ಕೆ ಮತ್ತೆ ಒಂದಾಗಲಿದ್ದಾರೆ ನಟ ಅಜಯ್​ ದೇವಗನ್ ಮತ್ತು ರೋಹಿತ್ ಶೆಟ್ಟಿ 

ರೋಹಿತ್ ಶೆಟ್ಟಿ ಅವರು ಸದ್ಯ ಒಟಿಟಿ ಅಂಗಳಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಇಂಡಿಯನ್ ಪೊಲೀಸ್ ಫೋರ್ಸ್’ ಸೀರಿಸ್​ಗೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ