ಸೆಟ್ಟೇರುತ್ತಿಲ್ಲ ಬನ್ಸಾಲಿ ನಿರ್ದೇಶನದ ಈ ಸಿನಿಮಾ; ಇದಕ್ಕೆ ಎದುರಾಗುತ್ತಲೇ ಇದೆ ಅಡೆತಡೆ

|

Updated on: Jan 18, 2024 | 11:14 AM

‘ಬೈಜು ಬವ್ರಾ’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ಮೀರಲಿದೆ ಎಂದು ಅಂದಾಜಿಸಲಾಯಿತು. ಈ ಕಾರಣಕ್ಕೆ ನಿರ್ಮಾಪಕರು ಈ ಬಗ್ಗೆ ಆಸಕ್ತಿ ತೋರಿಸಿಲ್ಲ.

ಸೆಟ್ಟೇರುತ್ತಿಲ್ಲ ಬನ್ಸಾಲಿ ನಿರ್ದೇಶನದ ಈ ಸಿನಿಮಾ; ಇದಕ್ಕೆ ಎದುರಾಗುತ್ತಲೇ ಇದೆ ಅಡೆತಡೆ
ಬನ್ಸಾಲಿ
Follow us on

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರು ನಿರ್ದೇಶನ ಮಾಡಿದರೆ ಆ ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಅನೇಕರದ್ದು. ಚಿತ್ರದ ಕಥೆ, ಅದರ ನಿರೂಪಣೆ, ಅದಕ್ಕೆ ಪೂರಕವಾದ ಸೆಟ್ ಹಾಗೂ ಸಂಗೀತ ಎಲ್ಲವೂ ಹದವಾಗಿ ಬೆರೆತು ಒಂದೊಳ್ಳೆಯ ಪ್ರಾಡಕ್ಟ್ ತಯಾರಾಗುತ್ತದೆ. ಈ ಕಾರಣಕ್ಕೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡೋಕೆ ಅನೇಕ ನಿರ್ಮಾಪಕರು ಉತ್ಸಾಹ ತೋರುತ್ತಾರೆ. ಆದರೆ, ಅವರ ಕನಸಿನ ಪ್ರಾಜೆಕ್ಟ್​ನ ಆರಂಭಿಸಲು ಈವರೆಗೂ ಸಾಧ್ಯವಾಗಿಲ್ಲ. ಇದಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿವೆ.

‘ಬೈಜು ಬವ್ರಾ’ ಹೆಸರಿನ ಸಿನಿಮಾ ಮಾಡಲು ಸಂಜಯ್ ಲೀಲಾ ಬನ್ಸಾಲಿ ನಿರ್ಧರಿಸಿದ್ದರು. ಕೊವಿಡ್​ಗೂ ಮೊದಲು ಈ ಬಗ್ಗೆ ಘೋಷಣೆ ಮಾಡಿದ್ದರು. ಈ ಚಿತ್ರಕ್ಕೆ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅವರನ್ನು ಆಯ್ಕೆ ಮಾಡಿಕೊಂಡರು. ಡಕಾಯಿತ್ ಪಾತ್ರದಲ್ಲಿ ನಟಿಸೋಕೆ ದೀಪಿಕಾ ಪಡುಕೋಣೆಗೆ ಆಫರ್ ಹೋಯಿತು. ಇನ್ನೇನು ಸಿನಿಮಾ ಸೆಟ್ಟೇರಿತು ಎನ್ನುವಾಗ ಕೊರೊನಾ ಆರಂಭ ಆಯಿತು.

ಕೊರೊನಾ ಮುಗಿದ ಬಳಿಕ ಮತ್ತೆ ಪಾತ್ರವರ್ಗದ ಆಯ್ಕೆಯಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರತರಾದರು. ಕಿಯಾರಾ ಅಡ್ವಾಣಿ ಹಾಗೂ ನಯನತಾರಾ ಅವರನ್ನು ಚಿತ್ರ ತಂಡಕ್ಕೆ ಸೇರಿಸಿಕೊಳ್ಳೋಕೆ ಬನ್ಸಾಲಿ ಮುಂದಾದರು. ದಿನ ಕಳೆದಂತೆ ಚಿತ್ರದ ಬಜೆಟ್ ಹೆಚ್ಚುತ್ತಲೇ ಹೋಯಿತು. ಇದರಿಂದ ನಿರ್ಮಾಣ ಸಂಸ್ಥೆಯವರು ಚಿತ್ರವನ್ನು ಹೋಲ್ಡ್ ಮಾಡುವಂತೆ ಸೂಚಿಸಿದರು ಎನ್ನಲಾಗಿದೆ.

‘ಬೈಜು ಬವ್ರಾ’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ಮೀರಲಿದೆ ಎಂದು ಅಂದಾಜಿಸಲಾಯಿತು. ಈ ಕಾರಣಕ್ಕೆ ನಿರ್ಮಾಪಕರು ಈ ಬಗ್ಗೆ ಆಸಕ್ತಿ ತೋರಿಸಿಲ್ಲ. ‘ಬೈಜು ಬವ್ರಾ’ ಸಿನಿಮಾ ಮ್ಯೂಸಿಕಲ್ ರಿವೇಂಜ್ ಕಥೆಯನ್ನು ಹೊಂದಿದೆ ಎನ್ನಲಾಗಿದೆ. ನಿರ್ಮಾಣ ಸಂಸ್ಥೆಯ ಒಪ್ಪಿಗೆ ಸಿಗದ ಕಾರಣ ಸಂಜಯ್ ಲೀಲಾ ಬನ್ಸಾಲಿಗೆ ಸಿನಿಮಾದ ಕೆಲಸ ಮುಂದುವರಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಸ್ಮಶಾನವಾದ ಮದುವೆ ಮನೆ; ರಣವೀರ್ ಸಿಂಗ್ ಸಿನಿಮಾದಲ್ಲಿ ಬಳಕೆ ಆಗಿದ್ದ ಮನೆಯಲ್ಲಿ ಶೂಟೌಟ್​

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್ ಈ ಮೊದಲು ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಿದ್ದರು. ಬನ್ಸಾಲಿ ಮೇಲಿನ ಗೌರವಕ್ಕೆ ಅವರು ಕಡಿಮೆ ಸಂಭಾವನೆ ಪಡೆಯಲು ಒಪ್ಪಿದ್ದರು. ಆದರೂ ಚಿತ್ರದ ಬಜೆಟ್ 350 ಕೋಟಿ ರೂಪಾಯಿ ಮೀರಿದೆ. ಬಜೆಟ್​ನಲ್ಲಿ ರಾಜಿ ಮಾಡಿಕೊಳ್ಳಲು ಬನ್ಸಾಲಿ ರೆಡಿ ಇಲ್ಲ. ಇಷ್ಟು ದೊಡ್ಡ ಬಜೆಟ್​ನಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:10 am, Thu, 18 January 24