ಬಾಲಿವುಡ್ ಮಂದಿಯನ್ನು ಬೆರಗುಗೊಳಿಸಿದ ‘12th ಫೇಲ್’; ಕರಣ್ ಕಡೆಯಿಂದಲೂ ಚಪ್ಪಾಳೆ
‘12th ಫೇಲ್’ ಸಿನಿಮಾದ ಯಶಸ್ಸಿನ ಬಳಿಕ ವಿಕ್ರಾಂತ್ ಮಾಸ್ಸಿ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿದೆ. ಅವರಿಗೆ ಜೋಡಿಯಾಗಿ ನಟಿಸಿದ ಮೇಧಾ ಶಂಕರ್ ಕೂಡ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಬಡ ಹುಡುಗನೊಬ್ಬ ಐಪಿಎಸ್ ಅಧಿಕಾರಿ ಆಗುವ ನೈಜ ಕಥೆಯನ್ನು ಆಧರಿಸಿ ‘12th ಫೇಲ್’ ಸಿನಿಮಾ ಮೂಡಿಬಂದಿದೆ.
ಪ್ರತಿಭಾವಂತ ನಟ ವಿಕ್ರಾಂತ್ ಮಾಸ್ಸಿ (Vikrant Massey) ಅವರು ‘12th ಫೇಲ್’ ಸಿನಿಮಾ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅನೇಕ ವರ್ಷಗಳಿಂದ ಅವರು ಬಾಲಿವುಡ್ನಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಈ ಮಟ್ಟದ ಜನಪ್ರಿಯತೆ ಅವರಿಗೆ ಈ ಮೊದಲು ಸಿಕ್ಕಿರಲಿಲ್ಲ. ‘12th ಫೇಲ್’ ಸಿನಿಮಾ (12th Fail) ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿದ್ದೂ ಅಲ್ಲದೇ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ. ಖ್ಯಾತ ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಈ ಸಿನಿಮಾವನ್ನು ನೋಡಿ ಹೊಗಳಿದ್ದಾರೆ. ರಿಯಲ್ ಲೈಫ್ ಕಹಾನಿ ಈ ಸಿನಿಮಾದಲ್ಲಿದೆ. ಮೇಕಿಂಗ್, ಅಭಿನಯ ಮುಂತಾದ ವಿಚಾರಗಳಲ್ಲಿ ಈ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಇತ್ತೀಚೆಗೆ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಕರಣ್ ಜೋಹರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಯಾವ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಬೇಕು? ಯಾವ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಾಣಬೇಕು ಎಂಬುದಕ್ಕೆ ಯಾವುದಾದರೂ ಸೂತ್ರ ಇದೆಯೇ ಎಂದು ಕರಣ್ ಜೋಹರ್ ಅವರಿಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸುವಾಗ ‘12th ಫೇಲ್’ ಸಿನಿಮಾ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ಒಟಿಟಿಗೆ ಬಂದ್ಮೇಲೂ ಚಿತ್ರಮಂದಿರದಲ್ಲಿ ಕೋಟಿ ರೂಪಾಯಿ ಕಲೆಕ್ಷನ್; ಇದು ‘12th ಫೇಲ್’ ತಾಕತ್ತು
‘ಆ ರೀತಿ ನಿಮಯ ಇಲ್ಲ. 12th ಫೇಲ್ ಚಿತ್ರವೇ ಅದಕ್ಕೆ ಉದಾಹರಣೆ. ಇದು ಒಟಿಟಿಗೆ ಸರಿಯಾಗುವಂತಹ ಸಿನಿಮಾ ಎಂದು ಕೆಲವರು ಹೇಳಬಹುದು. ಆದರೆ ಆ ಸಿನಿಮಾ ಚಿತ್ರಮಂದಿರದಲ್ಲೂ ಉತ್ತಮವಾಗಿ ಪ್ರದರ್ಶನ ಕಂಡಿದೆ. ಹಿರಿಯ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ತುಂಬ ಚೆನ್ನಾಗಿ ಈ ಸಿನಿಮಾ ಮಾಡಿದ್ದಾರೆ’ ಎಂದು ಕರಣ್ ಜೋಹರ್ ಹೇಳಿದ್ದಾರೆ. ‘ಡಿಸ್ನಿ ಪ್ಲಸ್ ಹಾಟ್ಸ್ಟಾರ್’ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.
ಇದನ್ನೂ ಓದಿ: ‘12th ಫೇಲ್’ ಚಿತ್ರದಿಂದ ಹೆಚ್ಚಿತು ವಿಕ್ರಾಂತ್ ಮಾಸ್ಸಿ ಜನಪ್ರಿಯತೆ
‘12th ಫೇಲ್’ ಸಿನಿಮಾದ ಯಶಸ್ಸಿನ ಬಳಿಕ ವಿಕ್ರಾಂತ್ ಮಾಸ್ಸಿ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿದೆ. ಅವರಿಗೆ ಜೋಡಿಯಾಗಿ ನಟಿಸಿದ ಮೇಧಾ ಶಂಕರ್ ಕೂಡ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಬಹಳ ಹಿಂದುಳಿದ ಪ್ರದೇಶದಿಂದ ಬಂದ ಬಡ ಹುಡುಗನೊಬ್ಬ ಐಪಿಎಸ್ ಅಧಿಕಾರಿ ಆಗುವ ನೈಜ ಕಥೆಯನ್ನು ಆಧರಿಸಿ ‘12th ಫೇಲ್’ ಸಿನಿಮಾ ಮೂಡಿಬಂದಿದೆ. ಅನೇಕರಿಗೆ ಈ ಸಿನಿಮಾ ಸ್ಫೂರ್ತಿ ಆಗುವಂತಿದೆ. ಹೃತಿಕ್ ರೋಷನ್, ಕಂಗನಾ ರಣಾವತ್, ಜಾನ್ವಿ ಕಪೂರ್ ಮುಂತಾದ ಸೆಲೆಬ್ರಿಟಿಗಳು ಸಹ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ