ಒಟಿಟಿಗೆ ಬಂದ್ಮೇಲೂ ಚಿತ್ರಮಂದಿರದಲ್ಲಿ ಕೋಟಿ ರೂಪಾಯಿ ಕಲೆಕ್ಷನ್; ಇದು ‘12th ಫೇಲ್’ ತಾಕತ್ತು
ವಿಧು ವಿನೋದ್ ಚೋಪ್ರಾ ಅವರು ‘12th ಫೇಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ವಿಕ್ರಾಂತ್ ಮಾಸ್ಸಿ ಅವರಿಗೆ ಜೋಡಿಯಾಗಿ ಮೇಧಾ ಶಂಕರ್ ನಟಿಸಿದ್ದಾರೆ. ಒಟಿಟಿಯಲ್ಲಿ ತೆರೆಕಂಡ ನಂತರ ಈ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಅಂದಾಜು ಒಂದೂವರೆ ಕೋಟಿ ರೂಪಾಯಿ ಕಮಾಯಿ ಆಗಿದೆ. ಒಟ್ಟು ಕಲೆಕ್ಷನ್ 54.18 ಕೋಟಿ ರೂಪಾಯಿ ದಾಟಿದೆ.
ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ‘12th ಫೇಲ್’ ಸಿನಿಮಾ (12th Fail Movie) ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದಲ್ಲಿ ನೈಜ ಘಟನೆ ಆಧಾರಿತ ಕಥೆ ಇದೆ. ಬಡವರ ಕುಟುಂಬದಲ್ಲಿ ಹುಟ್ಟಿದ, ಗ್ರಾಮೀಣ ಪ್ರದೇಶದ ಯುವಕನೊಬ್ಬ ಕಷ್ಟಪಟ್ಟು ಐಪಿಎಸ್ ಅಧಿಕಾರಿ ಆಗುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಚಿತ್ರಮಂದಿರದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ (12th Fail Collection) ಮಾಡಿದ ಈ ಸಿನಿಮಾ ಈಗಾಗಲೇ ಒಟಿಟಿಗೆ ಬಂದಿದೆ. ಹಾಗಿದ್ದರೂ ಕೂಡ ಚಿತ್ರಮಂದಿರದಲ್ಲಿ ಈ ಚಿತ್ರದ ಕಲೆಕ್ಷನ್ ನಿಂತಿಲ್ಲ ಎಂಬುದು ವಿಶೇಷ. ‘12th ಫೇಲ್’ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸಿ (Vikrant Massey) ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.
ಚಿತ್ರಮಂದಿರದಲ್ಲಿ ಹವಾ ಕಡಿಮೆ ಆದ ಬಳಿಕ ಸಿನಿಮಾಗಳು ಒಟಿಟಿಗೆ ಬರುತ್ತವೆ. ಆದರೆ ಕೆಲವು ಚಿತ್ರಗಳು ಥಿಯೇಟರ್ನಲ್ಲಿ ಇರುವಾಗಲೇ ಒಟಿಟಿಗೆ ಕಾಲಿಡುತ್ತವೆ. ಸಾಮಾನ್ಯವಾಗಿ ಒಟಿಟಿಗೆ ಬಂದ ಬಳಿಕ ಆ ಸಿನಿಮಾವನ್ನು ಯಾರೂ ಸಹ ಮತ್ತೆ ಚಿತ್ರಮಂದಿರದಲ್ಲಿ ನೋಡುವುದಿಲ್ಲ. ಆದರೆ ‘12th ಫೇಲ್’ ಚಿತ್ರದ ವಿಚಾರದಲ್ಲಿ ಇದು ಸುಳ್ಳಾಗಿದೆ. ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಒಟಿಟಿಯಲ್ಲಿ ರಿಲೀಸ್ ಆದ ನಂತರ ಕೂಡ ಚಿತ್ರಮಂದಿರಗಳಲ್ಲಿ ಜನರು ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಖ್ಯಾತ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ‘12th ಫೇಲ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಕ್ರಾಂತ್ ಮಾಸ್ಸಿ ಅವರಿಗೆ ಜೋಡಿಯಾಗಿ ಮೇಧಾ ಶಂಕರ್ ನಟಿಸಿದ್ದಾರೆ. ಇವರಿಬ್ಬರ ನಟನೆಗೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಒಟಿಟಿಯಲ್ಲಿ ತೆರೆಕಂಡ ನಂತರ ಈ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಅಂದಾಜು ಒಂದೂವರೆ ಕೋಟಿ ರೂಪಾಯಿ ಕಮಾಯಿ ಆಗಿದೆ. ಚಿತ್ರದ ಒಟ್ಟು ಕಲೆಕ್ಷನ್ 54.18 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: 12 Fail Movie: ಆಸ್ಕರ್ ಪ್ರಶಸ್ತಿ ರೇಸ್ನಲ್ಲಿ ‘12th ಫೇಲ್’ ಸಿನಿಮಾ; ಕನ್ನಡದಲ್ಲೂ ಬಿಡುಗಡೆ ಆದ ಈ ಚಿತ್ರದ ವಿಶೇಷತೆ ಏನು?
ಒಟಿಟಿಯಲ್ಲಿ ‘12th ಫೇಲ್’ ಸಿನಿಮಾ ನೋಡಿದ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಟ ಹೃತಿಕ್ ರೋಷನ್ ಅವರು ಈ ಚಿತ್ರದ ಬಗ್ಗೆ ಪೋಸ್ಟ್ ಮಾಡಿದ್ದರು. ಈ ಸಿನಿಮಾದಲ್ಲಿನ ಎಲ್ಲರ ನಟನೆ ಅವರಿಗೆ ಇಷ್ಟ ಆಗಿದೆ. ಸೌಂಡ್ ಬಗ್ಗೆ ವಿಶೇಷವಾಗಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಮೇಕಿಂಗ್ ವಿಚಾರದಲ್ಲಿ ಇದೊಂದು ಮಾಸ್ಟರ್ ಕ್ಲಾಸ್ ಸಿನಿಮಾ ಎಂದು ಅವರು ಹೊಗಳಿದ್ದಾರೆ. ಕತ್ರಿನಾ ಕೈಫ್, ಅನುರಾಗ್ ಕಶ್ಯಪ್, ಜಾನ್ವಿ ಕಪೂರ್, ಕಂಗನಾ ರಣಾವತ್ ಮುಂತಾದವರಿಗೂ ಈ ಸಿನಿಮಾ ಇಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ